ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ರಾಜಸ್ಥಾನ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ.
-
Another shower proved to be the final nail in the coffin as the match between #RCBvRR is called off.#VIVOIPL pic.twitter.com/iN9EbkaLdM
— IndianPremierLeague (@IPL) April 30, 2019 " class="align-text-top noRightClick twitterSection" data="
">Another shower proved to be the final nail in the coffin as the match between #RCBvRR is called off.#VIVOIPL pic.twitter.com/iN9EbkaLdM
— IndianPremierLeague (@IPL) April 30, 2019Another shower proved to be the final nail in the coffin as the match between #RCBvRR is called off.#VIVOIPL pic.twitter.com/iN9EbkaLdM
— IndianPremierLeague (@IPL) April 30, 2019
ಮಳೆಯ ಕಾರಣದಿಂದ ಪಂದ್ಯವನ್ನ 5 ಓವರ್ಗಳಿಗೆ ಕಡಿತಗೊಳಿಸಲಾಗಿತ್ತು. ಪರಿಣಾಮ ಮೊದಲ ಓವರ್ನಲ್ಲೇ ಅಬ್ಬರಿಸಿದ ಕೊಹ್ಲಿ-ಎಬಿಡಿ ಜೋಡಿ 23 ರನ್ ಪೇರಿಸಿದರು. ಗೋಪಾಲ್ ಎಸೆದ ಎರಡನೇ ಓವರ್ನಲ್ಲಿ ಮೊದಲೆರಡು ಎಸೆತಗಳಲ್ಲಿ ಬೌಂಡರಿ-ಸಿಕ್ಸರ್ ಸಿಡಿಸಿದ ಕೊಹ್ಲಿ(25) ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿದರು. ನಂತರ 2 ಎಸೆತಗಳಲ್ಲಿ ಎಬಿಡಿ(10) ಹಾಗೂ ಸ್ಟೋಯ್ನಿಸ್(0) ಕೂಡ ಕ್ಯಾಚ್ ನೀಡಿ ಔಟಾದರು. ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಆರ್ಸಿಬಿ ಪಾಲಿಗೆ ಕಂಟಕರಾದರು.
ಮೂರನೇ ಓವರ್ ಎಸೆದ ರಿಯಾನ್ ಪರಾಗ್ 10 ರನ್ ಬಿಟ್ಟುಕೊಟ್ಟು 6 ರನ್ಗಳಿಸಿದ್ದ ಗುರುಕಿರಾತ್ ವಿಕೆಟ್ ಪಡೆದರು. 4 ನೇ ಓವರ್ನಲ್ಲಿ ಉನಾದ್ಕಟ್ 9 ರನ್ ನೀಡಿ ಪಾರ್ಥೀವ್ ಪಟೇಲ್ ವಿಕೆಟ್ ಪಡೆದರು. ಕೊನೆಯ ಓವರ್ ಎಸೆದ ಒಸಾನೆ ಥಾಮಸ್ 6 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.
ಒಟ್ಟಾರೆ ಮೊದಲ ಓವರ್ನಲ್ಲಿ 23 ರನ್ಗಳಿಸಿದ್ದ ಆರ್ಸಿಬಿ ತಂಡ 5 ಓವರ್ಗಳಲ್ಲಿ 62 ರನ್ ಗಳಿಸಿತು.
63 ರನ್ಗಳ ಗುರಿ ಬೆನ್ನತ್ತಿದ ರಾಜಸ್ಥಾನ ತಂಡದ ಆರಂಭಿಕ ಆಟಗಾರರು ಆರ್ಸಿಬಿ ಬೌಲರ್ಗಳ ಮೇಲೆ ಸವಾರಿ ಮಾಡಿದ್ರು. 3.2 ಓವರ್ಗಲ್ಲಿ ಒಂದು ವಿಕೆಟ್ ಕಳೆದುಕೊಂಡು 41 ರನ್ಗಳಿಸಿರುವಾಗ ಮತ್ತೆ ಮಳೆ ಪ್ರಾರಂಭವಾಯ್ತು. ಹೀಗಾಗಿ ಪಂದ್ಯವನ್ನ ಅರ್ಧಕ್ಕೆ ಕೈಬಿಟ್ಟು, ಎರಡೂ ತಂಡಗಳಿಗೂ ಒಂದೊಂದು ಅಂಕ ನೀಡಲಾಯಿತು.
ರಾಜಸ್ಥಾನ ತಂಡದ ಪರ ಸಂಜು ಸ್ಯಾಮ್ಸನ್ 28 ರನ್ ಗಳಿಸಿದ್ರೆ, ಲಿಯಾಮ್ ಲಿವಿಂಗ್ಸ್ಟೋನ್ 11 ರನ್ ಗಳಿಸಿದ್ದಾರೆ. ಇನ್ನು ಆರ್ಸಿಬಿ ಪರ ಯುಜುವೇಂದ್ರ ಚಹಾಲ್ ಒಂದು ವಿಕೆಟ್ ಪಡೆದುಕೊಂಡರು.