ಹೈದರಾಬಾದ್: ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಕೊನೇ ಕ್ಷಣದಲ್ಲಿ ಒಂದಷ್ಟು ಗೊಂದಲ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.
ಮೈದಾನದಲ್ಲಿ ಅತ್ಯಂತ ತಾಳ್ಮೆಯಿಂದ ವರ್ತಿಸುವ ಎಂ.ಎಸ್.ಧೋನಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದ ಕೊನೆಯಲ್ಲಿ ಅಂಪೈರ್ಗಳ ಎಡವಟ್ಟವನ್ನು ಪ್ರಶ್ನಿಸಿ ನೇರವಾಗಿ ಕ್ರೀಸ್ನತ್ತ ಆಗಮಿಸಿ ಆಕ್ರೋಶ ಹೊರಹಾಕಿದ್ದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್, "ಧೋನಿ ಟೀಮ್ ಇಂಡಿಯಾದಲ್ಲಿ ಇಷ್ಟೊಂದು ಕೋಪದಲ್ಲಿ ವರ್ತಿಸಿದ್ದರೆ ನಾನು ಖುಷಿ ಪಡುತ್ತಿದ್ದೆ, ಆದರೆ ಇಂತಹ ಟೂರ್ನಮೆಂಟ್ಗಳಲ್ಲಿ ಈ ರೀತಿಯ ವರ್ತನೆ ಅಗತ್ಯವಿಲ್ಲ" ಎಂದಿದ್ದಾರೆ.
"ನಿವೃತ್ತಿಯ ಸನಿಹದಲ್ಲಿ ಧೋನಿ ಈ ರೀತಿ ವರ್ತಿಸಬಾರದು. ಸಿಎಸ್ಕೆ ನಾಯಕನ ನಿಯಮ ಉಲ್ಲಂಘನೆಯ ನಡತೆಗೆ ಒಂದು ಅಥವಾ ಎರಡು ಪಂದ್ಯಗಳಿಂದ ನಿಷೇಧ ಮಾಡಬೇಕು. ಮುಂದಿನ ದಿನಗಳಲ್ಲಿ ಯಾರೂ ಸಹ ಈ ರೀತಿಯಾಗಿ ವರ್ತಿಸಬಾರದು" ಎಂದು ಖಡಕ್ ಆಗಿ ಸೆಹ್ವಾಗ್ ತನ್ನ ಅಭಿಪ್ರಾಯ ತಿಳಿಸಿದ್ದಾರೆ.