ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಜೊತೆಗೆ ಆತಿಥೇಯ ತಂಡದ ವಿರುದ್ಧ ಸತತ 13 ಗೆಲುವು ದಾಖಲಿಸಿರುವ ಸಾಧನೆ ಮಾಡಿದೆ.
ಜಿಂಬಾಬ್ವೆ ನೀಡಿದ್ದ 190ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 30.5 ಓವರ್ಗಳಲ್ಲಿ 192ರನ್ಗಳಿಸಿ, ಗೆಲುವಿನ ನಗೆ ಬೀರಿದೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಧವನ್(81) ಹಾಗೂ ಗಿಲ್(82)ರನ್ಗಳಿಸಿ ಅಜೇಯರಾಗಿ ಉಳಿದರು.
ಜಿಂಬಾಬ್ವೆ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆಗೆ ಆರಂಭದಲ್ಲೇ ದೀಪಕ್ ಚಹರ್ ಆಘಾತ ನೀಡಿದರು. ಆರಂಭಿಕರಾದ ಇನೋಸೆಂಟ್ ಕೈಯಾ(4), ತಡಿವಾನಾಶೆ (8) ವಿಕೆಟ್ ಉರುಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರ ಬಳಿಕ ಮಾಧವೀರ್ (5) ವಿಕೆಟ್ ಕೂಡಾ ಪಡೆದುಕೊಂಡರು.
-
That's that from the 1st ODI.
— BCCI (@BCCI) August 18, 2022 " class="align-text-top noRightClick twitterSection" data="
An unbeaten 192 run stand between @SDhawan25 & @ShubmanGill as #TeamIndia win by 10 wickets.
Scorecard - https://t.co/P3fZPWilGM #ZIMvIND pic.twitter.com/jcuGMG0oIG
">That's that from the 1st ODI.
— BCCI (@BCCI) August 18, 2022
An unbeaten 192 run stand between @SDhawan25 & @ShubmanGill as #TeamIndia win by 10 wickets.
Scorecard - https://t.co/P3fZPWilGM #ZIMvIND pic.twitter.com/jcuGMG0oIGThat's that from the 1st ODI.
— BCCI (@BCCI) August 18, 2022
An unbeaten 192 run stand between @SDhawan25 & @ShubmanGill as #TeamIndia win by 10 wickets.
Scorecard - https://t.co/P3fZPWilGM #ZIMvIND pic.twitter.com/jcuGMG0oIG
ಮಧ್ಯಮ ಕ್ರಮಾಂಕದಲ್ಲಿ ವೆಸ್ಲಿ(1) ಸಿರಾಜ್ಗೆ ಬಲಿಯಾದರೆ, ಸಿಕಂದರ್ ರಾಜಾ(12) ಪ್ರಸಿದ್ಧ ಕೃಷ್ಣ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್, ಕ್ಯಾಪ್ಟನ್ ರೆಗಿಸ್ ಚಕಬ್ವಾ(35) ಭಾರತವನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಅಕ್ಸರ್ ಪಟೇಲ್ ಯಶಸ್ವಿಯಾದರು. ಇನ್ನುಳಿದಂತೆ ಬರ್ಲೆ(11), ಜೊಂಗ್ವೆ(13) ರನ್ಗಳಿಸಿ ಔಟಾದರು.
ಇದನ್ನೂ ಓದಿ: ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಜಿಂಬಾಬ್ವೆ ತತ್ತರ: 189 ರನ್ಗಳಿಗೆ ಆಲೌಟ್
9ನೇ ವಿಕೆಟ್ ಜೊತೆಯಾಟ: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ 9ನೇ ವಿಕೆಟ್ ತುಸು ಬಲ ನೀಡಿತು. ಕ್ರೀಸ್‌ನಲ್ಲಿ ಒಂದಾದ ಬ್ರಾಡ್ ಇವಾನ್ಸ್ (33), ರಿಚರ್ಡ್(34) ರನ್ ಸಂಪಾದಿಸಿ ತಂಡವನ್ನು 180ರ ಗಡಿ ದಾಟಿಸಿದರು. ಕೊನೆಯದಾಗಿ ತಂಡ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 189ರನ್ಗಳಿಸಿದ್ದು, ಭಾರತಕ್ಕೆ 190ರನ್ಗಳ ಸಾಧಾರಣ ಗುರಿ ನೀಡಿದೆ.
ಟೀಂ ಇಂಡಿಯಾ ಪರ ಚಹರ್, ಪ್ರಸಿದ್ಧ ಕೃಷ್ಣ ಹಾಗೂ ಅಕ್ಸರ್ ಪಟೇಲ್ ತಲಾ 3 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಕಿತ್ತರು
ಧವನ್-ಗಿಲ್ ಜೊತೆಯಾಟ: 190ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ಈ ಮೂಲಕ ತಾನು ಬಲಿಷ್ಠ ತಂಡ ಎಂಬುವುದನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಆರಂಭಿಕರಾಗಿ ಕಣಕ್ಕಿಳಿದ ಧವನ್-ಗಿಲ್ ಜಿಂಬಾಬ್ವೆ ಬೌಲರ್ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು. ಇದರ ಜೊತೆಗೆ ಮೊದಲ ವಿಕೆಟ್ಗೆ 192ರನ್ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು. ಧವನ್ ಅಜೇಯ 81ರನ್ಗಳಿಕೆ ಮಾಡಿದ್ದು, ಶುಬ್ಮನ್ ಗಿಲ್ ಅಜೇಯ 82ರನ್ಗಳಿಸಿ ಜಯ ತಂದಿಟ್ಟರು.
ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ದಾಖಲೆ: ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಭಾರತ ಹೊಸದೊಂದು ದಾಖಲೆ ಬರೆದಿದೆ. ಎದುರಾಳಿ ಜಿಂಬಾಬ್ವೆ ವಿರುದ್ಧ ಸತತವಾಗಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಶಿಖರ್ ಧವನ್ ದಾಖಲೆ: ಜಿಂಬಾಬ್ವೆ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ ಏಕದಿನ ಕ್ರಿಕೆಟ್ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಶಿಖರ್ ಧವನ್ 6,500 ರನ್ಗಳಿಕೆ ಮಾಡಿದ್ದು, ಈ ಸಾಧನೆ ಮಾಡಿರುವ ಭಾರತದ 10ನೇ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.