ಕರಾಚಿ: ವೇಗಿ ಮೊಹಮ್ಮದ್ ಅಮೀರ್ ಅವರ ನಿವೃತ್ತಿ ವಿವಾದ ದೇಶದ ಕ್ರಿಕೆಟ್ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಮತ್ತು ಮುಖ್ಯ ಆಯ್ಕೆಗಾರ ಇಂಜಮಾಮ್ - ಉಲ್ - ಹಕ್ ಅಭಿಪ್ರಾಯಪಟ್ಟರು.
ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ ಅವರ ತಂಡ ನಿರ್ವಹಣೆ ಕುರಿತಂತೆ ಭಿನ್ನಾಭಿಪ್ರಾಯ ಉಂಟಾದ ಪರಿಣಾಮ ಅಮೀರ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದರು.
ಇದನ್ನೂ ಓದಿ...ಪಂದ್ಯದಲ್ಲಿ ಆರಂಭಿಕರ ಪಾತ್ರ ನಿರ್ಣಾಯಕ, ಒತ್ತಡ ಹೇರಲ್ಲ: ರಹಾನೆ
ಅಮೀರ್ ನಿವೃತ್ತಿ ನಿರ್ಧಾರ ಅವರ ಜೀವನದ ಮೇಲೆ ವ್ಯತಿರಿಕ್ತ ತೊಂದರೆಯಾಗುವುದಿಲ್ಲ. ಬದಲಿಗೆ ಬೌಲಿಂಗ್ ಅಥವಾ ತಂಡದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಲಿದೆ. ಅಲ್ಲದೇ, ಕ್ರಿಕೆಟ್‌ನಲ್ಲೂ ಉತ್ತಮ ಪ್ರತಿಫಲ ಸಿಗುವುದಿಲ್ಲ. ಮುಂದೆ ಅಂತಹ ಘಟನೆಗಳು ನಡೆಯದಿದ್ದರೆ ಉತ್ತಮ ಎಂದು ಲಾಹೋರ್ನಲ್ಲಿ ತಿಳಿಸಿದರು.
ತಂಡದ ನಿರ್ವಹಣೆಯಲ್ಲಿ ಅಸಮಾಧಾನ ಇದ್ದರೆ ಬಹಿರಂಗವಾಗಿ ಮಾತನಾಡಬೇಕು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳಿಗೂ ವಿಷಯ ಮುಟ್ಟಿಸಬೇಕು. ಆಗ ಅಧಿಕಾರಿಗಳು ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಸಲಹೆ ನೀಡಿದರು.