ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ 85ರನ್ಗಳಿಸುವ ಮೂಲಕ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದೆ.
-
STUMPS on Day 2 of the 2nd Test.#TeamIndia 202 & 85/2, lead South Africa (229) by 58 runs.
— BCCI (@BCCI) January 4, 2022 " class="align-text-top noRightClick twitterSection" data="
Scorecard - https://t.co/qcQcowgFq2 #SAvIND pic.twitter.com/OwcK1xZ7YW
">STUMPS on Day 2 of the 2nd Test.#TeamIndia 202 & 85/2, lead South Africa (229) by 58 runs.
— BCCI (@BCCI) January 4, 2022
Scorecard - https://t.co/qcQcowgFq2 #SAvIND pic.twitter.com/OwcK1xZ7YWSTUMPS on Day 2 of the 2nd Test.#TeamIndia 202 & 85/2, lead South Africa (229) by 58 runs.
— BCCI (@BCCI) January 4, 2022
Scorecard - https://t.co/qcQcowgFq2 #SAvIND pic.twitter.com/OwcK1xZ7YW
ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 202 ರನ್ಗಳಿಕೆ ಮಾಡಿ ಮೊದಲ ದಿನವೇ ಆಲೌಟ್ ಆಯಿತು. ಭಾರತದ ಇನ್ನಿಂಗ್ಸ್ಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಆಫ್ರಿಕಾ ತಂಡ ಪೀಟರ್ಸನ್ ಹಾಗೂ ತೆಂಬಾ ಬವುಮಾ ಅವರ ಅರ್ಧಶತಕದ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 229 ರನ್ಗಳಿಕೆ ಮಾಡಿದ್ದು, 27ರನ್ಗಳ ಮುನ್ನಡೆ ಸಾಧಿಸಿತು. ಭಾರತದ ಪರ ಶಾರ್ದೂಲ್ ಠಾಕೂರ್ 7 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿರುವ ಮೊಹಮ್ಮದ್ ಶಮಿ 2 ವಿಕೆಟ್ ಹಾಗೂ ಬುಮ್ರಾ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿರಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಸಲ ಕೋವಿಡ್ ಲಸಿಕೆ ಪಡೆದ ವೃದ್ಧ: ಹೇಳಿದ್ದೇನು ಗೊತ್ತಾ?
ಇದೀಗ ಎರಡನೇ ಇನ್ನಿಂಗ್ಸ್ ಆರಂಭ ಮಾಡಿರುವ ಟೀಂ ಇಂಡಿಯಾ ನಾಯಕ ರಾಹುಲ್(8) ಹಾಗೂ ಮಯಾಂಕ್ ಅಗರವಾಲ್ 23ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಜಾನ್ಸೆನ್ ಹಾಗೂ ಒಲಿವಿರ್ ಯಶಸ್ವಿಯಾಗಿದ್ದಾರೆ.
ಬ್ಯಾಟಿಂಗ್ ಕಾಯ್ದುಕೊಂಡ ರಹಾನೆ, ಪೂಜಾರೆ
ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ರಹಾನೆ ಹಾಗೂ ಚೇತೇಶ್ವರ್ ಪೂಜಾರಾ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ರಹಾನೆ 7 ಬೌಂಡರಿ ಸೇರಿದಂತೆ ಅಜೇಯ 35ರನ್ಗಳಿಕೆ ಮಾಡಿದ್ದು, ರಹಾನೆ 11ರನ್ಗಳಿಕೆ ಮಾಡಿದ್ದಾರೆ. ತಂಡ 20 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 85ರನ್ಗಳಿಸಿದೆ. ಮೂರು ದಿನಗಳ ಆಟ ಬಾಕಿ ಉಳಿದಿದ್ದು, ಟೆಸ್ಟ್ ಮತ್ತಷ್ಟು ಕುತೂಹಲ ಮೂಡಿಸಿದೆ.
ವಿಶೇಷ ದಾಖಲೆ ಬರೆದ ಶಾರ್ದೂಲ್
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದುಕೊಂಡಿರುವ ಶಾರ್ದೂಲ್ ಠಾಕೂರ್ ವಿಶೇಷ ದಾಖಲೆ ಬರೆದಿದ್ದಾರೆ. ಹರಿಣಗಳ ನಾಡಲ್ಲಿ ಇಷ್ಟೊಂದು ವಿಕೆಟ್ ಪಡೆದುಕೊಂಡಿರುವ ಭಾರತದ ಮೊದಲ ವೇಗಿ ಎಂಬ ಸಾಧನೆ ಸಹ ಮಾಡಿದ್ದಾರೆ.