ನವದೆಹಲಿ : T-20 ವಿಶ್ವಕಪ್ಗಾಗಿ ಘೋಷಣೆಯಾಗಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಗೇಲ್ಗೆ ಅವಕಾಶ ನೀಡಲಾಗಿದೆ. ಆದರೆ, ಇವರಿಗೆ ಆಡುವ 11ರ ಬಳಗದಲ್ಲಿ ಮೊದಲ ಪ್ಲೇಯರ್ ಆಗಿ ಚಾನ್ಸ್ ನೀಡಬಾರದೆಂದು ಮಾಜಿ ಬೌಲರ್ ಕರ್ಟ್ನಿ ಆಂಬ್ರೋಸ್ ಹೇಳಿಕೆ ನೀಡಿದ್ದರು.
ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಯೂನಿವರ್ಸ್ ಬಾಸ್, ಅವರ ಬಗ್ಗೆ ನನಗೆ ಯಾವುದೇ ರೀತಿಯ ಗೌರವ ಉಳಿದಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗೆ ವೆಸ್ಟ್ ಇಂಡೀಸ್ನ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಗರಂ ಆಗಿದ್ದಾರೆ.
ಗೇಲ್ ವಿರುದ್ಧ ರಿಚರ್ಡ್ಸ್ ಗರಂ
ಆಂಬ್ರೋಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮದೇ ಆದ ದಾಖಲೆ ಹೊಂದಿದ್ದಾರೆ. ಇದರ ಜೊತೆಗೆ ಸಾಕಷ್ಟು ಅನುಭವ ಹೊಂದಿರುವ ಕಾರಣ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ತಮ್ಮ ಹಕ್ಕು ಹೊರ ಹಾಕುವ ಸ್ವಾತಂತ್ರ್ಯ ಅವರು ಹೊಂದಿದ್ದಾರೆ ಎಂದು ರಿಚರ್ಡ್ಸ್ ಹೇಳಿದ್ದಾರೆ.
ಅವರ ಅಭಿಪ್ರಾಯಕ್ಕೂ ಗೌರವ ಕೊಡಿ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗೇಲ್ನಷ್ಟೇ ಆಂಬ್ರೋಸ್ ಕೂಡ ಸಾಧನೆ ಮಾಡಿದ್ದಾರೆ. ಅವರ ಅಭಿಪ್ರಾಯಕ್ಕೆ ಗೌರವ ನೀಡಿ ಎಂದಿದ್ದಾರೆ. ಒಂದು ವೇಳೆ ನಾನು ಕ್ರಿಸ್ ಗೇಲ್ ಸ್ಥಾನದಲ್ಲಿದ್ದು, ಈ ರೀತಿಯ ಕಮೆಂಟ್ ಬಂದಾಗ ನಾವು ಅದನ್ನ ಧನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದೆನು. ಜೊತೆಗೆ ನನ್ನ ಸಾಧನೆ ಕಡೆಗೆ ಗಮನ ಹರಿಸುತ್ತಿದ್ದೆನು ಎಂದು ರಿಚರ್ಡ್ಸ್ ಹೇಳಿದ್ದಾರೆ.
ಆಂಬ್ರೋಸ್ ಮೇಲೆ ಗೇಲ್ಗ್ಯಾಕೆ ಸಿಟ್ಟು
ಐಸಿಸಿ ಟಿ-20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡ ಆಯ್ಕೆಯಾಗಿದೆ. ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಅವಕಾಶ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ್ದ ವೆಸ್ಟ್ ಇಂಡೀಸ್ ದಿಗ್ಗಜ ಬೌಲರ್ ಆಂಬ್ರೋಸ್, ತಂಡದಲ್ಲಿ ಗೇಲ್ ಆಡುವ 11ರ ಮೊದಲ ಆಯ್ಕೆಯ ಪ್ಲೇಯರ್ ಆಗಿರಬಾರದು ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಅಸಮಾಧಾನ ಹೊರ ಹಾಕಿರುವ ಗೇಲ್, ನಾನು ವೆಸ್ಟ್ ಇಂಡೀಸ್ ತಂಡದ ಪರ ಪದಾರ್ಪಣೆ ಮಾಡಿದಾಗ ಆಂಬ್ರೋಸ್ ನನ್ನ ಆದರ್ಶವಾಗಿದ್ದರು. ಆದರೆ, ಇದೀಗ ಅವರನ್ನ ನಾನು ಏಕವಚನದಲ್ಲಿ ಕರೆಯುತ್ತಿದ್ದೇನೆ.
ಅವರ ಬಗ್ಗೆ ಯಾವುದೇ ರೀತಿಯ ಗೌರವ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನ ದಿಗ್ಗಜ ಆಟಗಾರನಾಗಿದ್ದ ಸರ್ ವಿವಿಯನ್ ರಿಚರ್ಡ್ಸ್ ಅವರ ಸಹ ಆಟಗಾರನಾಗಿ ಆಂಬ್ರೋಸ್ ಗುರುತಿಸಿಕೊಂಡಿದ್ದರು.