ETV Bharat / sports

IND vs NZ 1st T20: ದ್ವಿಶತಕ ವೀರರಿಂದ ಇನ್ನಿಂಗ್ಸ್​ ಆರಂಭ, ಹೀಗಿದೆ ಭಾರತದ ಸಂಭಾವ್ಯ ತಂಡ - ETV Bharath Kannada news

ಮೂರು ಏಕದಿನ ಸರಣಿಯಲ್ಲಿ ನ್ಯೂಜಿಲ್ಯಾಂಡ್​ ಅನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ಟಿ20ಗೆ ಸಿದ್ಧವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತೀಯ ಯುವ ತಂಡ ನ್ಯೂಜಿಲ್ಯಾಂಡ್​​ ವಿರುದ್ಧ ರಾಂಚಿ ಸ್ಟೇಡಿಯಂನಲ್ಲಿ ಮೊದಲ ಟಿ20 ಆಡುತ್ತಿದೆ.

IND vs NZ 1st T20
ದ್ವಿಶತಕ ವೀರರಿಂದ ಇನ್ನಿಂಗ್ಸ್​ ಆರಂಭ
author img

By

Published : Jan 27, 2023, 5:15 PM IST

ರಾಂಚಿ(ಜಾರ್ಖಂಡ್​): ನ್ಯೂಜಿಲ್ಯಾಂಡ್​​ ವಿರುದ್ಧದ ಏಕದಿನ ಸರಣಿಯ ನಂತರ ಇಂದಿನಿಂದ ಆರಂಭವಾಗಲಿರುವ ಚುಟುಕು ಸಮರಕ್ಕೆ ಹಾರ್ದಿಕ್​ ನಾಯಕತ್ವದಲ್ಲಿ ಯುವ ಪಡೆ ಸಜ್ಜಾಗಿದೆ. ಮಾಜಿ ನಾಯಕ ಧೋನಿ ತವರಿನಲ್ಲಿ ಪಂದ್ಯ ನಡೆಯುತ್ತಿದ್ದು, ಕುತೂಹಲ ಹೆಚ್ಚಾಗಿದೆ. ಪಿಚ್​ ಇತಿಹಾಸದಲ್ಲಿ ಭಾರತ ಇದುವರೆಗೂ ಸೋಲು ಕಂಡಿಲ್ಲ. ಕೊನೆಯ ಅಂತಾರಾಷ್ಟ್ರೀಯ ಚುಟುಕು ಸಮರ ಕಿವೀಸ್​ ವಿರುದ್ಧವೇ ಭಾರತ ಈ ಪಿಚ್​ನಲ್ಲಿ ಗೆಲುವು ಸಾಧಿಸಿದೆ.

ಹಾರ್ದಿಕ್​ ನಾಯಕತ್ವದಲ್ಲಿ ಸೀಮಿತ ಓವರ್​​ನ ಪಂದ್ಯದಲ್ಲಿ ಭಾರತ ಯಶಸ್ಸು ಕಾಣುತ್ತಿದ್ದು, ಯುವ ಪಡೆಯನ್ನು ಐಪಿಎಲ್​ ಚಾಂಪಿಯನ್​ ತಂಡ ಮುನ್ನಡೆಸಿದ ಅನುಭವದಲ್ಲೇ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ಎದುರು ಸರಣಿಗೆದ್ದಿರುವ ಹಾರ್ದಿಕ್​ ಮೇಲೆ ಭರವಸೆಯೂ ಹೆಚ್ಚಿದೆ. ಏಕದಿನ ವಿಶ್ವಕಪ್​ ಹಿನ್ನೆಲೆ ಅನುಭವಿಗಳಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಯನ್ನು ಕೈಬಿಡಲಾಗಿದೆ. ಟಿ-20ಗಾಗಿ ಹಾರ್ದಿಕ್​ ನಾಯಕತ್ವದಲ್ಲಿ ಇಶನ್​ ಕಿಶನ್​, ಗಿಲ್​, ಸೂರ್ಯಕುಮಾರ್​ ಯಾದವ್​ ಒಳಗೊಂಡ ಯುವ ಪಡೆಯನ್ನು ರಚಿಸಲಾಗಿದೆ.

ಇನ್ನಿಂಗ್ಸ್​ ಆಂಭಿಸಲಿರುವ ಗಿಲ್ ಮತ್ತು ಕಿಶನ್​: ಲಂಕಾ ಎದುರಿನ ಸರಣಿಗೆ ಆಯ್ಕೆ ಆಗಿದ್ದ ಋತುರಾಜ್​ ಗಾಯಕ್ವಾಡ್​ ಮುಂಗೈ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ ಅವಕಾಶ ಮಾಡಿಕೊಡಲಾಗಿದೆ. ಆದರೆ, ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದನ್ನು ನಾಯಕ ಈಗಾಗಲೇ ಹೇಳಿದ್ದಾರೆ. ಗಿಲ್​ ಮತ್ತು ಕಿಶನ್​ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂಬುದನ್ನೂ ತಿಳಿಸಿದ್ದಾರೆ.

ಚೊಚ್ಚಲ ಪಂದ್ಯ ಆಡುವ ನಿರೀಕ್ಷೆಯಲ್ಲಿ ಜಿತೇಶ್​ ಶರ್ಮಾ ಇದ್ದಾರೆ. ಆಲ್​ರೌಂಡರ್​ ಸ್ಥಾನಕ್ಕಾಗಿ ನಾಯಕ ಹಾರ್ದಿಕ್​ ಜೊತೆಗೆ ದೀಪಕ್​ ಹೂಡಾ ಮತ್ತು ವಾಷಿಂಗ್ಟನ್​ ಸುಂದರ್​ ಇದ್ದು ಅವಕಾಶ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡ ಬೇಕಿದೆ. ಅರ್ಷದೀಪ್​, ಉಮ್ರಾನ್​ ಮಲಿಕ್​, ಶಿವಂ ಮಾವಿ ಮತ್ತು ಮುಕೇಶ್​ ಕುಮಾರ್​ ಬೌಲಿಂಗ್​ ಪಡೆಯಲ್ಲಿದ್ದಾರೆ.

ಶುಭಕೋರಿದ ಮಾಹಿ: 25ರಂದು 20ಟಿ ತಂಡ ರಾಂಚಿಯನ್ನು ತಲುಪಿತ್ತು. ಅಭ್ಯಾಸ ನಡೆಸುತ್ತಿದ್ದ ತಂಡವನ್ನು ಭೇಟಿ ಮಾಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಆಟಗಾರಿಗೆ ಸಲಹೆ ನೀಡಿದ್ದಾರೆ. ಇಶಾನ್ ಕಿಶನ್ ಕೂಡ ಧೋನಿ ಜೊತೆ ಮಾತನಾಡಿದ್ದಾರೆ. ಧೋನಿ ಎಲ್ಲಾ ಆಟಗಾರರಿಗೂ ಶುಭಾಶಯ ತಿಳಿಸಿದ್ದಾರೆ.

ಗೆಲುವಿಗಾಗಿ ಕಿವೀಸ್​ ಪಣ: ಏಕದಿನ ಸರಣಿಯಲ್ಲಿ 0-3ರಿಂದ ಸೋಲನುಭವಿಸಿರುವ ಕಿವೀಸ್​ ಟಿ20 ಯಲ್ಲಿ ಬಲ ಪ್ರದರ್ಶಿಸಲು ಚಿಂತಿಸುತ್ತಿದೆ. ಆಲ್​ ರೌಂಡರ್​ ಮಿಚೆಲ್​ ಸ್ಯಾಂಟ್ನರ್​ ನಾಯಕತ್ವದಲ್ಲಿ ಕಿವೀಸ್​ ಗೆಲುವಿನ ಪಥಕ್ಕೆ ಮರಳಬೇಕಿದೆ. ಫಾರ್ಮ್​ನಲ್ಲಿರುವ ಡೆವೋನ್​ ಕಾನ್ವೆ, ಮೈಕಲ್​ ಬ್ರೇಸ್​ವೆಲ್​ ಅವರಿಂದ ಮ್ಯಾಚ್​ ವಿನ್ನಿಂಗ್​ ಆಟಗಳು ಬರಬೇಕಿದೆ.

ಮುಖಾಮುಖಿ: ಉಭಯ ತಂಡಗಳು ಇದುವರೆಗೆ ಒಟ್ಟು 22 ಟಿ20 ಪಂದ್ಯಗಳಲ್ಲಿ ಎದುರಾಳಿಗಳಾಗಿದೆ. ಇದರಲ್ಲಿ ಭಾರತ 12ರಲ್ಲಿ ಗೆದ್ದು, 9ರಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಅಂಕಿ - ಅಂಶಗಳಂತೆ ಭಾರತ ತಂಡದ ಮೇಲುಗೈ ಸಾಧಿಸಿದೆ. ಅಲ್ಲದೇ ಇದೇ ಪಿಚ್​​ನಲ್ಲಿ ಕೊನೆಯ ಪಂದ್ಯದಲ್ಲಿ ಕಿವೀಸ್​ ಮೇಲೆ ಪಾರಮ್ಯ ಮೆರೆದಿದೆ. ಅನುಭವಿ ಲಾಕಿ ಫರ್ಗುಸನ್ ಪ್ರದರ್ಶನ ನುಣುಪುಗೊಳಿಸಬೇಕಿದೆ. ಉಳಿದಂತೆ ಅನಾನುಭವಿಗಳು ಇದ್ದು ಗೆಲುವಿಗಾಗಿ ಪಣ ತೊಡಬೇಕಿದೆ.

ಭಾರತದ ಸಂಭಾವ್ಯ ತಂಡ: ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್/ಕುಲದೀಪ್ ಯಾದವ್

ನ್ಯೂಜಿಲ್ಯಾಂಡ್​​​​​ ಸಂಭಾವ್ಯ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್​ ಕೀಪರ್​), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಲಾಕಿ ಫರ್ಗುಸನ್, ಇಶ್ ಸೋಧಿ, ಬ್ಲೇರ್ ಟಿಕ್ನರ್, ಬೆನ್ ಲಿಸ್ಟರ್ / ಜಾಕೋಬ್ ಡಫಿ

ಇದನ್ನೂ ಓದಿ: IND vs NZ 1st T20: ರಾಂಚಿಯಲ್ಲಿ ಭಾರತದ ಉತ್ತಮ ರೆಕಾರ್ಡ್​, ಟಿಕೆಟ್​ಗಾಗಿ ಫೈಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.