ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಾಂಖೆಡೆ ಮೈದಾನದಲ್ಲಿ ಭಾರತದ ವನಿತೆಯರ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ. ಕಠಿಣ ಹೋರಾಟದ ನಡುವೆಯೂ 3 ರನ್ಗಳಿಂದ ಸೋತು ಸರಣಿಯನ್ನು ಹರ್ಮನ್ಪ್ರೀತ್ ಕೌರ್ ಪಡೆ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ದೀಪ್ತಿ ಶರ್ಮಾ ಕಿತ್ತ ವಿಕೆಟ್ ಮತ್ತು ರಿಚಾ ಘೋಷ್ ಅವರ 96 ರನ್ಗಳ ಇನ್ನಿಂಗ್ಸ್ ವ್ಯರ್ಥವಾಯಿತು. 259 ರನ್ಗಳ ಗುರಿ ಬೆನ್ನತ್ತಿದ ಭಾರತ 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 255 ರನ್ ಗಳಿಸಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗೆ 8 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿ ಸ್ಪರ್ಧಾತ್ಮಕ ಗುರಿಯನ್ನು ನೀಡಿತು. ಆಸೀಸ್ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ (63 ರನ್) ಮತ್ತು ಎಲ್ಲಿಸ್ ಪೆರ್ರಿ (50 ರನ್) ಅವರ ಅರ್ಧಶತಕ ತಂಡಕ್ಕೆ ಬಲ ನೀಡಿತು. ಭಾರತ ಈ ಇನ್ನಿಂಗ್ಸ್ನಲ್ಲಿ 7 ಕ್ಯಾಚ್ ಕೈಚೆಲ್ಲಿತು. ಬೌಲಿಂಗ್ನಲ್ಲಿ ದೀಪ್ತಿ ಶರ್ಮಾ 10 ಓವರ್ ಮಾಡಿ 38 ರನ್ ಕೊಟ್ಟು 5 ವಿಕೆಟ್ ಕಿತ್ತರೆ, ಪೂಜಾ, ಶ್ರೇಯಾಂಕಾ ಪಾಟೀಲ್ ಮತ್ತು ಸ್ನೇಹಾ ರಾಣಾ ತಲಾ ಒಂದು ವಿಕೆಟ್ ಪಡೆದರು.
259 ರನ್ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 14 ರನ್ಗಳಿಸಿ ಯಾಸ್ತಿಕಾ ಭಾಟಿಯಾ ಔಟ್ ಆದರೆ, 34 ರನ್ಗೆ ಸ್ಮೃತಿ ಮಂಧಾನ ಪೆವಿಲಿಯನ್ ಹಾದಿ ಹಿಡಿದರು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ತಂಡಕ್ಕೆ ಆರಂಭಿಕ ವಿಕೆಟ್ ಪತನ ಒತ್ತಡಕ್ಕೆ ಕಾರಣವಾಯಿತು.
-
The match went down to the very last over but it's Australia who win by 3 runs at the end. #TeamIndia will aim to bounce back in the 3rd & Final ODI.
— BCCI Women (@BCCIWomen) December 30, 2023 " class="align-text-top noRightClick twitterSection" data="
Scorecard ▶️ https://t.co/yDjyu27FoW#INDvAUS | @IDFCFIRSTBank pic.twitter.com/6j0EHRUlsw
">The match went down to the very last over but it's Australia who win by 3 runs at the end. #TeamIndia will aim to bounce back in the 3rd & Final ODI.
— BCCI Women (@BCCIWomen) December 30, 2023
Scorecard ▶️ https://t.co/yDjyu27FoW#INDvAUS | @IDFCFIRSTBank pic.twitter.com/6j0EHRUlswThe match went down to the very last over but it's Australia who win by 3 runs at the end. #TeamIndia will aim to bounce back in the 3rd & Final ODI.
— BCCI Women (@BCCIWomen) December 30, 2023
Scorecard ▶️ https://t.co/yDjyu27FoW#INDvAUS | @IDFCFIRSTBank pic.twitter.com/6j0EHRUlsw
ರಾಡ್ರಿಗಸ್, ರಿಚಾ ಘೋಷ್ ಆಸರೆ: ಎರಡು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ತಂಡಕ್ಕೆ ಮೂರನೇ ವಿಕೆಟ್ಗೆ ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ಆಸರೆಯಾದರು. ಈ ಜೋಡಿ 88 ರನ್ಗಳ ಪಾಲುದಾರಿಕೆ ಹಂಚಿಕೊಂಡಿತು. ಜೆಮಿಮಾ ರಾಡ್ರಿಗಸ್ ಅರ್ಧಶತಕದಂಚಿನಲ್ಲಿ ಎಡವಿದರು. ಅವರು ಇನ್ನಿಂಗ್ಸ್ನಲ್ಲಿ 55 ಬಾಲ್ ಎದುರಿಸಿ 3 ಬೌಂಡರಿ ಸಹಾಯದಿಂದ 44 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಬಂದ ನಾಯಕಿ ಹರ್ಮನ್ಪ್ರೀತ್ ಕೌರ್ 5 ರನ್ಗೆ ಔಟ್ ಆದರು.
ಶತಕ ವಂಚಿತ ರಿಚಾ: ಆಸ್ಟ್ರೇಲಿಯಾದ ಬೌಲಿಂಗ್ ವಿರುದ್ಧ ಯಶಸ್ವಿ ಬ್ಯಾಟಿಂಗ್ ಮಾಡಿದ್ದು ರಿಚಾ ಘೋಷ್. ವಿಕೆಟ್ ಪತನದ ನಡುವೆಯೂ ಮೈದಾನದ ಮೂಲೆ ಮೂಲೆಗಳಿಂದ ಬೌಂಡರಿ ಪಡೆದು ಶತಕದತ್ತ ಧಾವಿಸುತ್ತಿದ್ದರು. ಇನ್ನು 4 ರನ್ ಬೇಕು ಎನ್ನುವಾಗ ಕ್ಯಾಚ್ ಇತ್ತು ಪೆವಿಲಿಯನ್ ದಾರಿ ಹಿಡಿದರು. ಇನ್ನಿಂಗ್ಸ್ನಲ್ಲಿ 117 ಬಾಲ್ ಆಡಿ 13 ಬೌಂಡರಿಯಿಂದ 96 ರನ್ ಗಳಿಸಿದರು.
ಕೆಳ ಕ್ರಮಾಂಕ ವಿಫಲ: ಬೌಲಿಂಗ್ನಲ್ಲಿ ಮಿಂಚಿದ್ದ ದೀಪ್ತಿ ಶರ್ಮಾ ಪಂದ್ಯವನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನಿಸಿದರಾದರೂ ಅವರಿಗೆ ಯಾರೂ ಜೊತೆಯಾಗಲಿಲ್ಲ. ಅಮಂಜೋತ್ ಕೌರ್ (4), ಪೂಜಾ ವಸ್ತ್ರಾಕರ್ (8) ಮತ್ತು ಹರ್ಲಿನ್ ಡಿಯೋಲ್ (1) ವಿಫಲತೆ ಎದುರಿಸಿದರು. 50 ಓವರ್ ಅಂತ್ಯಕ್ಕೆ ಭಾರತ 255 ರನ್ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟ ವಿನೇಶ್ ಫೋಗಟ್