ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅನ್ರಿಚ್ ನಾರ್ಟ್ಜ್ ಐಪಿಎಲ್ ಇತಿಹಾಸದಲ್ಲೇ ವೇಗದ ಎಸೆತವನ್ನು ಎಸೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ನಡೆಸಿದ ದಕ್ಷಿಣ ಆಫ್ರಿಕಾದ ವೇಗಿ ನಾರ್ಟ್ಜ್ ಮೂರನೇ ಓವರ್ನ ಮೊದಲ ಎಸೆತವನ್ನು148.2 ಕಿ.ಮೀ. ವೇಗದಲ್ಲಿ ಎಸೆದರು. ಈ ಎಸೆತದಲ್ಲಿ ಬಟ್ಲರ್ ಸಿಕ್ಸರ್ ಸಿಡಿಸಿದ್ರು. ನಂತರ ಕ್ರಮವಾಗಿ 152.3 ಕಿ.ಮೀ., 152.1 ಕಿ.ಮೀ., 146.4 ಕಿ.ಮೀ. ವೇಗದಲ್ಲಿ ಚೆಂಡು ಎಸೆದರು. 156.2 ಕಿ.ಮೀ. ವೇಗದಲ್ಲಿ ಎಸೆದ ಐದನೇ ಎಸೆತದಲ್ಲಿ ಬಟ್ಲರ್ ಬೌಂಡರಿ ಸಿಡಿಸಿದ್ರು. ಇದು ಐಪಿಎಲ್‌ನಲ್ಲಿ ಸಾರ್ವಕಾಲಿಕ ವೇಗದ ಎಸೆತ ಎಂಬ ದಾಖಲೆ ನಿರ್ಮಿಸಿದೆ.
-
Anrich Nortje is adjudged Man of the Match for his brilliant bowling figures of 2/33.#Dream11IPL pic.twitter.com/8DFGL5NpzC
— IndianPremierLeague (@IPL) October 14, 2020 " class="align-text-top noRightClick twitterSection" data="
">Anrich Nortje is adjudged Man of the Match for his brilliant bowling figures of 2/33.#Dream11IPL pic.twitter.com/8DFGL5NpzC
— IndianPremierLeague (@IPL) October 14, 2020Anrich Nortje is adjudged Man of the Match for his brilliant bowling figures of 2/33.#Dream11IPL pic.twitter.com/8DFGL5NpzC
— IndianPremierLeague (@IPL) October 14, 2020
2012ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಡೇಲ್ ಸ್ಟೈನ್ 154.4 ಕಿ.ಮೀ. ವೇಗದಲ್ಲಿ ಎಸೆದಿದ್ದ ಚೆಂಡು ಐಪಿಎಲ್ ಇತಿಹಾಸದಲ್ಲಿ ವೇಗದ ಎಸೆತ ಎಂಬ ದಾಖಲೆ ಹೊಂದಿತ್ತು. 8 ವರ್ಷದ ಬಳಿಕ ಅನ್ರಿಚ್ ನಾರ್ಟ್ಜ್ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
-
Kisiko @AnrichNortje02 ke deliveries dikh rahe hain kya? 🔥#DCvRR #Dream11IPL #YehHaiNayiDilli pic.twitter.com/yU22K1X2li
— Delhi Capitals (Tweeting from 🇦🇪) (@DelhiCapitals) October 14, 2020 " class="align-text-top noRightClick twitterSection" data="
">Kisiko @AnrichNortje02 ke deliveries dikh rahe hain kya? 🔥#DCvRR #Dream11IPL #YehHaiNayiDilli pic.twitter.com/yU22K1X2li
— Delhi Capitals (Tweeting from 🇦🇪) (@DelhiCapitals) October 14, 2020Kisiko @AnrichNortje02 ke deliveries dikh rahe hain kya? 🔥#DCvRR #Dream11IPL #YehHaiNayiDilli pic.twitter.com/yU22K1X2li
— Delhi Capitals (Tweeting from 🇦🇪) (@DelhiCapitals) October 14, 2020
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಪೇರಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ 13 ರನ್ಗಳಿಂದ ಸೋಲೊಪ್ಪಿಕೊಂಡಿತು.