ಸೇಂಟ್ ಜಾನ್ಸ್ (ಆಂಟಿಗುವಾ) : ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಮೂರು ಬ್ಯಾಕ್-ಟು-ಬ್ಯಾಕ್ ಐದು ಪಂದ್ಯಗಳ ಟಿ20 ಸರಣಿಗಳಿಗೆ 18 ಮಂದಿಯ ತಾತ್ಕಾಲಿಕ ತಂಡವನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಆಯ್ಕೆ ಸಮಿತಿ ಪ್ರಕಟಿಸಿದೆ.
ಮಾರ್ಚ್ನಲ್ಲಿ ಶ್ರೀಲಂಕಾ ವಿರುದ್ಧದ 2-1 ಟಿ 20 ಐ ಸರಣಿಯ ಗೆಲುವಿನಲ್ಲಿ ಭಾಗವಹಿಸಿದ ಬಹುಪಾಲು ತಂಡದೊಂದಿಗೆ ಶೆಲ್ಡಾನ್ ಕಾಟ್ರೆಲ್, ಶಿಮ್ರಾನ್ ಹೆಟ್ಮೆಯರ್, ಆಂಡ್ರೆ ರಸೆಲ್, ಓಶೇನ್ ಥಾಮಸ್ ಮತ್ತು ಹೇಡನ್ ವಾಲ್ಶ್ (ಜೂನಿಯರ್) ಹಿಂದಿರುಗಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ಗಾಗಿ ನಮ್ಮ ತಯಾರಿಕೆಯ ದೃಷ್ಟಿಯಿಂದ ಈ ಮುಂಬರುವ ಟಿ20 ಸರಣಿಗಳು ನಿರ್ಣಾಯಕವಾಗಿವೆ. ವಿಶ್ವ ದರ್ಜೆಯ ಅನುಭವಿ ಆಟಗಾರರು, ಪಂದ್ಯದ ಗೆಲುವಿಗೆ ಕಾರಣರಾದವರು ಮತ್ತು ಕೆಲವು ಯುವ ಪ್ರತಿಭಾವಂತ ಆಟಗಾರರೊಂದಿಗೆ ನಾವು ತಂಡವನ್ನು ರಚಿಸಿದ್ದೇವೆ ಎಂದು ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಫಿಲ್ ಸಿಮ್ಮನ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವು ವಿಶ್ವಕಪ್ನಲ್ಲಿ ಗೆಲುವ ಸಾಧಿಸುವ ಹಿನ್ನೆಲೆ ತಂಡದ ಪ್ರಮುಖರರನ್ನು ಗುರುತಿಸಿದ್ದೇವೆ. ಆದ್ದರಿಂದ ಮುಂಬರುವ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಿದ್ದೇವೆ. ಅವರಿಗೆ ತರಬೇತಿ ನೀಡುವ ರೀತಿ, ಕಾರ್ಯಗತಗೊಳಿಸುವ ವಿಧಾನ ಮತ್ತು ಗುಂಪಿನೊಳಗಿನ ಆಂತರಿಕ ಸಂಬಂಧದ ಬಗ್ಗೆ ತರಬೇತಿ ನೀಡುತ್ತೇವೆ ಎಂದು ಸಿಮ್ಮನ್ಸ್ ತಿಳಿಸಿದ್ದಾರೆ.
ನಾವು ಐದು ವರ್ಷಗಳ ಹಿಂದೆ ಟಿ20 ವರ್ಲ್ಡ್ ಕಪ್ ಗೆದ್ದಿದ್ದೇವೆ. ಆದ್ದರಿಂದ ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮತ್ತು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಹಾದಿಯಲ್ಲಿ ಎಚ್ಚರದಿಂದ ಹೆಜ್ಜೆಗಳನ್ನಿಡುತ್ತಿದ್ದೇವೆ ಎಂದು ಹೇಳಿದರು.
ಪ್ರಕಟಿಸಿರುವ ತಂಡವನ್ನು ಕ್ವಾರಂಟೈನಲ್ಲಿಟ್ಟು, ಸೇಂಟ್ ಲೂಸಿಯಾದಲ್ಲಿ ತರಬೇತಿ ನೀಡಲಾಗುವುದು. ಗ್ರೆನಡಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಜೂನ್ 26ರಂದು ಪ್ರಾರಂಭವಾಗಲಿದೆ. ನಂತರ ಅಧಿಕೃತ ತಂಡವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ತಾತ್ಕಾಲಿಕ ಟಿ20 ತಂಡವು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಎಲ್ಲಾ ಟಿ20 ಪಂದ್ಯಗಳಲ್ಲಿ ಆಡಲಿದೆ. ಇದು ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ನಮ್ಮ ಅತ್ಯುತ್ತಮ ತಂಡದ ರಚನೆಗಾಗಿ ಈ ಸರಣಿಗಳು ಸಹಾಯಕವಾಗಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ನ ಪ್ರಮುಖ ಆಯ್ಕೆಗಾರ ರೋಜರ್ ಹಾರ್ಪರ್ ಹೇಳಿದರು. ವೆಸ್ಟ್ ಇಂಡೀಸ್ ಹಾಲಿ ಟಿ20 ಐ ವಿಶ್ವಕಪ್ ಚಾಂಪಿಯನ್ ಆಗಿದ್ದು, 2012ರಲ್ಲಿಯೂ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ವೆಸ್ಟ್ ಇಂಡೀಸ್ ಟಿ20 ತಾತ್ಕಾಲಿಕ ತಂಡ :
ಕೀರನ್ ಪೊಲಾರ್ಡ್ (ಕ್ಯಾಪ್ಟನ್), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಶೆಲ್ಡನ್ ಕಾಟ್ರೆಲ್, ಫಿಡೆಲ್ ಎಡ್ವರ್ಡ್ಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಎವಿನ್ ಲೂಯಿಸ್, ಒಬೆಡ್ ಮೆಕಾಯ್, ಆಂಡ್ರೆ ರಸ್ಸೆಲ್, ಲೆಂಡ್ಲ್ ಸಿಮ್ಮನ್ಸ್, ಓಶೇನ್ ಥಾಮಸ್, ಹೇಡನ್ ವಾಲ್ಶ್ ಜ್ಯೂ.