ನವದೆಹಲಿ : ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ, ನಾಲ್ಕೂ ಟೆಸ್ಟ್ಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಬೇಕೆಂದ್ರೆ ವೇಗಿ ಜಸ್ಪ್ರೀತ್ ಬುಮ್ರಾ ಅವರ ಸಂಪೂರ್ಣ ಫಿಟ್ನೆಸ್ ಕಾರಣವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಟೀಂ ಇಂಡಿಯಾಗೆ ಒಂದು ಅಸ್ತ್ರ. ಟೆಸ್ಟ್ ಸರಣಿಯನ್ನು ತಮ್ಮದಾಗಿಸಿಕೊಳ್ಳಲು ಅವರ ಬೌಲಿಂಗ್ ದಾಳಿ ಭಾರತಕ್ಕೆ ವರದಾನ ಆಗಬಲ್ಲದು ಎಂದು ಬುಮ್ರಾ ಅವರ ಬೌಲಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸೈಯ್ಯದ್ ಮುಸ್ತಕ್ ಅಲಿ ಟ್ರೋಫಿ.. ಪಂಜಾಬ್ನ ಸಂಭವನೀಯ ಪಟ್ಟಿಯಲ್ಲಿ ಯುವಿ ಹೆಸರು
ನಾನು ಭಾರತದ ಪೇಸ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಬಾರ್ಡರ್, ಗುರುವಾರದಿಂದ ಅಡಿಲೇಡ್‌ನಲ್ಲಿ ಪ್ರಾರಂಭವಾಗುವ ಬಹು ನಿರೀಕ್ಷಿತ ಟೆಸ್ಟ್ನಲ್ಲಿ ಎರಡೂ ತಂಡಗಳ ನಡುವೆ ವ್ಯತ್ಯಾಸವನ್ನುಂಟು ಮಾಡುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ.
ಅವರ ಸಂಪೂರ್ಣ ಫಿಟ್ನೆಸ್ ತಂಡಕ್ಕೆ ವರದಾನ. ಹಾಗಾಗಿ ಅವನ ಬಗ್ಗೆ ಚಿಂತೆ ಮಾಡಬೇಕಾಗಿದೆ. ಕಾರಣ ನಮ್ಮ ಪಿಚ್‌ಗಳಲ್ಲಿ ಪೇಸ್ ಹಾಗೂ ಬೌನ್ಸ್ ಬೌಲಿಂಗ್ ದಾಳಿ ವಿರೋಧಿ ತಂಡವನ್ನು ಸಲೀಸಾಗಿ ಕಟ್ಟಿ ಹಾಕಬಲ್ಲದು. ತಂಡದಲ್ಲಿ ವ್ಯಾತ್ಯಾಸ ಮಾಡುವಂತಹ ಬೌಲಿಂಗ್ ಸಾಮರ್ಥ್ಯ ಅವರಲ್ಲಿದೆ.
ಅವರ ಸದೃಢತೆ ಟೀಂ ಇಂಡಿಯಾಗೆ ಗೆಲುವು ತಂದು ಕೊಡಬಲ್ಲದು. ತಂಡಕ್ಕೆ ಗರಿಷ್ಟ ರನ್ ಒಂದೇ ಗೆಲುವು ತಂದು ಕೊಡಬಲ್ಲದು ಎಂದು ನೀವು ಭಾವಿಸಿಕೊಂಡಿದ್ದೀರಿ. ಆದರೆ, ಪೇಸ್ ಹಾಗೂ ಬೌನ್ಸ್ ಬೌಲಿಂಗ್ನಿಂದಲೂ ಆಸ್ಟ್ರೇಲಿಯಾ ಆಟಗಾರರನ್ನು ಕಟ್ಟಿ ಹಾಕಬಲ್ಲದು. ಬುಮ್ರಾ ಸದೃಢತೆಯಿಂದ ಇದು ಸಾಧ್ಯ ಎಂದಿದ್ದಾರೆ.