ಪೋರ್ಟ್ ಆಫ್ ಸ್ಪೇನ್ (ವೆಸ್ಟ್ ಇಂಡೀಸ್): ಸತತ ನೀರಸ ಪ್ರದರ್ಶನ ನೀಡುತ್ತಿರುವ ವೆಸ್ಟ್ ಇಂಡೀಸ್ಗೆ ಇಂದು ಭಾರತದ ವಿರುದ್ಧ ಎರಡನೇ ಏಕದಿನ ಸವಾಲು ಎದುರಾಗಲಿದೆ. ಮೊದಲ ಏಕದಿನ ಪಂದ್ಯ ಟಿ20 ಪಂದ್ಯದಂತೆ ಕೇವಲ 46 ಓವರ್ (45.5) ಮುಕ್ತಾಯವಾಗಿತ್ತು. ಭಾರತೀಯ ಸ್ಪಿನ್ನರ್ಗಳ ಮುಂದೆ ಶೈ ಹೋಪ್ ಪಡೆ ಪೆವಿಲಿಯನ್ ಪರೇಡ್ ನಡೆಸಿತ್ತು. ಕೆರಿಬಿಯಬನ್ ತಂಡ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ.
ಭಾರತ ತಂಡ ವಿಶ್ವಕಪ್ ಹಿನ್ನೆಲೆಯಲ್ಲಿ ತಂಡದಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದು, ಯುವ ಆಟಗಾರರಿಗೆ ಜವಾಬ್ದಾರಿ ನೀಡುತ್ತಿದೆ. ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಲೆಕ್ಕಾಚಾರ ಫಲಿಸಿದೆ ಎಂದು ಹೇಳಲು ಆಗುವುದಿಲ್ಲ. 115 ರನ್ನ ಸಣ್ಣ ಗುರಿಯನ್ನು ಭಾರತ 5 ವಿಕೆಟ್ ನಷ್ಟದಿಂದ ಭೇದಿಸಿತು. ಗಿಲ್ ಐಪಿಎಲ್ ಫಾರ್ಮ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಂಡುಬರುತ್ತಿಲ್ಲ. ಟೆಸ್ಟ್ನ ಮೂರು ಇನ್ನಿಂಗ್ಸ್ನಲ್ಲಿ ಮತ್ತು ಏಕದಿನದ ಒಂದು ಪಂದ್ಯದಲ್ಲಿ ವಿಫಲತೆ ಕಂಡಿದ್ದಾರೆ.
ಬ್ರಿಡ್ಜ್‌ಟೌನ್‌ನಲ್ಲಿ ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್‌ಟೌನ್ ಮೈದಾನದಲ್ಲಿ ಭಾರತೀಯ ತಂಡ ಇದುವರೆಗೂ 200 ರನ್ ಗಡಿ ದಾಟಿಲ್ಲ ಎಂಬ ಅಂಕಿ ಅಂಶ ಇದ್ದು, ಎದುರಾಳಿ ಪಡೆ ದ್ವಿಶತಕ ಮೀರಿದ ಗುರಿ ನೀಡಿದಲ್ಲಿ ಭಾರತ ಸಂಕಷ್ಟ ಎದುರಿಸಬೇಕಾದೀತು. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಒಂದನ್ನು ಗೆದ್ದಿರುವ ಭಾರತ ಇದನ್ನೂ ಜಯಿಸಿದಲ್ಲಿ ಸರಣಿ ವಶಪಡಿಸಿಕೊಂಡಂತೆ. ರೋಹಿತ್ ಪಡೆ ಸರಣಿ ಗೆದ್ದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 13ನೇ ಸರಣಿ ಭಾರತ ಗೆದ್ದ ದಾಖಲೆ ನಿರ್ಮಾಣ ಆಗಲಿದೆ.
ಕಮ್ಬ್ಯಾಕ್ ಮಾಡಬೇಕಿದೆ ಕೆರಿಬಿಯನ್ನರು: ಒಂದು ಕಾಲದಲ್ಲಿ ಕ್ರಿಕೆಟ್ನ ಅಗ್ರ ತಂಡ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ತಂಡ 2023 ಏಕದಿನ ವಿಶ್ವಕಪ್ ಅರ್ಹತೆ ಪಡೆಯುವಲ್ಲೇ ವಿಫಲವಾಗಿದೆ. ಕೆರಿಬಿಯನ್ ತಂಡ ಸತತ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದು, ಇದನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ.
ಸಂಜು ಸ್ಯಾಮ್ಸನ್ಗೆ ಸಿಗುತ್ತಾ ಸ್ಥಾನ: ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದು, ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಇಶಾನ್ ಕಿಶನ್ಗೆ ಪ್ಲೆಸ್ ಆಗಿದ್ದು, ಕೀಪರ್ ಕಮ್ ಬ್ಯಾಟರ್ ಆಗಿ ಸಂಜುಗೆ ತಂಡದಲ್ಲಿ ಸ್ಥಾನ ಅನುಮಾನವಾಗಿದೆ. ವಿಶ್ವಕಪ್ ದೃಷ್ಟಿಕೋನದಿಂದ ತಂಡದಲ್ಲಿ ಅಚ್ಚರಿಯ ಬದಲಾವಣೆ ತಂದು ಸಂಜು ಅವಕಾಶ ಮಾಡಿಕೊಟ್ಟಲ್ಲಿ ಅವರು ಸಿಕ್ಕ ಚಾನ್ಸ್ನಲ್ಲಿ ತಮ್ಮನ್ನು ಪ್ರೂವ್ ಮಾಡಿಕೊಳ್ಳಬೇಕಿದೆ. ಜಡೇಜ ಬದಲು ಚಹಾಲ್ ಮೈದಾನಕ್ಕೆ ಇಳಿಯುತ್ತಾರೆ. ಮತ್ತೆ ಮೈದಾನದಲ್ಲಿ ಕುಲ್ಚಾ ಜೋಡಿ ಕಾಣಲು ಸಿಗುತ್ತದಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಎಡಗೈ ವೇಗಿ ಜಯದೇವ್ ಉನಾದ್ಕತ್ ಸಹ ಮೈದಾನಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ.
ಭಾರತ ತಂಡದ ಆಟಗಾರರು: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್ ತಂಡದ ಆಟಗಾರರು: ಶಾಯ್ ಹೋಪ್ (ನಾಯಕ/ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಅಲಿಕ್ ಅಥಾನಾಜ್, ಯಾನಿಕ್ ಕ್ಯಾರಿಯಾ, ಕೆಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋತಿ, ಜೇಡನ್ ಸೀಲ್ಸ್, ರೊಮಾರಿಯೊ ಶೆಫರ್ಡ್, ಕೆವಿನ್ ಸಿಂಕ್ಲೇರ್, ಒಶೇನ್ ಥಾಮಸ್.
ಪಂದ್ಯ: ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್‌ಟೌನ್ ಮೈದಾನದಲ್ಲಿ ಭಾರತೀಯ ಕಾಲಮಾನ ಸಂಜೆ 7 ಪಂದ್ಯ ಆರಂಭವಾಗಲಿದೆ. ಡಿಡಿ ಸ್ಪೋರ್ಟ್ಸ್, ಡಿಡಿ ಚಂದನ ಮತ್ತು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಲಭ್ಯ.
ಇದನ್ನೂ ಓದಿ: India vs West Indies: ಕೆನ್ಸಿಂಗ್ಟನ್ ಓವಲ್ನ ಈ ಗಡಿ ದಾಟಿ ದಾಖಲೆ ಬರೆಯುವುದೇ ರೋಹಿತ್ ಪಡೆಗಿರುವ ಸವಾಲು