ETV Bharat / sports

ನ್ಯೂಜಿಲ್ಯಾಂಡ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ - ರೋಹಿತ್ ಶರ್ಮಾ ನಾಯಕತ್ವ

ಐಪಿಎಲ್ ಸ್ಟಾರ್​ ವೆಂಕಟೇಶ್​ ಅಯ್ಯರ್ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಮಾರ್ಚ್​ನಲ್ಲಿ ಗಾಯಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದ ಶ್ರೇಯಸ್​ ಅಯ್ಯರ್ ಸೇರಿದಂತೆ ಅಕ್ಷರ್ ಪಟೇಲ್ ದೀಪಕ್ ಚಾಹರ್​, ಮೊಹಮ್ಮದ್ ಸಿರಾಜ್​ ಕಮ್​ಬ್ಯಾಕ್ ಮಾಡಿದ್ದಾರೆ

ಭಾರತ vs ನ್ಯೂಜಿಲ್ಯಾಂಡ್ ಟಿ20
ಭಾರತ vs ನ್ಯೂಜಿಲ್ಯಾಂಡ್ ಟಿ20
author img

By

Published : Nov 17, 2021, 6:46 PM IST

Updated : Nov 17, 2021, 6:56 PM IST

ಜೈಪುರ: ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಧಿಕೃತ ಭಾರತ ತಂಡದ ನಾಯಕನಾಗಿದ್ದರೆ, ರಾಹುಲ್ ದ್ರಾವಿಡ್​ ಅವರಿಗೆ ಕೋಚ್​ ಆಗಿ ಇದೇ ಮೊದಲ ಪಂದ್ಯವಾಗಿದೆ. ಇನ್ನು ಈ ಪಂದ್ಯದಲ್ಲಿ ಐಪಿಎಲ್ ಸ್ಟಾರ್​ ವೆಂಕಟೇಶ್​ ಅಯ್ಯರ್ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಮಾರ್ಚ್​ನಲ್ಲಿ ಗಾಯಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದ ಶ್ರೇಯಸ್​ ಅಯ್ಯರ್ ಸೇರಿದಂತೆ ಅಕ್ಷರ್ ಪಟೇಲ್ ದೀಪಕ್ ಚಾಹರ್​, ಮೊಹಮ್ಮದ್ ಸಿರಾಜ್​ ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ ಯುಜ್ವೇಂದ್ರ ಚಹಾಲ್ ಈ ಪಂದ್ಯದಲ್ಲೂ ಅವಕಾಶ ವಂಚಿತರಾಗಿದ್ದಾರೆ.

ಇತ್ತ ನ್ಯೂಜಿಲ್ಯಾಂಡ್ ತಂಡದಲ್ಲಿ ಕೇನ್​ ವಿಲಿಯಮ್ಸನ್​ ಬದಲಿಗೆ ಟಿಮ್ ಸೌಥಿ ನಾಯಕನಾಗಿದ್ದಾರೆ. ಆಲ್​ರೌಂಡರ್​ ನೀಶಮ್, ಸೋಧಿ ಮತ್ತು ಮಿಲ್ನೆ ಹೊರಗುಳಿದಿದ್ದರೆ, ಲಾಕಿ ಫರ್ಗ್ಯುಸನ್​, ಟಾಪ್ ಆಸ್ಟಲ್, ರಚಿನ್ ರವೀಂದ್ರ ಮತ್ತು ಮಾರ್ಕ್​ ಚಾಪ್​ಮನ್​ ಆಡುತ್ತಿದ್ದಾರೆ.

ನ್ಯೂಜಿಲೆಂಡ್ (ಪ್ಲೇಯಿಂಗ್ XI): ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್ (ವಿಕೀ), ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ (ನಾಯಕ), ಟಾಡ್ ಆಸ್ಟಲ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್

ಭಾರತ (ಆಡುವ XI): ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೀ), ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್

Last Updated : Nov 17, 2021, 6:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.