ಕೋಲ್ಕತ್ತಾ : ಟಿ-20 ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ (Rohit Sharma hits 150 Sixes) ಹೊಸ ದಾಖಲೆ ಬರೆದಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ (India vs New Zealand) 3 ಸಿಕ್ಸ್ ಸಿಡಿಸುವ ಮೂಲಕ 150 ಸಿಕ್ಸ್ ಬಾರಿಸಿದ ಬ್ಯಾಟ್ಸಮನ್ ಆಗಿ ಹೊರಹೊಮ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಫರ್ಗುಸನ್ ಬೌಲಿಂಗ್ನಲ್ಲಿ ರೋಹಿತ್ ಶರ್ಮಾ 3 ಸಿಕ್ಸ್ ಸಿಡಿಸಿ ಈ ದಾಖಲೆ ಬರೆದಿದ್ದಾರೆ. ಇನ್ನು ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ (161 ಸಿಕ್ಸ್) ಮೂಲಕ 150ಕ್ಕೂ ಹೆಚ್ಚು ಸಿಕ್ಸ್ ಬಾರಿಸಿದ ಮೊದಲ ಬ್ಯಾಟ್ಸಮನ್ ಆಗಿದ್ದಾರೆ.
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (124 ಸಿಕ್ಸ್) ಅತಿ ಹೆಚ್ಚು ಸಿಕ್ಸ್ ಬಾರಿಸಿದ 3ನೇ ಬ್ಯಾಟ್ಸಮನ್ ಆಗಿದ್ದಾರೆ. ಇನ್ನು, ಭಾರತದ ಮಟ್ಟಿಗೆ ರೋಹಿತ್ ಶರ್ಮಾ ನಂತರ ವಿರಾಟ್ ಕೊಹ್ಲಿ ಈವರೆಗೆ 91 ಸಿಕ್ಸ್ ಸಿಡಿಸಿದ್ದಾರೆ.
ಈಡನ್ ಗಾರ್ಡನ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ (56 ರನ್) ಅರ್ಧ ಶತಕ ದಾಖಲಿಸಿದರು.