ETV Bharat / sports

IND vs ENG 1st T20: ಹಾರ್ದಿಕ್‌ ಅಬ್ಬರಕ್ಕೆ ಇಂಗ್ಲೆಂಡ್‌ ತತ್ತರ; ಭಾರತಕ್ಕೆ ಅಮೋಘ ವಿಜಯ - ಇಂಗ್ಲೆಂಡ್​ ವಿರುದ್ಧ ಭಾರತ ಮೊದಲ ಟಿ20 ಪಂದ್ಯ

ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿತು.

India won against England, India tour of England 2022, The Rose Bowl in Southampton, England vs India 1st T20I, ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ ಜಯ, ಭಾರತ ಇಂಗ್ಲೆಂಡ್​ ಪ್ರವಾಸ 2022, ಸೌತಾಂಪ್ಟನ್​ನ ರೋಸ್​ ಬೌಲ್​ ಮೈದಾನ, ಇಂಗ್ಲೆಂಡ್​ ವಿರುದ್ಧ ಭಾರತ ಮೊದಲ ಟಿ20 ಪಂದ್ಯ,
ಬ್ಯಾಟಿಂಗ್​-ಬೌಲಿಂಗ್​ನಲ್ಲಿ ಮಿಂಚಿದ ಹಾರ್ದಿಕ್​ ಪಾಂಡ್ಯಾ
author img

By

Published : Jul 8, 2022, 7:10 AM IST

ಸೌತಾಂಪ್ಟನ್(ಇಂಗ್ಲೆಂಡ್)​: ಇಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಆಕರ್ಷಕ ಆಲ್‌ರೌಂಡ್‌ ಆಟದ ಫಲವಾಗಿ ಟೀಂ ಇಂಡಿಯಾ ಭರ್ಜರಿ ಗೆಲುವು ಪಡೆಯಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 1-0ರ ಮುನ್ನಡೆ ಪಡೆದಿದೆ.

ಭಾರತ ಇನಿಂಗ್ಸ್​: ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತ್ತು. ಓಪನರ್‌ ರೋಹಿತ್ ಶರ್ಮಾ 24 ರನ್ ಗಳಿಸಿ ಮೊಯಿನ್ ಬೌಲಿಂಗ್​ನಲ್ಲಿ ಔಟಾಗಿ ಪೆವಿಲಿಯನ್​ ಹಾದಿ ಹಿಡಿದರು. 8 ರನ್​ ಗಳಿಸಿದ್ದ ಇಶಾನ್ ಕಿಶಾನ್​ ಸಹ ಮೊಯಿನ್ ಕೈಚಳಕ್ಕೆ ಕ್ರೀಸ್‌ನಿಂದ ನಿರ್ಗಮಿಸಿದರು.

ಅಮೋಘ ಲಯದಲ್ಲಿರುವ ದೀಪಕ್ ಹೂಡಾ 33 ರನ್​ ಮತ್ತು ಸೂರ್ಯಕುಮಾರ್ ಯಾದವ್ 39 ರನ್ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಇದಾದ ಬಳಿಕ ಬಂದ ಸ್ಫೋಟಕ ಬ್ಯಾಟರ್‌ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 51 ರನ್ ಗಳಿಸಿ ಮಿಂಚು ಹರಿಸಿದರು. ಇನ್ನುಳಿದಂತೆ ಅಕ್ಷರ್ ಪಟೇಲ್ 17​, ದಿನೇಶ್ ಕಾರ್ತಿಕ್ 11, ಹರ್ಷಲ್ ಪಟೇಲ್ 3, ಭುವನೇಶ್ವರ್ ಕುಮಾರ್ 1 ಮತ್ತು ಅರ್ಷದೀಪ್​ ಸಿಂಗ್ 2 ರನ್​ ಸೇರಿಸಿದರು. ಒಟ್ಟಾರೆ 198 ರನ್​ ಕಲೆ ಹಾಕುವ ಮೂಲಕ ಇಂಗ್ಲೆಂಡ್​ ತಂಡಕ್ಕೆ ಬೃಹತ್​ ಗುರಿ ನೀಡಿತು. ಇಂಗ್ಲೆಂಡ್ ಪರ ಮೊಯಿನ್ ಅಲಿ, ಜೋರ್ಡಾನ್ ತಲಾ 2 ವಿಕೆಟ್ ಪಡೆದರೆ, ಟೊಪ್ಲಿ, ಮ್ಯಾಥ್ಯೂ ಫರ್ಕಿನ್ ಸನ್ ಮತ್ತು ಮಿಲ್ಸ್ ತಲಾ ಒಂದೊಂದು ವಿಕೆಟ್ ಕಿತ್ತರು.

ಇದನ್ನೂ ಓದಿ: IND vs ENG 1st T20I: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ

ಇಂಗ್ಲೆಂಡ್​ ಇನಿಂಗ್ಸ್: ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್​ ತಂಡಕ್ಕೆ ಭಾರತ ಬೌಲರ್ಸ್​ ಆಘಾತದ ಮೇಲೆ ಆಘಾತವನ್ನೇ ನೀಡಿದರು. ಭುವನೇಶ್ವರ್ ಕುಮಾರ್ ಅವರ ಮೊದಲ ಎಸೆತದಲ್ಲೇ ಬಟ್ಲರ್ ಕ್ಲೀನ್‌ ಬೌಲ್ಡ್​ ಆದರು. ಡೇವಿಡ್​ ಮಲನ್ ಕೂಡಾ​ ಹೆಚ್ಚು ಹೊತ್ತು ಕ್ರೀಸ್​ ಕಚ್ಚಿ ನಿಲ್ಲಲಿಲ್ಲ. ಸ್ಫೋಟಕ ಬ್ಯಾಟರ್‌ ಲಿವಿಂಗ್​​ಸ್ಟೋನ್ ತಂಡಕ್ಕೆ ಯಾವುದೇ ಕೊಡುಗೆ ನೀಡದೆ ಔಟಾದರು. 6.1 ಓವರ್​ಗಳಿಗೆ 4 ವಿಕೆಟ್​ ನಷ್ಟಕ್ಕೆ ಇಂಗ್ಲೆಂಡ್​ 33 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಇಂಥ ಪರಿಸ್ಥಿತಿಯಲ್ಲಿ ತಂಡಕ್ಕೆ ಹ್ಯಾರಿ ಬ್ರೊಕ್ ಮತ್ತು ಮೊಯಿನ್ ಅಲಿ ಆಸರೆಯಾದರು. ಈ ಇಬ್ಬರು ಆಟಗಾರರು ಸುಮಾರು 61 ರನ್​ಗಳ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಆದ್ರೆ 28 ರನ್​ ಗಳಿಸಿ ಆಟವಾಡುತ್ತಿದ್ದ ಹ್ಯಾರಿ ಬ್ರೊಕ್​ ಚಾಹಲ್​ ಬೌಲಿಂಗ್​ನಲ್ಲಿ ಔಟಾದರು. ಇದರ ಬೆನ್ನಲ್ಲೇ ಮೊಯಿನ್​ ಅಲಿ ಕೂಡಾ ಚಾಹಲ್​ ಬೌಲಿಂಗ್​ನಲ್ಲೇ ವಿಕೆಟ್​ ಒಪ್ಪಿಸಿದರು. ಒಟ್ಟಾರೆ ಇಂಗ್ಲೆಂಡ್​ ನಿಗದಿತ 20 ಓವರ್​ಗಳಿಗೆ 148 ರನ್​ ಗಳಿಸಿ ಸರ್ವಪತನ ಕಂಡಿತು.

ಹಾರ್ದಿಕ್ ಪಾಂಡ್ಯ 4 ವಿಕೆಟ್​ ಪಡೆದು ಮಿಂಚಿದ್ರೆ, ಚಹಲ್​ ಮತ್ತು ಅರ್ಷ್‌ದೀಪ್​ ಸಿಂಗ್​ ತಲಾ ಎರಡು ವಿಕೆಟ್​ ಸಾಧನೆ ಮಾಡಿದರು. ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಒಂದೊಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಆಸರೆಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.