ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಮೈದಾನದಲ್ಲಿ ಕ್ರಿಕೆಟ್ಗಿಂತ ವರುಣನ ಆರ್ಭಟವೇ ಹೆಚ್ಚಾಗಿತ್ತು. ಕೊನೆಗೂ ಮಳೆ ನಿಲ್ಲದೆ, ದಿನದಾಟ ಅಂತ್ಯಗೊಂಡಿದೆ.
ದಿನದಾಟದಲ್ಲಿ ಕೇವಲ 33.4 ಓವರ್‌ಗಳು ಮಾತ್ರ ಸಾಧ್ಯವಾಗಿದ್ದು, ಅವುಗಳಲ್ಲಿ ಹೆಚ್ಚಿನ ಓವರ್‌ಗಳು ಬೆಳಗ್ಗಿನ ಅವಧಿಯಲ್ಲೇ ನಡೆದಿವೆ. ಭೋಜನ ವಿರಾಮದ ಬಳಿಕ ಪದೇ ಪದೇ ಮಳೆ ಕಾಡಿದ್ದರಿಂದ ಆಟಕ್ಕೆ ಅಡಚಣೆಯುಂಟಾಯಿತು. ಬುಧವಾರ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದ ಭಾರತ ಗುರುವಾರವೂ ಉತ್ತಮ ಆರಂಭ ಮುಂದುವರೆಸಿತು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ(36) ಮತ್ತು ರಾಹುಲ್ ಮೊದಲ ವಿಕೆಟ್ಗೆ 97 ರನ್ ಜೊತೆಯಾಟವಾಡಿದರು.
-
That's how things stand at the end of rain-hit Day 2 at Trent Bridge!
— BCCI (@BCCI) August 5, 2021 " class="align-text-top noRightClick twitterSection" data="
See you tomorrow for Day 3️⃣ action. #TeamIndia #ENGvIND
Scorecard 👉 https://t.co/TrX6JMzP9A pic.twitter.com/UMcmmRVMwn
">That's how things stand at the end of rain-hit Day 2 at Trent Bridge!
— BCCI (@BCCI) August 5, 2021
See you tomorrow for Day 3️⃣ action. #TeamIndia #ENGvIND
Scorecard 👉 https://t.co/TrX6JMzP9A pic.twitter.com/UMcmmRVMwnThat's how things stand at the end of rain-hit Day 2 at Trent Bridge!
— BCCI (@BCCI) August 5, 2021
See you tomorrow for Day 3️⃣ action. #TeamIndia #ENGvIND
Scorecard 👉 https://t.co/TrX6JMzP9A pic.twitter.com/UMcmmRVMwn
ಈ ವೇಳೆ 107 ಎಸೆತಗಳಲ್ಲಿ 36 ರನ್ಗಳಿಸಿದ್ದ ರೋಹಿತ್ ಶರ್ಮಾ ರಾಬಿನ್ಸನ್ ಓವರ್ನಲ್ಲಿ ಔಟ್ ಆದರು. ಬಳಿಕ ಭಾರತ ಕೇವಲ 8 ರನ್ ಅಂತರದಲ್ಲಿ ಚೇತೇಶ್ವರ್ ಪೂಜಾರ (4) ವಿರಾಟ್ ಕೊಹ್ಲಿ (0) ಮತ್ತು ಅಜಿಂಕ್ಯ ರಹಾನೆ (5) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಜೇಮ್ಸ್ ಆ್ಯಂಡರ್ಸನ್ ಸತತ ಎರಡು ಎಸೆತಗಳಲ್ಲಿ ಪೂಜಾರ ಮತ್ತು ಕೊಹ್ಲಿ ವಿಕೆಟ್ ಕಬಳಿಸಿ ಇಂಗ್ಲೆಂಡ್ಗೆ ಮೇಲುಗೈ ಒದಗಿಸಿದರು. ಬಳಿಕ ಅಜಿಂಕ್ಯ ರಹಾನೆ ಕೂಡ ಅನಾವಶ್ಯಕ ರನ್ ಗಳಿಸಲು ಯತ್ನಿಸಿ ರನ್ಔಟ್ ಆದರು.
2 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿರುವ ಕನ್ನಡಿಗ ಕೆ.ಎಲ್. ರಾಹುಲ್ 151 ಎಸೆತಗಳಲ್ಲಿ ಅಜೇಯ 57 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇವರ ಜೊತೆಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ 7 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ಮಾಡುತ್ತಿದ್ದಾಗ 46.1 ಒವರ್ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 125 ರನ್ಗಳಿಸಿದ್ದ ವೇಳೆ ಮಳೆ ಶುರುವಾದ ಹಿನ್ನೆಲೆ, ಆಟವನ್ನು ಸ್ಥಗಿತಗೊಳಿಸಲಾಯಿತು. 2 ತಾಸುಗಳ ನಂತರ ಮತ್ತೆ ಆರಂಭಗೊಂಡು ಕೇವಲ 1 ಎಸೆತಕ್ಕೆ ಸೀಮಿತಗೊಂಡಿತು. ಮರಳಿ ಮಳೆ ತುಸು ವಿರಾಮ ನೀಡಿದಾಗ ಆಟಗಾರರು ಮೈದಾನಕ್ಕಿಳಿದರೂ ಆ್ಯಂಡರ್ಸನ್ ಕೇವಲ 2 ಎಸೆತಗಳನ್ನು ಮಾಡುತ್ತಿದ್ದಂತೆ ಮತ್ತೆ ವರುಣನ ಆರ್ಭಟದಿಂದ ಆಟ ನಿಂತಿತು. ನಂತರವೂ ಮಳೆ ಬಂದ್ ಆಗದ ಹಿನ್ನೆಲೆ ಕೊನೆಗೂ ಆ್ಯಂಡರ್ಸನ್ ತಮ್ಮ ಓವರ್ ಮುಗಿಸಲಾಗಲಿಲ್ಲ. ನಿಗದಿತ ಅವಧಿಗೂ ಮುನ್ನವೇ ಎರಡನೇ ದಿನದಾಟ ಅಂತ್ಯಗೊಂಡಿದೆ. ಭಾರತ 46.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದ್ದು, 58 ರನ್ಗಳ ಹಿನ್ನಡೆಯಲ್ಲಿದೆ.
ಇದನ್ನೂ ಓದಿ: ಬೆಳ್ಳಿ ತೃಪ್ತಿ ತಂದಿಲ್ಲ, ದೇಶ ಹೆಮ್ಮೆ ಪಡುವಂತೆ ಚಿನ್ನ ಗೆಲ್ಲಲು ಭವಿಷ್ಯದಲ್ಲಿ ಪ್ರಯತ್ನಿಸುತ್ತೇನೆ: ರವಿ ದಹಿಯಾ