ETV Bharat / sports

ಮಹಿಳಾ ಕ್ರಿಕೆಟ್‌ ಟೆಸ್ಟ್‌: ದೀಪ್ತಿಗೆ 'ಪಂಚ'ಕಜ್ಜಾಯ​; ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಭಾರಿ ಮುನ್ನಡೆ - ದೀಪ್ತಿ ಚೊಚ್ಚಲ ಪಂಚ ವಿಕೆಟ್​ ಗುಚ್ಛ

ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತದ ವನಿತೆಯರು ಮೇಲುಗೈ ಸಾಧಿಸಿದ್ದಾರೆ.

India Women vs England Women Test Score update

author img

By ETV Bharat Karnataka Team

Published : Dec 15, 2023, 4:36 PM IST

Updated : Dec 15, 2023, 4:42 PM IST

ಮುಂಬೈ(ಮಹಾರಾಷ್ಟ್ರ): ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ನಲ್ಲಿ ಭಾರತದ ವನಿತೆಯರಿಗೆ ಮುನ್ನಡೆ ಸಿಕ್ಕಿದೆ. ದೀಪ್ತಿ ಶರ್ಮಾ ಅವರ ಮಾರಕ ಸ್ಪಿನ್​ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್​ ಬ್ಯಾಟರ್​​ಗಳು ಮುಂಕಾದರು. ಶರ್ಮಾ ಅವರ ಟೆಸ್ಟ್​ ವೃತ್ತಿ ಜೀವನದ ಚೊಚ್ಚಲ 5 ವಿಕೆಟ್ ಸಾಧನೆ ಮತ್ತು ಇತರ ಬೌಲರ್​ಗಳ ಕರಾರುವಾಕ್ ದಾಳಿಗೆ ಇಂಗ್ಲೆಂಡ್​ ವನಿತೆಯರ ತಂಡ 35.3 ಓವರ್‌ ಆಟವಾಡಿ​ 136 ರನ್‌ಗಳಿಗೆ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತು. ಈ ಮೂಲಕ ಭಾರತ 292 ರನ್​​ಗಳ ಮುನ್ನಡೆ ಸಾಧಿಸಿದೆ.

ನಿನ್ನೆ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತದ ಶುಭಾ ಸತೀಶ್, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಮತ್ತು ಯಾಸ್ತಿಕಾ ಭಾಟಿಯಾ ಅವರ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 94 ಓವರ್​​ಗೆ 7 ವಿಕೆಟ್​ ಕಳೆದುಕೊಂಡು 410 ರನ್​ ಕಲೆಹಾಕಿತ್ತು. ಮೂರು ವಿಕೆಟ್​ ಉಳಿಸಿಕೊಂಡು ಎರಡನೇ ದಿನಾರಂಭಿಸಿದ ತಂಡ 10.3 ಓವರ್​ ಆಡಿ ಆಲ್​ಔಟಾಯಿತು. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 428 ರನ್ ಕಲೆಹಾಕಿತ್ತು.

ಇದಾದ ನಂತರ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ ತಂಡಕ್ಕೆ ರೇಣುಕಾ ಠಾಕೂರ್ ಸಿಂಗ್ ಮೊದಲ ಶಾಕ್​ ಕೊಟ್ಟರು. ತಂಡದ ಮೊತ್ತ 13 ಆಗಿದ್ದಾಗ ಸೋಫಿಯಾ ಡಂಕ್ಲಿ (11) ವಿಕೆಟ್​ ಒಪ್ಪಿಸಿದರು. ಅವರ ಬೆನ್ನಲ್ಲೇ ನಾಯಕಿ ಹೀದರ್ ನೈಟ್ ವಿಕೆಟ್ ಅ​​ನ್ನು ಪೂಜಾ ವಸ್ತ್ರಾಕರ್ ಉರುಳಿಸಿದರು.

ಮೂರನೇ ವಿಕೆಟ್​ಗೆ ಒಂದಾದ ಟಮ್ಮಿ ಬ್ಯೂಮಾಂಟ್ ಮತ್ತು ನ್ಯಾಟ್ ಸ್ಕಿವರ್-ಬ್ರಂಟ್ ತಂಡವನ್ನು ಕಾಡಲು ಆರಂಭಿಸಿದರು. ವಿಕೆಟ್​ ಕಾಯ್ದುಕೊಂಡು ಒಂದೊಂದೇ ರನ್ ಕದಿಯಲು ಆರಂಭಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ ಅರ್ಧಶತಕದ ತಾಳ್ಮೆಯ ಜೊತೆಯಾಟವಾಡಿತು. ಈ ವೇಳೆ ಸಿಕ್ಕ ಒಂದು ಅವಕಾಶದಲ್ಲಿ ಟಮ್ಮಿ ಬ್ಯೂಮಾಂಟ್ ಅವರನ್ನು ಪೂಜಾ ವಸ್ತ್ರಾಕರ್​ ಡೈರೆಕ್ಟ್ ಹಿಟ್​ ಮೂಲಕ ಔಟ್​ ಮಾಡಿದರು.

ಬ್ರಂಟ್ ಅರ್ಧಶತಕ: ನ್ಯಾಟ್ ಸ್ಕಿವರ್ ಬ್ರಂಟ್ ಏಕಾಂಗಿಯಾಗಿ ಭಾರತದ ಬೌಲಿಂಗ್​ ದಾಳಿ ಎದುರಿಸಿ ಅರ್ಧಶತಕ ಪೂರೈಸಿದರು. ಇವರನ್ನು ಹೊರತುಪಡಿಸಿ ಮಿಕ್ಕ ಆಟಗಾರ್ತಿಯರಾರೂ 20 ರನ್​ಗಳ ಗಡಿ ದಾಟಲಿಲ್ಲ. ಬ್ಯೂಮಾಂಟ್​ ವಿಕೆಟ್​ ಪತನದ ನಂತರ ಬ್ರಂಟ್ ಜೊತೆಗೆ ದೊಡ್ಡ ಜೊತೆಯಾಟವನ್ನು ಯಾರೂ ಮಾಡಲಿಲ್ಲ. ಡೇನಿಯಲ್ ವ್ಯಾಟ್ (19), ಆಮಿ ಜೋನ್ಸ್ (12) ಮತ್ತು ಸೋಫಿ ಎಕ್ಲೆಸ್ಟೋನ್ (0) ಬೇಗ ವಿಕೆಟ್​ ಕಳೆದುಕೊಂಡರು. ಇದೇ ವೇಳೆ, 70 ಎಸೆತ​ ಎದುರಿಸಿ 10 ಬೌಂಡರಿ ಸಹಾಯದಿಂದ 59 ರನ್​ ಕಲೆಹಾಕಿದ್ದ ನ್ಯಾಟ್ ಸ್ಕಿವರ್-ಬ್ರಂಟ್ ಸಹ ಔಟಾದರು.

ಕೊನೆಯ ಮೂರು ವಿಕೆಟ್​ಗಳನ್ನು ಕೇವಲ 6 ರನ್​ಗಳ ಅಂತರದಲ್ಲಿ ಭಾರತೀಯ ಬೌಲರ್‌ಗಳು ಬೀಳಿಸಿದರು. ಷಾರ್ಲೆಟ್ ಡೀನ್ ಶೂನ್ಯಕ್ಕೆ ವಿಕೆಟ್​ ಕೊಟ್ಟರೆ, ಕೇಟ್ ಕ್ರಾಸ್ 1 ಮತ್ತು ಲಾರೆನ್ ಫೈಲರ್ 5 ರನ್​ ಗಳಿಸಿ ಔಟಾದರು. ಮೊದಲ ಇನ್ನಿಂಗ್ಸ್​​ ಆರಂಭಿಸಿದ 35.3 ಓವರ್​ಗೆ ಇಂಗ್ಲೆಂಡ್​ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 136 ರನ್​ ಗಳಿಸಲಷ್ಟೇ ಶಕ್ತವಾಯಿತು. 292 ರನ್​ ಮುನ್ನಡೆ ಪಡೆದ ಭಾರತದ ವನಿತೆಯರು ಮೊದಲ ವಿರಾಮದ ನಂತರ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಮಿಂಚಿದ ದೀಪ್ತಿ: ಆಂಗ್ಲರ ವಿರುದ್ಧ ಕೇವಲ 5.3 ಓವರ್​ ಮಾಡಿದ ದೀಪ್ತಿ 4 ಮೇಡನ್​ ಓವರ್​ ಮಾಡಿ ಕೇವಲ 7 ರನ್​ ಕೊಟ್ಟು 5 ವಿಕೆಟ್​ ಕಬಳಿಸಿದರು. ಇದು ಅವರ ಟೆಸ್ಟ್​ ವೃತ್ತಿಜೀವನದ ಅತ್ಯುತ್ತಮ​ ಪ್ರದರ್ಶನವಾಗಿದೆ. ಸ್ನೇಹ ರಾಣಾ 2 ವಿಕೆಟ್​, ಪೂಜಾ ವಸ್ತ್ರಾಕರ್ ಮತ್ತು ರೇಣುಕಾ ಠಾಕೂರ್ ಸಿಂಗ್ ತಲಾ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಸೂರ್ಯ ಶತಕ, ಕುಲದೀಪ್​ ಮಾರಕ ಬೌಲಿಂಗ್​ಗೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 106 ರನ್​ಗಳ ಭರ್ಜರಿ ಜಯ: ಸರಣಿ ಸಮಬಲ

Last Updated : Dec 15, 2023, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.