ಪೋರ್ಟ್ ಆಫ್ ಸ್ಪೇನ್: ಸ್ಪಿನ್‌ದ್ವಯರಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಂಥ ದಿಗ್ಗಜರನ್ನೇ ಎದುರಿಸಿ ನಿಂತಿರುವ ವೆಸ್ಟ್ಇಂಡೀಸ್ ತಂಡ ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸುತ್ತಿದೆ. 3ನೇ ದಿನದಾಂತ್ಯಕ್ಕೆ 5 ವಿಕೆಟ್ಗೆ 229 ರನ್ ಗಳಿಸಿದ್ದು, ಇನ್ನೂ 209 ರನ್ಗಳ ಹಿನ್ನಡೆಯಲ್ಲಿದೆ. ಇನ್ನೆರಡು ದಿನಗಳ ಆಟದ ಅವಧಿ ಬಾಕಿ ಉಳಿದಿದೆ. ಅಲಿಕ್ ಅಥಾಂಜೆ (37), ಜಾಸನ್ ಹೋಲ್ಡರ್ (11) ಕ್ರೀಸ್ ಉಳಿಸಿಕೊಂಡಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ದಾಳಿಗೆ ನಲುಗಿ 150 ರನ್ ಗಡಿ ದಾಟಲಾಗದೇ ಹೀನಾಯ ಸೋಲು ಕಂಡಿದ್ದ ಕೆರಿಬಿಯನ್ನರು 2ನೇ ಟೆಸ್ಟ್ನಲ್ಲಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಭಾರತ ನೀಡಿರುವ 438 ರನ್ ಗುರಿಯನ್ನು ಬೆನ್ನತ್ತಿರುವ ಬ್ರಾಥ್ವೇಟ್ ಪಡೆ ಉತ್ತಮ ಆಟವಾಡುತ್ತಿದೆ.
-
Stumps on Day 3 in the second #WIvIND Test! #TeamIndia scalped 5 wickets today 👍 👍
— BCCI (@BCCI) July 22, 2023 " class="align-text-top noRightClick twitterSection" data="
We will see you tomorrow for Day 4 action.
Scorecard ▶️ https://t.co/d6oETzoH1Z pic.twitter.com/weflaQIWy1
">Stumps on Day 3 in the second #WIvIND Test! #TeamIndia scalped 5 wickets today 👍 👍
— BCCI (@BCCI) July 22, 2023
We will see you tomorrow for Day 4 action.
Scorecard ▶️ https://t.co/d6oETzoH1Z pic.twitter.com/weflaQIWy1Stumps on Day 3 in the second #WIvIND Test! #TeamIndia scalped 5 wickets today 👍 👍
— BCCI (@BCCI) July 22, 2023
We will see you tomorrow for Day 4 action.
Scorecard ▶️ https://t.co/d6oETzoH1Z pic.twitter.com/weflaQIWy1
2ನೇ ದಿನದಾಟದ ಕೊನೆಯಲ್ಲಿ 1 ವಿಕೆಟ್ಗೆ 86 ರನ್ ಗಳಿಸಿದ್ದ ವಿಂಡೀಸ್ಗೆ ಮೂರನೇ ದಿನದಾಟದಲ್ಲಿ ಮಳೆರಾಯ ಕೆಲಕಾಲ ತೊದರೆ ನೀಡಿದ. ಇದರಿಂದ ಪಂದ್ಯ 1 ಗಂಟೆಗೂ ಅಧಿಕ ಕಾಲ ವ್ಯರ್ಥವಾಯಿತು. ಮಳೆ ನಿಂತ ಬಳಿಕ ಆಟ ಆರಂಭಿಸಿದ ಕೆರಿಬಿಯನ್ನರು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.
ನಾಯಕ, ಆರಂಭಿಕ ಬ್ಯಾಟರ್ ಕ್ರೆಗ್ ಬ್ರಾಥ್ವೇಟ್ 75 ರನ್ ಗಳಿಸಿ ತಂಡವನ್ನು ಆಸರೆಯಾದರು. ಇನ್ನೊಬ್ಬ ಆರಂಭಿಕ ಟಗೆನರೈನ್ ಚಂದ್ರಪಾಲ್ 33, ಕ್ರಿಕ್ ಮೆಕೆಂಜೆ 32, ಜರ್ಮೈಮ್ ಬ್ಲಾಕ್ವುಡ್, 20, ವಿಕೆಟ್ ಕೀಪರ್ ಡ ಸಿಲ್ವಾ 10 ರನ್ ಗಳಿಸಿದರು. ಮೊದಲ ಪಂದ್ಯದ 2 ಇನಿಂಗ್ಸ್‌ನಲ್ಲಿ ಉತ್ತಮ ಆಟವಾಡಿದ್ದ ಅಲಿಕ್ ಅಥಾಂಜೆ ಅಜೇಯ 37 ರನ್ ಗಳಿಸಿದ್ದರೆ, ಜಾಸನ್ ಹೋಲ್ಡರ್ 11 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ನಡೆಯದ ಭಾರತದ ಬೌಲಿಂಗ್ ಕರಾಮತ್ತು: ಬೌಲಿಂಗ್ಗೆ ನೆರವು ನೀಡುವ ಪಿಚ್ನಲ್ಲಿ ಭಾರತದ ಆಟ ನಡೆಯಲಿಲ್ಲ. ಮೊದಲ ಟೆಸ್ಟ್ನಲ್ಲಿ ಪೂರ್ಣ ಪ್ರಾಬಲ್ಯ ಮೆರೆದಿದ್ದ ಮಾರಕ ಸ್ಪಿನ್ ಜೋಡಿ ಅಶ್ವಿನ್ ಮತ್ತು ಜಡೇಜಾ ಜಾದೂ ಇಲ್ಲಿ ವರ್ಕ್ ಆಗಲಿಲ್ಲ. ಅಶ್ವಿನ್ 33 ಓವರ್ ಎಸೆದರೂ 1 ವಿಕೆಟ್ ಮಾತ್ರ ಪಡೆದರು. ಜಡೇಜಾ 25 ಓವರ್ ಹಾಕಿದ್ದು, 2 ವಿಕೆಟ್ ಕಿತ್ತಿದ್ದಾರೆ. ಮೊಹಮದ್ ಸಿರಾಜ್, ಚೊಚ್ಚಲ ಪಂದ್ಯವಾಡುತ್ತಿರುವ ಮುಕೇಶ್ ಕುಮಾರ್ ತಲಾ 1 ವಿಕೆಟ್ ಗಳಿಸಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಭಾರತ, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ (121) ದಾಖಲೆಯ ಶತಕ, ನಾಯಕ ರೋಹಿತ್ ಶರ್ಮಾ 80, ಮೊದಲ ಪಂದ್ಯದ ಹೀರೋ ಯಶಸ್ವಿ ಜೈಸ್ವಾಲ್ 57, ರವೀಂದ್ರ ಜಡೇಜಾ 61, ಆರ್.ಅಶ್ವಿನ್ 56 ರನ್ಗಳ ನೆರವಿನಿಂದ 438 ರನ್ ಗಳಿಸಿದೆ.
ಇದನ್ನೂ ಓದಿ: India vs West Indies 2nd Test : 438 ರನ್ ಗಳಿಸಿದ ಭಾರತ.. ವೆಸ್ಟ್ ಇಂಡೀಸ್ 86-1