ಆಂಟಿಗುವಾ: ವೆಸ್ಟ್ ಇಂಡೀಸ್-ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಜೇಸನ್ ಹೋಲ್ಡರ್ ಬಿರುಸಿನ ದಾಳಿಗೆ ತತ್ತರಿಸಿದ್ದು, ಕೇವಲ 169 ರನ್ಗಳಿಗೆ ಆಲೌಟ್ ಆಗಿದೆ.
ಶ್ರೀಲಂಕಾ ತಂಡ ಮೊದಲ ದಿನವೇ ಕೇವಲ 169 ರನ್ಗಳಿಗೆ ಸರ್ವಪತನ ಕಂಡಿದೆ. ಮೊದಲನೇ ದಿನದ ಅಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 13 ರನ್ಗಳಿಸಿದೆ.
-
A day that belonged to @windiescricket. They go to stumps at 13/0 after bowling Sri Lanka out for 169.@Jaseholder98's 5/27 the difference on day one.#WIvSL | https://t.co/mHPz6gNKhJ pic.twitter.com/4rd4UJwc5U
— ICC (@ICC) March 21, 2021 " class="align-text-top noRightClick twitterSection" data="
">A day that belonged to @windiescricket. They go to stumps at 13/0 after bowling Sri Lanka out for 169.@Jaseholder98's 5/27 the difference on day one.#WIvSL | https://t.co/mHPz6gNKhJ pic.twitter.com/4rd4UJwc5U
— ICC (@ICC) March 21, 2021A day that belonged to @windiescricket. They go to stumps at 13/0 after bowling Sri Lanka out for 169.@Jaseholder98's 5/27 the difference on day one.#WIvSL | https://t.co/mHPz6gNKhJ pic.twitter.com/4rd4UJwc5U
— ICC (@ICC) March 21, 2021
ಟಾಸ್ ಸೋತು ಬ್ಯಾಟಿಂಗ್ಗಿಳಿದ ಶ್ರೀಲಂಕಾ ತಂಡದ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡಿದರು. ಲಹಿರು ತಿರಿಮನ್ನೆ (70) ಹಾಗೂ ನಿರೋಷನ್ ಡಿಕ್ವೆಲ್ಲಾ (32) ಬಿಟ್ಟರೆ ಬೇರೆ ಯಾವೋಬ್ಬ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತ ದಾಟಲಿಲ್ಲ. ಸಂಘಟಿತ ದಾಳಿ ನಡೆಸಿದ ವೆಸ್ಟ್ ಇಂಡೀಸ್ ಬೌಲರ್ಗಳು ಶ್ರೀಲಂಕಾ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರು. ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 5 ವಿಕೆಟ್ ಪಡೆದರೆ, ಕೆಮರ್ ರೋಚ್ ಮೂರು ವಿಕೆಟ್ ಪಡೆದು ಮಿಂಚಿದರು.
ಓದಿ : ಭಾರತದ ವಿರುದ್ಧ 2 ಸರಣಿ ಗೆದ್ದ ದ. ಆಫ್ರಿಕಾ ಮಹಿಳಾ ತಂಡಕ್ಕೆ ಪ್ರಶಂಸೆಯ ಸುರಿಮಳೆ
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ ಮೊದಲ ಇನ್ನಿಂಗ್ಸ್ 169 (ಲಹಿರು ತಿರಿಮನ್ನೆ 70, ನಿರೋಷನ್ ಡಿಕ್ವೆಲ್ಲಾ 32, ಜೇಸನ್ ಹೋಲ್ಡರ್ 5/27). ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 13/0 (ಜಾನ್ ಕ್ಯಾಂಪ್ಬೆಲ್ 7 *, ಕ್ರೇಗ್ ಬ್ರಾಥ್‌ವೈಟ್ 3 *).