ETV Bharat / sports

ಮೊದಲ ಪಂದ್ಯದಲ್ಲೇ 4 ವಿಕೆಟ್​ ಪಡೆದು ಪಾಕ್​ ವಿರುದ್ಧ ಮಿಂಚಿದ ಯುವ ಪ್ರತಿಭೆ... ಕಿವೀಸ್​ಗೆ ಭರ್ಜರಿ ಜಯ! - ನ್ಯೂಜಿಲೆಂಡ್​ ವಿರುದ್ಧ ಪಾಕ್​ ಮೊದಲ ಟಿ20

ಆಕ್ಲೆಂಡ್​ನ ಈಡನ್ ಪಾರ್ಕ್​ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಪಾಕ್​ ವಿರುದ್ಧ ನ್ಯೂಜಿಲೆಂಡ್​ ತಂಡ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

New Zealand won, New Zealand won by 5 wkts, NZ vs PAK, NZ vs PAK 1st T20I, Jacob Duffy, Jacob Duffy news, ನ್ಯೂಜಿಲೆಂಡ್​ಗೆ ಜಯ, ಪಾಕ್​ ವಿರುದ್ಧ ನ್ಯೂಜಿಲೆಂಡ್​ಗೆ ಜಯ, ಪಾಕ್​ ವಿರುದ್ಧ ನ್ಯೂಜಿಲೆಂಡ್​ಗೆ 5 ವಿಕೆಟ್​ಗಳ ಜಯ, ನ್ಯೂಜಿಲೆಂಡ್​ ವಿರುದ್ಧ ಪಾಕ್​, ನ್ಯೂಜಿಲೆಂಡ್​ ವಿರುದ್ಧ ಪಾಕ್​ ಮೊದಲ ಟಿ20,
ಕೃಪೆ: Twitter/ICC
author img

By

Published : Dec 18, 2020, 4:25 PM IST

ಆಕ್ಲೆಂಡ್: ಪಾಕ್​ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಕಿವೀಸ್​ ಭರ್ಜರಿ ಜಯ ಸಾಧಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕ್ ಡೆಬ್ಯು ಪ್ಲೇಯರ್​ ಜೋಕಾಬ್​ ಡಫ್ಫೀ ದಾಳಿಗೆ ಆರಂಭಿಕ ಆಘಾತ ಅನುಭವಿಸಿತು. ಕೇವಲ 20 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ನಾಯಕ ಶಾದಾಬ್​ ಖಾನ್​ ಮತ್ತು ಫಹೀಮ್​ ಅಶರ್ಫ್ ಅವರ​ ಜವಾಬ್ದಾರಿ ಆಟಕ್ಕೆ ಪಾಕ್​ ಚೇತರಿಸಿಕೊಂಡಿತು. 20 ಓವರ್​ಗಳಿಗೆ ಪಾಕ್​ 9 ವಿಕೆಟ್​ ಕಳೆದುಕೊಂಡು 153 ರನ್​ಗಳನ್ನು ಕಲೆಹಾಕಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ್ದ ಕಿವೀಸ್​ ತಂಡವೂ ಆರಂಭಿಕ ಆಘಾತ ಅನುಭವಿಸಿತು. ವಿಕೆಟ್​ ಕೀಪರ್​ ಟಿಮ್ ಸೀಫರ್ಟ್​ನ ಅರ್ಧಶತಕದ ನೆರವಿನಿಂದ ಮತ್ತು ಮಾರ್ಕ್​ ಚಾಪ್ಮನ್ ಅವರ​ ಜವಾಬ್ದಾರಿಯುತ ಆಟ ಕಿವೀಸ್ ತಂಡಕ್ಕೆ ನೆರವಾಯಿತು. 18.5 ಓವರ್​ಗಳಿಗೆ 5 ವಿಕೆಟ್​ಗಳನ್ನು ಕಳೆದುಕೊಂಡು 156 ರನ್​ಗಳನ್ನು ಕಲೆಹಾಕುವ ಮೂಲಕ ಪಾಕ್​ ನೀಡಿದ ಗುರಿಯನ್ನು ಮುಟ್ಟಿತು.

ಪ್ಲೇಯರ್​ ಆಫ್​​ ದಿ ಮ್ಯಾಚ್​...

ಜೋಕಾಬ್​ ಡಫ್ಫೀ ಇಂದು ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದಾರೆ. ಅವರು ಮೊದಲ ಪಂದ್ಯದಲ್ಲೇ ನಾಲ್ಕು ಓವರ್​ಗೆ 4 ವಿಕೆಟ್​ಗಳನ್ನು ಪಡೆದು 33 ರನ್​ಗಳನ್ನು ನೀಡಿ ಮಿಂಚಿದ್ದಾರೆ. ಇನ್ನು ಡಫ್ಫೀ ಉತ್ತಮ ಪ್ರದರ್ಶನದಿಂದ ಇಂದಿನ ಪಂದ್ಯದ ಪ್ಲೇಯರ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.