ETV Bharat / sports

ಸರಣಿ ಸೋತರೂ, ಆಸ್ಟ್ರೇಲಿಯಾ ಬ್ಯಾಟರ್​ಗಳ ಮೇಲೆ ನಮ್ಮ ಬೌಲರ್​ಗಳು ಪ್ರಾಬಲ್ಯ ಸಾಧಿಸಿದ್ದು ಅದ್ಭುತ: ಮಂದಾನ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್​ ಸರಣಿಯನ್ನು ಡ್ರಾ ಮಾಡಿಕೊಂಡರೆ, ಏಕದಿನ ಸರಣಿಯನ್ನು 2-1ರಲ್ಲಿ ಮತ್ತು ಟಿ-20 ಸರಣಿಯನ್ನು 2-0ಯಲ್ಲಿ ಕಳೆದುಕೊಂಡಿತು.

Indian bowlers dominating Australian batters
ಸ್ಮೃತಿ ಮಂದಾನ
author img

By

Published : Oct 21, 2021, 8:43 PM IST

ಹೋಬರ್ಟ್​: ಭಾರತ ತಂಡದ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲು ಕಂಡಿರಬಹುದು. ಆದರೆ, ಈ ಪ್ರವಾಸದಲ್ಲಿ ತಂಡ ಸಾಕಷ್ಟು ಗಳಿಸಿಕೊಂಡಿದೆ ಮತ್ತ ಭಾರತೀಯ ಬೌಲರ್​ಗಳು ಆಸೀಸ್​ ಬ್ಯಾಟರ್​ಗಳ ವಿರುದ್ಧ ಪ್ರಾಬಲ್ಯ ಸಾಧಿಸಿರುವುದು ಬಹುದೊಡ್ಡ ಸಕಾರಾತ್ಮಕ ಬೆಳವಣಿಗೆ ಎಂದು ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್​ ಸರಣಿಯನ್ನು ಡ್ರಾ ಮಾಡಿಕೊಂಡರೆ, ಏಕದಿನ ಸರಣಿಯನ್ನು 2-1ರಲ್ಲಿ ಮತ್ತು ಟಿ-20 ಸರಣಿಯನ್ನು 2-0ಯಲ್ಲಿ ಕಳೆದುಕೊಂಡಿತು. ನಾವು ಈ ಪ್ರವಾಸದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳನ್ನು ಪಡೆದುಕೊಂಡೆವು. ಪ್ರತಿಯೊಬ್ಬರು ಉತ್ತಮವಾಗಿ ಆಡಿದ್ದಾರೆ.

ವಿಶೇಷವಾಗಿ ನಮ್ಮ ಬೌಲರ್​ಗಳು. ಇದೊಂದು ವಿಭಾಗದಲ್ಲಿ ನಾವು ಆಸೀಸ್‌ಗಿಂತ ಉತ್ತಮವಾಗಿದ್ದೇವೆ. ಇದು ಭಾರತ ತಂಡಕ್ಕೆ ಒಂದು ದೊಡ್ಡ ವಿಷಯವಾಗಿದೆ ಎಂದು ಸ್ಮೃತಿ ಮಂದಾನ ರೆಡ್​ಬುಲ್​ 10 ವರ್ಷಗಳ ಸಂಭ್ರಮದ ಕ್ಲಬ್​ಹೌಸ್​ ಸೆಷನ್​ನಲ್ಲಿ ಮಂದಾನ ಹೇಳಿದ್ದಾರೆ.

ಆಸ್ಟ್ರೇಲಿಯಾಕ್ಕೆ ಬಂದು, ಅವರ ಬೌಲರ್​ಗಳನ್ನು ಮೀರಿಸುವುದು ಅದ್ಭುತವಾಗಿದೆ. ಜೂಲನ್​ ಗೋಸ್ವಾಮಿ, ಪೂಜಾ ಏಕದಿ ಸರಣಿಯಲ್ಲಿ, ರೇಣುಕಾ ಮತ್ತು ಶಿಖಾ ಪಾಂಡೆ ಟಿ-20 ಮಾದರಿಯಲ್ಲಿ ಬೌಲಿಂಗ್ ಮಾಡಿದ ರೀತಿ ಅಮೋಘವಾಗಿತ್ತು. ನಮ್ಮ ಬೌಲರ್​ಗಳು ಆಸ್ಟ್ರೇಲಿಯಾ ಬ್ಯಾಟರ್​ಗಳ ವಿರುದ್ಧ ಮೇಲುಗೈ ಸಾಧಿಸುತ್ತಿರುವುದನ್ನು ನೋಡುವುದೇ ಅದ್ಭುತವಾಗಿದೆ, ಅದು ಈ ಪ್ರವಾಸದ ದೊಡ್ಡ ಪಾಸಿಟಿವ್​ ಎಂದು ಮಂದಾನ ಹೇಳಿದ್ದಾರೆ.

ಇದನ್ನು ಓದಿ:ಐಪಿಎಲ್​ ಪ್ರಸಾರ ಹಕ್ಕುಗಳಿಂದಲೇ 37 ಸಾವಿರ ಕೋಟಿ ರೂ.ಗಳಿಸುವ ನಿರೀಕ್ಷೆಯಲ್ಲಿದೆ ಬಿಸಿಸಿಐ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.