ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ ಕಾಮೆಂಟೇಟರ್ ಇಫ್ತಿಖಾರ್ ಅಹ್ಮದ್ ನಿಧನ

author img

By

Published : May 4, 2021, 7:36 AM IST

Updated : May 4, 2021, 8:33 AM IST

ಕಳೆದೊಂದು ವಾರದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್​ ಕಾಮೆಂಟೇಟರ್ ಇಫ್ತಿಖಾರ್ ಅಹ್ಮದ್ ತಡರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಇಫ್ತಿಖರ್ ಅಹ್ಮದ್ ನಿಧನ
ಇಫ್ತಿಖರ್ ಅಹ್ಮದ್ ನಿಧನ

ಪ್ರಯಾಗರಾಜ್: ಅಂತಾರಾಷ್ಟ್ರೀಯ ಕ್ರಿಕೆಟ್​ ಕಾಮೆಂಟೇಟರ್ ಇಫ್ತಿಖಾರ್ ಅಹ್ಮದ್ ಸೋಮವಾರ ರಾತ್ರಿ ಮಿರ್ಜಾಪುರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

1983 ರಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಇಫ್ತಿಖಾರ್​ ಅಹ್ಮದ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಇದು ಇವರು ಕಾಮೆಂಟೇಟರ್‌ ಆಗಿ ಕಾರ್ಯನಿರ್ವಹಿಸಿದ ಕೊನೆಯ ಪಂದ್ಯವಾಗಿತ್ತು.

'ಪಾಪು' ಎಂದೇ ಜನಜನಿತರಾಗಿದ್ದ 66 ವರ್ಷದ ಇಫ್ತಿಖಾರ್​ ಅಹ್ಮದ್​, ಸುಮಾರು 40 ವರ್ಷಗಳ ಕಾಲ ರೆಡಿಯೋದಲ್ಲಿ ಟೆಸ್ಟ್​ ಮತ್ತು ಒನ್​ಡೇ ಪಂದ್ಯಗಳಿಗೆ ಕಾಮೆಂಟೇಟರ್​ ಆಗಿದ್ದರು. ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.

Last Updated : May 4, 2021, 8:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.