ತರೌಬಾ (ವೆಸ್ಟ್ ಇಂಡೀಸ್): ವಿಂಡೀಸ್ ವಿರುದ್ಧದ ಮೊದಲ ಪಂದ್ಯ ಸೋತ ಭಾರತಕ್ಕೆ ಇನ್ನೊಂದು ನಿರಾಸೆ ಎದುರಾಗಿದೆ. ನಿಧಾನಗತಿಯ ಬೌಲಿಂಗ್ಗಾಗಿ ಟೀಂ ಇಂಡಿಯಾಕ್ಕೆ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡ ವಿಧಿಸಲಾಗಿದೆ. ಗೆಲುವು ದಾಖಲಿಸಿದ ರೋವ್‌ಮನ್ ಪೊವೆಲ್ ತಂಡಕ್ಕೆ ಶೇ 10ರಷ್ಟು ದಂಡದ ಬರೆ ಬಿದ್ದಿದೆ.
ಟ್ರಿನಿಡಾಡ್ ಮತ್ತು ಟೊಬಾಗೊದ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಕೇವಲ 4 ರನ್‌ನಿಂದ ಸೋಲು ಕಂಡಿತ್ತು. ವೆಸ್ಟ್ ಇಂಡೀಸ್ ಬೌಲರ್ಗಳು ಪಂದ್ಯವನ್ನು ಅತ್ಯಂತ ರೋಚಕ ಘಟ್ಟಕ್ಕೆ ತೆಗೆದುಕೊಂಡು ಹೋಗಿ ಗೆಲುವು ಸಾಧಿಸಿದ್ದರು. ಭಾರತ 16ನೇ ಓವರ್ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕಳೆದುಕೊಂಡಿದ್ದು ಪಂದ್ಯದ ಸೋಲಿಗೆ ಕಾರಣವಾಯಿತು.
ಈ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಸಂಪೂರ್ಣ ಓವರ್ ಬೌಲ್ ಮಾಡಿದ್ದಾರೆ. ವೆಸ್ಟ್ ಇಂಡೀಸ್‌ಗೆ ಮೊದಲು ಬೌಲ್ ಮಾಡಿದ ಭಾರತ ಒಂದು ಓವರ್ ಅನ್ನು ತಡವಾಗಿ ಹಾಕಿತ್ತು. ಚೇಸ್ ಮಾಡುವಾಗ ಕೊನೆಯ ಓವರ್ಗಳಲ್ಲಿ ಭಾರತಕ್ಕೆ ಕೆಲವೇ ರನ್ಗಳು ಬೇಕಾಗಿದ್ದರಿಂದ ರೋವ್‌ಮನ್ ಪೊವೆಲ್ ಎರಡು ಓವರ್ಗಳನ್ನು ನಿಧಾನಗತಿಯಲ್ಲಿ ಹಾಕಿದ್ದರು. ಇದರಿಂದ ಭಾರತಕ್ಕೆ ಪಂದ್ಯ ಶೇ 5ರಷ್ಟು, ವೆಸ್ಟ್ ಇಂಡೀಸ್‌ಗೆ 10ರಷ್ಟು ದಂಡವನ್ನು ಐಸಿಸಿ ವಿಧಿಸಿದೆ.
-
India fined 5% of match fees & West Indies fined 10% of match fees for slow over-rate in 1st T20I. pic.twitter.com/S2lOwCTptH
— Johns. (@CricCrazyJohns) August 4, 2023 " class="align-text-top noRightClick twitterSection" data="
">India fined 5% of match fees & West Indies fined 10% of match fees for slow over-rate in 1st T20I. pic.twitter.com/S2lOwCTptH
— Johns. (@CricCrazyJohns) August 4, 2023India fined 5% of match fees & West Indies fined 10% of match fees for slow over-rate in 1st T20I. pic.twitter.com/S2lOwCTptH
— Johns. (@CricCrazyJohns) August 4, 2023
ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್‌ಸನ್ ಅವರು ಹಾರ್ದಿಕ್ ಪಾಂಡ್ಯ ಮತ್ತು ರೋವ್‌ಮನ್ ಪೊವೆಲ್ ಅವರ ತಂಡಗಳು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದನ್ನು ಪರಿಗಣಿಸಿದ ನಂತರ ಕ್ರಮವಾಗಿ ಒಂದು ಮತ್ತು ಎರಡು ಓವರ್‌ಗಳ ಗುರಿ ಕಡಿಮೆ ಎಂದು ತೀರ್ಪು ನೀಡಿ ದಂಡ ಹಾಕಿದೆ.
ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಉಲ್ಲಂಘನೆ ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ. ನಿಯಮದಂತೆ ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದ್ದು, ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಶೇ 5 ರಷ್ಟು ದಂಡ ವಿಧಿಸಲಾಗುತ್ತದೆ.
ಪಾಂಡ್ಯ ಮತ್ತು ಪೊವೆಲ್ ಒಪ್ಪಿಕೊಂಡಿದ್ದರಿಂದ ವಿಚಾರಣೆ ಇಲ್ಲದೇ ದಂಡ ವಿಧಿಸಲಾಗಿದೆ. ಆನ್-ಫೀಲ್ಡ್ ಅಂಪೈರ್‌ಗಳಾದ ಗ್ರೆಗೊರಿ ಬ್ರಾಥ್‌ವೈಟ್ ಮತ್ತು ಪ್ಯಾಟ್ರಿಕ್ ಗುಸ್ಟರ್ಡ್, ಮೂರನೇ ಅಂಪೈರ್ ನಿಗೆಲ್ ಡುಗಿಡ್ ಮತ್ತು ನಾಲ್ಕನೇ ಅಂಪೈರ್ ಲೆಸ್ಲಿ ರೀಫರ್ ಅವರು ಸಹ ನಿಧಾನಗತಿ ಬೌಲಿಂಗ್ನ ಆರೋಪ ಮಾಡಿದ್ದಾರೆ.
ಪಂದ್ಯ ಹೀಗಿತ್ತು: ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ವಿಂಡೀಸ್ ಮೊದಲ ಪವರ್ ಪ್ಲೇ ಅಂತ್ಯಕ್ಕೆ 2 ವಿಕೆಟ್ ನಷ್ಟದೊಂದಿಗೆ 54 ರನ್ ಗಳಿಸಿತ್ತು. 14ನೇ ಓವರ್ ವೇಳೆಗೆ 3 ವಿಕೆಟ್ಗೆ 96 ರನ್ ಕಲೆಹಾಕಿತ್ತು. ಕೊನೆಯ ಆರು ಓವರ್ನಲ್ಲಿ 53 ರನ್ ಗಳಿಸಿ, ನಿಗದಿತ ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 150 ರನ್ನ ಗುರಿ ನೀಡಿತ್ತು. ಭಾರತದ ಪರ ಅರ್ಷ್‌ದೀಪ್ ಸಿಂಗ್ ಮತ್ತು ಚಹಾಲ್ ತಲಾ ಎರಡು ವಿಕೆಟ್ ಪಡೆದರೆ, ವಿಂಡೀಸ್ ಪರ ನಾಯಕ ರೋವ್‌ಮನ್ ಪೊವೆಲ್ 48ರನ್ ಮತ್ತು ಪೂರನ್ 41 ರನ್ ಗಳಿಸಿದರು.
-
India and West Indies have pleaded guilty and accepted the proposed sanctions 👇
— ICC (@ICC) August 4, 2023 " class="align-text-top noRightClick twitterSection" data="
">India and West Indies have pleaded guilty and accepted the proposed sanctions 👇
— ICC (@ICC) August 4, 2023India and West Indies have pleaded guilty and accepted the proposed sanctions 👇
— ICC (@ICC) August 4, 2023
150 ರನ್ ಬೆನ್ನತ್ತಿದ ಭಾರತ ಆರಂಭಿಕ ಬ್ಯಾಟರ್ಗಳಾದ ಕಿಶನ್ ಮತ್ತು ಗಿಲ್ ಅವರ ವಿಕೆಟ್ ಅನ್ನು ಬೇಗ ಕಳೆದುಕೊಂಡಿತು. ತಿಲಕ್ ವರ್ಮಾ 39 ಮತ್ತು ಸೂರ್ಯ ಕುಮಾರ್ ಯಾದವ್ 21 ರನ್ ಗಳಿಸಿದ್ದು ಬಿಟ್ಟರೆ ಮತ್ತೆಲ್ಲ ಬ್ಯಾಟರ್ಗಳು 20 ರನ್ ಮೀರಲಿಲ್ಲ. ಕೊನೆಯ ಓವರ್ಗಳಲ್ಲಿ ಬಾಲ್ಗೆ ಒಂದು ರನ್ನಂತೆ ಗಳಿಸಿದ್ದರೂ ಭಾರತಕ್ಕೆ ಗೆಲುವು ಸಾಧ್ಯವಿತ್ತು. ಆದರೆ ವಿಕೆಟ್ ಇಲ್ಲದ ಕಾರಣ ನಿಗದಿತ ಓವರ್ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ 4 ರನ್‌ನಿಂದ ಪಂದ್ಯವನ್ನು ಕಳೆದುಕೊಂಡಿತು. ವೆಸ್ಟ್ ಇಂಡೀಸ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಪಡೆದುಕೊಂಡಿದೆ.
ಇದನ್ನೂ ಓದಿ: Archery Championships: ವಿಶ್ವ ಆರ್ಚರಿ ಚಾಂಪಿಯನ್ಶಿಪ್ನಲ್ಲಿ 'ಭಾರತೀ'ಯರಿಗೆ ಐತಿಹಾಸಿಕ ಚಿನ್ನ!