ಲಕ್ನೋ : ಭಾರತ - ದ.ಆಫ್ರಿಕಾ ಮಹಿಳಾ ತಂಡಗಳ ನಡುವೆ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾತರ ವನಿತೆಯರ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತದ ವನಿತೆಯರು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 266 ರನ್ಗಳಿಸಿದರು. ಭಾರತದ ಪರ ಓಪನರ್ ಆಗಿ ಕಣಕ್ಕಿಳಿದ ಸ್ಮೃತಿ ಮಂದಾನ ಮತ್ತು ಪ್ರಿಯಾ ಪೂನಿಯಾ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಮತ್ತೆ ಎಡವಿದರು. ಕೇವಲ 10 ರನ್ಗಳಿಸಿ ಮಂದಾನ ಔಟಾದರೆ, ಪ್ರಿಯಾ ಪೂನಿಯಾ 32 ರನ್ಗಳಿಸಿದ್ರು. ತಂಡದ ನಾಯಕಿ ಮಿಥಾಲಿ ರಾಜ್ 45 ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
-
A brilliant hundred by Punam Raut and crucial knocks from Mithali Raj and Harmanpreet Kaur have helped India put up 266/4 in the fourth ODI.
— ICC (@ICC) March 14, 2021 " class="align-text-top noRightClick twitterSection" data="
Will it be enough?#INDvSA ➡️ https://t.co/0gv3cOgWyRpic.twitter.com/I8NTM6iBHQ
">A brilliant hundred by Punam Raut and crucial knocks from Mithali Raj and Harmanpreet Kaur have helped India put up 266/4 in the fourth ODI.
— ICC (@ICC) March 14, 2021
Will it be enough?#INDvSA ➡️ https://t.co/0gv3cOgWyRpic.twitter.com/I8NTM6iBHQA brilliant hundred by Punam Raut and crucial knocks from Mithali Raj and Harmanpreet Kaur have helped India put up 266/4 in the fourth ODI.
— ICC (@ICC) March 14, 2021
Will it be enough?#INDvSA ➡️ https://t.co/0gv3cOgWyRpic.twitter.com/I8NTM6iBHQ
ಇತ್ತ ಉತ್ತಮ ಇನ್ನಿಂಗ್ಸ್ ಕಟ್ಟಿದ ಪೂನಮ್ ರೌತ್ ಹಾಗೂ ಹರ್ಮನ್‌ಪ್ರೀತ್ ಕೌರ್ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಪೂನಮ್ ರೌತ್ 123 ಬಾಲ್ಗಳಲ್ಲಿ 10 ಬೌಂಡರಿ ಸಮೇತ 104 ರನ್ಗಳಿಸುವ ಮೂಲಕ ತಮ್ಮ ವೃತ್ತಿ ಜೀವನದ 3ನೇ ಏಕದಿನ ಶತಕ ಗಳಿಸಿದರು.
ಹೊಡಿಬಡಿ ಆಟವಾಡಿದ ಹರ್ಮನ್‌ಪ್ರೀತ್ ಕೌರ್ 35 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 54 ರನ್ಗಳಿಸಿದರು. ಅಂತಿಮವಾಗಿ ಭಾರತದ ವನಿತೆಯರ ತಂಡ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 266 ರನ್ಗಳಿಸಿತು.
ದಕ್ಷಿಣ ಆಫ್ರಿಕಾ ಪರ ತುಮಿ ಸೆಖುಖುನೆ 2 ವಿಕೆಟ್ ಪಡೆದರೆ, ಇಸ್ಮಾಯಿಲ್ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಮುಂಬೈ-ಯುಪಿ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದ ವೇಳೆ ಪೃಥ್ವಿ ಶಾಗೆ ಗಾಯ