ತರೋಬಾ(ವೆಸ್ಟ್ ಇಂಡೀಸ್): ಮುಂಬರುವ ಟಿ - 20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಬಳಗ ಇಂದಿನಿಂದ ವೆಸ್ಟ್ ವಿರುದ್ಧ ಐದು ಚುಟುಕು ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭಗೊಳ್ಳಲಿದೆ. ಅದಕ್ಕೋಸ್ಕರ ರೋಹಿತ್ ಶರ್ಮಾ ಬಳಗ ಸಂಪೂರ್ಣವಾಗಿ ಸಜ್ಜಾಗಿದೆ. ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಅನೇಕ ಪ್ಲೇಯರ್ಸ್ ಚುಟುಕು ಕ್ರಿಕೆಟ್ನಲ್ಲಿ ಭಾಗಿಯಾಗಲಿದ್ದು,ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ, ಶುಭಾರಂಭ ಮಾಡುವ ತವಕದಲ್ಲಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ದಿನೇಶ್ ಕಾರ್ತಿಕ್ ಇದ್ದು ತಂಡದಿಂದ ಉತ್ತಮ ಪ್ರದರ್ಶನ ಮೂಡಿ ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ, ಆಡುವ 11ರ ಬಳಗದಲ್ಲಿ ಅಶ್ವಿನ್ ಚಾನ್ಸ್ ಪಡೆದುಕೊಳ್ಳುವ ಬಗ್ಗೆ ಕುತೂಹಲ ಮೂಡಿದೆ.
-
💬 💬 Here's what captain @ImRo45 said as #TeamIndia gear up for the #WIvIND T20I series. 👍 👍 pic.twitter.com/eVZeUpNe4Y
— BCCI (@BCCI) July 29, 2022 " class="align-text-top noRightClick twitterSection" data="
">💬 💬 Here's what captain @ImRo45 said as #TeamIndia gear up for the #WIvIND T20I series. 👍 👍 pic.twitter.com/eVZeUpNe4Y
— BCCI (@BCCI) July 29, 2022💬 💬 Here's what captain @ImRo45 said as #TeamIndia gear up for the #WIvIND T20I series. 👍 👍 pic.twitter.com/eVZeUpNe4Y
— BCCI (@BCCI) July 29, 2022
ಹೊಡಿ ಬಡಿ ಆಟಕ್ಕೆ ವೆಸ್ಟ್ ಇಂಡೀಸ್ ಕೂಡ ಫೇಮಸ್ ಆಗಿದ್ದು, ಹೀಗಾಗಿ ಟೀಂ ಇಂಡಿಯಾ ಬೌಲರ್ಗಳ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ,ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಜೊತೆ ಇನ್ನೋರ್ವ ಬೌಲರ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ.. ಏಕದಿನ ರ್‍ಯಾಂಕಿಂಗ್ ಭಾರತಕ್ಕೆ 3ನೇ ಸ್ಥಾನ
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯಬೇಕಾಗಿದ್ದ ಕೆಎಲ್ ರಾಹುಲ್ ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ, ಕ್ಯಾಪ್ಟನ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು ಎಂಬ ಕುತೂಹಲ ಸಹ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್,ರವೀಂದ್ರ ಜಡೇಜಾ ಬ್ಯಾಟ್ ಬೀಸಲಿದ್ದಾರೆ.
ಟೀಂ ಇಂಡಿಯಾ ಸಂಭವನೀಯ ಪ್ಲೇಯರ್ಸ್: ರೋಹಿತ್ ಶರ್ಮಾ(ಕ್ಯಾಪ್ಟನ್), ರಿಷಭ್ ಪಂತ್, ದೀಪಕ್ ಹೂಡಾ/ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್,ಹರ್ಷಲ್ ಪಟೇಲ್,ಆರ್.ಅಶ್ವಿನ್/ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್ ಸಂಭವನೀಯ XI: ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಓಡಿಯನ್ ಸ್ಮಿತ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಓಬೆಡ್ ಮೆಕಾಯ್ ಮತ್ತು ಹೇಡನ್ ವಾಲ್ಷ್ ಜೆಎನ್ಆರ್/ಅಲ್ಜಾರಿ ಜೋಸೆಫ್