ಬ್ರಿಡ್ಜ್‌ಟೌನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಭಾರತ ತಂಡವು ತಮ್ಮ ಯುವ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳನ್ನು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಸಲು ಪ್ರಯತ್ನಿಸುತ್ತದೆ. ಇಂದಿನ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಏಕೆಂದರೆ ಮುಂಬರುವ ಏಷ್ಯಾ ಕಪ್ - 2023 ಮತ್ತು ODI ವಿಶ್ವಕಪ್ - 2023ಗೆ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
India has won 15 consecutive bilateral ODI series vs West Indies.
— Johns. (@CricCrazyJohns) July 25, 2023 " class="align-text-top noRightClick twitterSection" data="
Last time West Indies won in 2006. pic.twitter.com/Exaz7kCvTH
">India has won 15 consecutive bilateral ODI series vs West Indies.
— Johns. (@CricCrazyJohns) July 25, 2023
Last time West Indies won in 2006. pic.twitter.com/Exaz7kCvTHIndia has won 15 consecutive bilateral ODI series vs West Indies.
— Johns. (@CricCrazyJohns) July 25, 2023
Last time West Indies won in 2006. pic.twitter.com/Exaz7kCvTH
ಉತ್ತಮ ಪ್ರದರ್ಶನ ನೀಡಲಿದೆ ಟೀಂ ಇಂಡಿಯಾ: ಟೆಸ್ಟ್ ಸರಣಿಯಲ್ಲಿ ತಮ್ಮ ಛಾಪು ಮೂಡಿಸಿರುವ ಇಶಾನ್ ಕಿಶನ್ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಕೂಡ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಇಶಾನ್ ಕಿಶನ್ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ರಿಷಬ್ ಪಂತ್ ಪರ್ಯಾಯವಾಗಿ, ಕೆ.ಎಲ್. ರಾಹುಲ್ ಹೊರತಾಗಿ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರ ಮೇಲೆ ಭರವಸೆ ಇಟ್ಟಿದೆ ಎಂದು ಕಾಣುತ್ತೆ ಭಾರತೀಯ ತಂಡದ ಮ್ಯಾನೇಜ್‌ಮೆಂಟ್. ಇದರಿಂದಾಗಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ಒಡಿಐಗಳಲ್ಲಿ ಪರ್ಯಾಯ ವಿಕೆಟ್ ಕೀಪರ್ ಆಗಿ ಪ್ರಯತ್ನಿಸಬಹುದು. ಸಂಜು ಸ್ಯಾಮ್ಸನ್ ಭಾರತದ ಏಕದಿನ ತಂಡಕ್ಕೆ ಹಲವು ಬಾರಿ ಬಂದಿದ್ದರೂ, ಅವರನ್ನು ಕೈಬಿಡಲಾಗಿತ್ತು. ಅವರು 11 ಒಡಿಐ ಪಂದ್ಯಗಳನ್ನು ಆಡಿದ್ದಾರೆ. 66ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
- — BCCI (@BCCI) July 26, 2023 " class="align-text-top noRightClick twitterSection" data="
— BCCI (@BCCI) July 26, 2023
">— BCCI (@BCCI) July 26, 2023
ಸ್ಪಿನ್ ಬೌಲರ್‌ಗಳು ಮಾಡಲಿದ್ದಾರೆ ಕರಾಮತ್ತು: ಇಂದಿನ ಪಂದ್ಯದಲ್ಲಿ ರಿತುರಾಜ್ ಗಾಯಕ್‌ವಾಡ್‌ಗೆ ಅವಕಾಶ ಸಿಗುವುದು ಕಷ್ಟವಾಗಿದೆ. ಆದರೆ ಸ್ಪಿನ್ ಬೌಲರ್‌ಗಳಾದ ಕುಲದೀಪ್ ಮತ್ತು ಯಜುವೇಂದ್ರ ಚಹಾಲ್ ಆಡುವ ನಿರೀಕ್ಷೆಯಿದೆ. ಈ ಬೌಲರ್‌ಗಳಲ್ಲಿ ಯಾರಿಗಾದರೂ ಅವಕಾಶ ಸಿಗಬಹುದು. ಮತ್ತೊಂದೆಡೆ, ವೇಗದ ಬೌಲರ್‌ಗಳ ವಿಭಾಗವನ್ನು ಗಮನಿಸಿದರೆ, ಮೊಹಮ್ಮದ್ ಸಿರಾಜ್ ದೇಶಕ್ಕೆ ಮರಳಿದ ನಂತರ ಮುಖೇಶ್ ಕುಮಾರ್, ಜಯದೇವ್ ಉನಾದ್ಕತ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಆಡಿಸುವ ನಿರೀಕ್ಷೆಯಿದೆ. ಇದಲ್ಲದೇ, ವೇಗದ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಈ ಆಟಗಾರರಿಗೆ ಬೆಂಬಲ ನೀಡಲಿದ್ದಾರೆ.
- — BCCI (@BCCI) July 26, 2023 " class="align-text-top noRightClick twitterSection" data="
— BCCI (@BCCI) July 26, 2023
">— BCCI (@BCCI) July 26, 2023
ಸತತ 12 ಏಕದಿನ ಸರಣಿಗಳನ್ನು ಗೆದ್ದುಕೊಂಡ ಭಾರತ: ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕ್ರಿಕೆಟ್ ತಂಡ ಸತತ 12 ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ. 2006 ರಲ್ಲಿ, ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ಭಾರತದಿಂದ ಏಕದಿನ ಸರಣಿ ಗೆದ್ದುಕೊಂಡಿತ್ತು. ಅಂದಿನಿಂದ ಇಂದಿನವರೆಗೂ ವೆಸ್ಟ್ ಇಂಡೀಸ್ ಮೇಲೆ ಭಾರತ ತಂಡವೇ ಪ್ರಾಬಲ್ಯ ಮೆರೆದಿದೆ. ಭಾರತ ತಂಡ ಸತತ 13ನೇ ಏಕದಿನ ಸರಣಿ ಗೆಲ್ಲುವ ತವಕದಲ್ಲಿದೆ.
ತುಂಬಾ ರೋಚಕವಾಗಿರಲಿದೆ ಈ ಸರಣಿ: ಕಳೆದ 8 ಏಕದಿನ ಪಂದ್ಯಗಳಲ್ಲಿ ಭಾರತವು ಪ್ರತಿ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದೆ ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಕಳೆದುಕೊಳ್ಳಲು ಏನೂ ಇಲ್ಲ. ವೆಸ್ಟ್ ಇಂಡೀಸ್ ತಂಡವು ಗರಿಷ್ಠ ರನ್ ಗಳಿಸಲು ಪ್ರಯತ್ನಿಸುತ್ತದೆ. ಅವರ ಉತ್ತಮ ಬೌಲಿಂಗ್ ಆಧಾರದ ಮೇಲೆ, ಭಾರತ ತಂಡವೂ ಸಾಧ್ಯವಾದಷ್ಟು ಬೇಗ ರನ್ ಸಂಗ್ರಹಿಸಲು ಪ್ರಯತ್ನಿಸುತ್ತದೆ. ಇದರಿಂದ ಸರಣಿಯು ತುಂಬಾ ರೋಚಕವಾಗಿರುತ್ತದೆ.
ಇದನ್ನೂ ಓದಿ: ಟೆಸ್ಟ್ ನಾಯಕನಾಗಿ ಕಮ್ಮಿನ್ಸ್ ಮುಂದುವರೆಯಲಿ: ಮಾಜಿ ಕ್ರಿಕೆಟಿಗ ಡಾಮಿಯನ್ ಫ್ಲೆಮಿಂಗ್