ಚೆನ್ನೈ: ಮಂಗಳವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಸಿಎಸ್ಕೆ ಹಾಗೂ ಕೆಕೆಆರ್ ನಡುವಿನ ಪಂದ್ಯ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಸ್ಕೆ ನಾಯಕ ಧೋನಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತವರು ಮೈದಾನದಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿರುವ ಚೆನ್ನೈ ತಂಡ, ನಿನ್ನೆಯ ಪಂದ್ಯದಲ್ಲಿ ದಾಖಲಾದ ಕನಿಷ್ಠ ಮೊತ್ತಕ್ಕೆ ಧೋನಿ ಪಿಚ್ ಬಗ್ಗೆ ಅಸಹನೆ ತೋರಿದ್ದಾರೆ.
ಚೆನ್ನೈನ ನಿನ್ನೆಯ ಪಿಚ್ ವರ್ತನೆ ನಿಜಕ್ಕೂ ಬೇಸರ ಮೂಡಿಸಿದೆ. ಇಂತಹ ಪಿಚ್ನಲ್ಲಿ ಆಡಲು ನಮ್ಮ ಟೀಮ್ ಇಷ್ಟಪಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ ಒವರ್ನಲ್ಲಿ ಕೇವಲ 108 ರನ್ ಗಳಿಸಲಷ್ಟೇ ಶಕ್ತವಾಯಿತು. 17.2 ಒವರ್ನಲ್ಲಿ ಸಿಎಸ್ಕೆ ಮೂರು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತ್ತು.