ಎಡ್ಜ್‌ಬಾಸ್ಟನ್: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆತಿಥೇಯರು ಗೆಲುವಿನ ಸಮೀಪದಲ್ಲಿದ್ದಾರೆ. ಮೂರನೇ ದಿನದಾಟದ ವೇಳೆ ಮೈದಾನದಲ್ಲಿ ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ ಮತ್ತು ವಿರಾಟ್ ಕೊಹ್ಲಿ ಕಿತ್ತಾಡಿಕೊಂಡಿದ್ದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಗಳ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದು, 10 ತಮ್ಮನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನಿಖೆ ನಡೆಸಿ, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
-
Racist behaviour at @Edgbaston towards Indian fans in block 22 Eric Hollies. People calling us Curry C**ts and paki bas****s. We reported it to the stewards and showed them the culprits at least 10 times but no response and all we were told is to sit in our seats. @ECB_cricket pic.twitter.com/GJPFqbjIbz
— Lacabamayang!!!!!!! (@AnilSehmi) July 4, 2022 " class="align-text-top noRightClick twitterSection" data="
">Racist behaviour at @Edgbaston towards Indian fans in block 22 Eric Hollies. People calling us Curry C**ts and paki bas****s. We reported it to the stewards and showed them the culprits at least 10 times but no response and all we were told is to sit in our seats. @ECB_cricket pic.twitter.com/GJPFqbjIbz
— Lacabamayang!!!!!!! (@AnilSehmi) July 4, 2022Racist behaviour at @Edgbaston towards Indian fans in block 22 Eric Hollies. People calling us Curry C**ts and paki bas****s. We reported it to the stewards and showed them the culprits at least 10 times but no response and all we were told is to sit in our seats. @ECB_cricket pic.twitter.com/GJPFqbjIbz
— Lacabamayang!!!!!!! (@AnilSehmi) July 4, 2022
ಆರೋಪ ಕೇಳಿ ಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಜನಾಂಗೀಯ ನಿಂದನೆ ಆರೋಪದ ಬಗ್ಗೆ ಕಳವಳಗೊಂಡಿದ್ದೇವೆ. ಈ ರೀತಿಯ ನಡವಳಿಕೆಗೆ ನಮ್ಮಲ್ಲಿ ಜಾಗವಿಲ್ಲ. ಅತ್ಯಂತ ಸುರಕ್ಷಿತ ವಾತಾವರಣಕ್ಕಾಗಿ ಎಡ್ಜ್‌ಬಾಸ್ಟನ್ ಕೆಲಸ ಮಾಡಲಿದೆ ಎಂದು ತಿಳಿಸಿದೆ.
22 ನೇ ಬ್ಲಾಕ್ನಲ್ಲಿ ಘಟನೆ: "ಎಡ್ಜ್‌ಬಾಸ್ಟನ್ ಸ್ಟೇಡಿಯಂನ 22ನೇ ಬ್ಲಾಕ್ನಲ್ಲಿ ಕೆಲ ಇಂಗ್ಲೆಂಡ್ ಆಟಗಾರರು ಭಾರತೀಯರನ್ನು ಉದ್ದೇಶಿಸಿ ಅತ್ಯಂತ ಕಟುವಾಗಿ ಜನಾಂಗೀಯ ನಿಂದನೆ ಮಾಡಿದರು. 10 ನಿಮಿಷ ಹೀಗೆಯೇ ಮೂದಲಿಸಿದರು. ಈ ಬಗ್ಗೆ ಸ್ಟೇಡಿಯಂ ಸಿಬ್ಬಂದಿಗೆ ದೂರು ನೀಡಿದರೂ, ನಮ್ಮನ್ನೇ ಆಸನಗಳಲ್ಲಿ ಕೂರಲು ತಿಳಿಸಿದರು" ಎಂದು ಭಾರತದ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
"ಕ್ರೀಡಾಂಗಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಆತಂಕವಿದೆ. ಇಂತಹ ಘಟನೆ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ" ಎಂದು ಇನ್ನೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ.
ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನಲ್ಲಿ ಕಳೆದ ವರ್ಷವೂ ವರ್ಣಭೇದ ನೀತಿಯ ವಿರುದ್ಧ ಪಾಕಿಸ್ತಾನ ಮೂಲದ ಕ್ರಿಕೆಟಿಗ ಅಜೀಮ್ ರಫೀಕ್ ಮಾಡಿದ್ದ ಟ್ವೀಟ್ಗಳನ್ನು ಈ ಘಟನೆಯ ಬಳಿಕ ಮರುಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ENG vs IND: ಟೀಂ ಇಂಡಿಯಾಗೆ ಶುರುವಾಯ್ತು ಭಯ.. ಕೊನೆ ಟೆಸ್ಟ್ನಲ್ಲಿ ಗೆಲ್ಲಲಿದೆಯಾ ಇಂಗ್ಲೆಂಡ್!?