ETV Bharat / sports

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸರಣಿ ರದ್ದು.. ಅಸಮಾಧಾನ ಹೊರ ಹಾಕಿದ ಮೈಕಲ್​ ವಾನ್..​ - ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ಟೆಸ್ಟ್​ ಸರಣಿ ರದ್ದು

ಮಾರ್ಚ್​ ಅಂತ್ಯದಲ್ಲಿ ಆಸೀಸ್​ ಮತ್ತು ಹರಿಣಗಳ ನಡುವೆ ಮೂರು ಪಂದ್ಯಗಳ ಟೆಸ್ಟ್​ ಸರಣಿ ನಡೆಯಬೇಕಿತ್ತು. ಈ ಎರಡು ತಂಡಗಳ ನಡುವಿನ ಸರಣಿ ಮುಂದೂಡಿದ್ದಕ್ಕಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ನ್ಯೂಜಿಲೆಂಡ್​ ತಂಡ ಲಗ್ಗೆ ಇಟ್ಟಿದೆ..

Would Aussies pull out of India tour, asks Vaughan
ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ ಮೈಕಲ್​ ವಾನ್
author img

By

Published : Feb 3, 2021, 5:30 PM IST

ನವದೆಹಲಿ : ರೂಪಾಂತರ ವೈರಸ್​ನ ಹಾವಳಿ ಹೆಚ್ಚಾದ ಕಾರಣ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾ ಕೈಗೊಂಡಿದ್ದ ಪ್ರವಾಸ ರದ್ದುಪಡಿಸಿ ಮುಂದೂಡಿದ್ದಕ್ಕೆ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ ಮೈಕಲ್​ ವಾನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆಸೀಸ್ ಹೊರ ಬಂದಿರುವಂತೆ ಇದು ಭಾರತದ ಪ್ರವಾಸವಾಗಿದ್ದರೆ ಆಸೀಸ್​​​​​ ಹೊರಬರುತಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ? ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಮುಖ್ಯ ಮೂರು ಕ್ರಿಕೆಟ್​ ಮಂಡಳಿಗಳಿಗೆ (ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ-'ಬಿಗ್ 3') ಸಹಾಯ ಮಾಡಲು ಎಲ್ಲವನ್ನೂ ಮಾಡಬೇಕು ಎಂದು ವಾನ್ ತನ್ನ ಟ್ವೀಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ...ಆಸೀಸ್​​ನಲ್ಲಿ ಅಸಾಮಾನ್ಯ ಗೆಲುವು ಸಾಧಿಸಿದ ಭಾರತ : ಕೇನ್ ವಿಲಿಯಮ್ಸನ್​ ಶ್ಲಾಘನೆ

ಒಬ್ಬರಿಗೆ ನ್ಯಾಯ ಇನ್ನೊಬ್ಬರಿಗೆ ಅನ್ಯಾಯ ಮಾಡಬಾರದು. ದಕ್ಷಿಣ ಆಫ್ರಿಕಾ ಸರಣಿ ಮುಂದೂಡುವ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧಾರ ಪ್ರಶ್ನಿಸಿದ ವಾನ್, ಇದು ಭಾರತದ ಪ್ರವಾಸವಾಗಿದ್ದರೆ ಅವರು (ಆಸೀಸ್​) ಕೂಡ ಹಾಗೆ ಮಾಡುತ್ತಿದ್ದರೆ? ಎಂದ ಅವರು, ಸುಮ್ಮನೆ ಹೇಳಿದೆ (Just saying) ಎಂದು ಹೇಳಿದ್ದಾರೆ.

  • The Aussies pulling out of the tour of SA is a huge worry for the game ... Would they have pulled out of a tour to India is the question ?? !! It’s so important in these times that the big 3 do everything they can to help out those without the financial clout ... #JustSaying

    — Michael Vaughan (@MichaelVaughan) February 3, 2021 " class="align-text-top noRightClick twitterSection" data=" ">

ಪ್ರವಾಸ ಕೈಗೊಂಡಿದ್ದ ಭಾರತದ ಎದುರು ಮೂರು ಏಕದಿನ, ಮೂರು ಟಿ20 ಮತ್ತು 4 ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಿತ್ತು. ಏಕದಿನ ಸರಣಿ ಹೊರತುಪಡಿಸಿ ಉಳಿದೆರಡರಲ್ಲೂ ಆಸೀಸ್​ ಸೋಲನುಭವಿಸಿತು.

ಕೋವಿಡ್​-19 ಸಾಂಕ್ರಾಮಿಕ ರೋಗದ ಪರಿಸ್ಥಿತಿಯಿಂದಾಗಿ ಮುಂದಿನ ತಿಂಗಳು ನಡೆಯಬೇಕಿದ್ದ ಆಸ್ಟ್ರೇಲಿಯಾದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಪ್ರಕಟಿಸಿದೆ.

ಆಸ್ಟ್ರೇಲಿಯಾ ಆಡಳಿತ ಮಂಡಳಿ ಕೈಗೊಂಡ ನಿರ್ಧಾರದಿಂದ ನಾವು ಹತಾಶರಾಗಿದ್ದೇವೆ ಮತ್ತು ನಿರಾಶಾದಾಯಕವಾಗಿದೆ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ನಿರ್ದೇಶಕ ಗ್ರೇಮ್ ಸ್ಮಿತ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಾರ್ಚ್​ ಅಂತ್ಯದಲ್ಲಿ ಆಸೀಸ್​ ಮತ್ತು ಹರಿಣಗಳ ನಡುವೆ ಮೂರು ಪಂದ್ಯಗಳ ಟೆಸ್ಟ್​ ಸರಣಿ ನಡೆಯಬೇಕಿತ್ತು. ಈ ಎರಡು ತಂಡಗಳ ನಡುವಿನ ಸರಣಿ ಮುಂದೂಡಿದ್ದಕ್ಕಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ನ್ಯೂಜಿಲೆಂಡ್​ ತಂಡ ಲಗ್ಗೆ ಇಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.