ನವದೆಹಲಿ: ಕನ್ನಡಿಗ ರಾಬಿನ್ ಉತ್ತಪ್ಪ ಎಲ್ಲ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. "ಎಲ್ಲ ಒಳ್ಳೆಯ ಸಂಗತಿಗಳು ಅಂತ್ಯ ಕಾಣಲೇಬೇಕು. ನನ್ನ ಕ್ರಿಕೆಟ್ ಜರ್ನಿಯನ್ನೂ ಇಂದಿಗೆ ಮುಗಿಸಲಿದ್ದೇನೆ. ಎಲ್ಲ ಕ್ರಿಕೆಟ್ ಮಾದರಿಗೆ ವಿದಾಯ ಹೇಳುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
2006 ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಉತ್ತಪ್ಪ, 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿದ ತಂಡದಲ್ಲಿದ್ದರು. ಈ ಪಾಕಿಸ್ತಾನ ವಿರುದ್ಧದ ಪಂದ್ಯ ಡ್ರಾ ಆದಾಗ ಬೌಲ್ ಔಟ್ನಲ್ಲಿ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಜೊತೆಗೆ ರಾಬಿತ್ ಉತ್ತಪ್ಪ ವಿಕೆಟ್ ಉರುಳಿಸಿ ಪಂದ್ಯ ಗೆಲ್ಲುವಂತೆ ಮಾಡಿದ್ದು ಅಭಿಮಾನಿಗಳ ಸ್ಮರಣೆಯಲ್ಲಿದೆ.
-
Indian cricketer Robin Uthappa announces retirement from all formats of cricket.
— ANI (@ANI) September 14, 2022 " class="align-text-top noRightClick twitterSection" data="
"All good things must come to an end, and with a grateful heart, I have decided to retire from all forms of Indian cricket," he tweets
(Pics source: His Twitter handle) pic.twitter.com/vXJFjYziPI
">Indian cricketer Robin Uthappa announces retirement from all formats of cricket.
— ANI (@ANI) September 14, 2022
"All good things must come to an end, and with a grateful heart, I have decided to retire from all forms of Indian cricket," he tweets
(Pics source: His Twitter handle) pic.twitter.com/vXJFjYziPIIndian cricketer Robin Uthappa announces retirement from all formats of cricket.
— ANI (@ANI) September 14, 2022
"All good things must come to an end, and with a grateful heart, I have decided to retire from all forms of Indian cricket," he tweets
(Pics source: His Twitter handle) pic.twitter.com/vXJFjYziPI
ಭಾರತ ಅಂತಾರಾಷ್ಟ್ರೀಯ ತಂಡದಲ್ಲಿ ಕೆಲವೇ ಪಂದ್ಯಗಳಾಡಿರುವ ರಾಬಿನ್ ಉತ್ತಪ್ಪ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಪರ 46 ಏಕದಿನ ಪಂದ್ಯಗಳಲ್ಲಿ 934 ರನ್ ಗಳಿಸಿದ್ದಾರೆ. 13 ಟಿ-20 ಪಂದ್ಯಗಳಲ್ಲಿ 249 ರನ್ ಮಾತ್ರ ಕಲೆ ಹಾಕಿದ್ದಾರೆ. 2015 ರಿಂದ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ರಾಬಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಓರ್ವ ಪುತ್ರನಿದ್ದಾನೆ. ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು.
ತಮ್ಮ ವಿದಾಯವನ್ನು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಘೋಷಿಸಿರುವ ರಾಬಿನ್ " ದೇಶ ಮತ್ತು ಕರ್ನಾಟಕವನ್ನು ಪ್ರತಿನಿಧಿಸಿರುವುದು ನನಗೆ ದೊಡ್ಡ ಗೌರವವಾಗಿದೆ. ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು. ನಿಮ್ಮೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಎರಡು ಪುಟಗಳ ವಿದಾಯದ ಬರಹವನ್ನು ಪೋಸ್ಟ್ ಮಾಡಿದ್ದಾರೆ.
“ವೃತ್ತಿಪರ ಕ್ರಿಕೆಟ್ ಆಡಲು ಆರಂಭಿಸಿ 20 ವರ್ಷಗಳಾಗಿವೆ. ಏರಿಳಿತಗಳ ಪ್ರಯಾಣ ಅದ್ಭುತವಾಗಿದೆ. ಈ ವೃತ್ತಿ ನನಗೆ ಲಾಭದಾಯಕ, ಆನಂದದಾಯಕ ಮತ್ತು ಮನುಷ್ಯನಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ಭವಿಷ್ಯ ಮತ್ತು ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಬಯಸಿದ್ದೇನೆ" ಎಂದು ತಿಳಿಸಿದ್ದಾರೆ.
ಓದಿ: ಟಿ20 ಶ್ರೇಯಾಂಕ: ವಿರಾಟ್ ಕೊಹ್ಲಿ 14, ಭುನವೇಶ್ವರ್ಗೆ 4ನೇ ಸ್ಥಾನ