ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯಕ್ಕೆ ವರುಣನ ಕಾಟ ಮುಂದುವರಿದಿದ್ದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ದಿನದಾಟವೂ ಮಳೆಗಾಹುತಿ ಆಗಿದೆ. ಸೌತಾಂಪ್ಟನ್ನಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಂಪೈರ್ಗಳು ಸೋಮವಾರದ ಆಟ ರದ್ದು ಪಡಿಸಿದ್ದಾರೆ.
WTC ಫೈನಲ್ ಪಂದ್ಯದ ಮೊದಲ ದಿನವಾರ ಶುಕ್ರವಾರ ಕೂಡ ಮಳಯಿಂದ ರದ್ದಾಗಿತ್ತು. ಎರಡನೇ ದಿನ ಪಂದ್ಯ ಆರಂಭವಾಗಿತ್ತಾದರು ಮಂದ ಬೆಳಕಿನ ಕಾರಣ ಕೇವಲ 65 ಓವರ್ಗಳ ಆಟ ಮಾತ್ರ ನಡೆದಿತ್ತು. 3ನೇ ದಿನ ಇನ್ನು 19 ಓವರ್ಗಳ ಆಟ ಬಾಕಿಯಿದ್ದಾಗ ಮಳೆ ಮತ್ತು ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ನಾಲ್ಕನೇ ದಿನದಾಟ ಒಂದೂ ಎಸೆತ ಕಾಣದೆ ರದ್ದಾಗಿದೆ. ನಿನ್ನೆ ರಾತ್ರಿಯಿಂದಲೂ ನಿರಂತರ ಮಳೆಯಾಗಿದೆ. ಇಂದು ಬೆಳಗ್ಗೆ ಸತತ 5ರಿಂದ 6 ಗಂಟೆಗಳ ಕಾಲ ನಿರಂತರ ಮಳೆಯಾಗಿತ್ತು. ಮಧ್ಯ ಬಿಡುವು ನೀಡಿದ್ದರಿಂದ ಒಂದೆರೆಡು ಸೆಷನ್ ಆರಂಭವಾಗಬಹುದು ಎಂಬ ನಿರೀಕ್ಷಿಸಲಾಗಿತ್ತು. ಆದರೆ, ಮಳೆ ಮತ್ತೆ ಆಗಮಿಸಿದ್ದರಿಂದ ಕೊನೆಗೆ ದಾರಿಯಿಲ್ಲದೇ ನಾಲ್ಕನೇ ದಿನದಾಟವನ್ನು ರದ್ದುಗೊಳಿಸಲಾಯಿತು.
-
Day four of the #WTC21 Final has been abandoned due to persistent rain ⛈️#INDvNZ pic.twitter.com/QvKvzQCphG
— ICC (@ICC) June 21, 2021 " class="align-text-top noRightClick twitterSection" data="
">Day four of the #WTC21 Final has been abandoned due to persistent rain ⛈️#INDvNZ pic.twitter.com/QvKvzQCphG
— ICC (@ICC) June 21, 2021Day four of the #WTC21 Final has been abandoned due to persistent rain ⛈️#INDvNZ pic.twitter.com/QvKvzQCphG
— ICC (@ICC) June 21, 2021
ಇನ್ನು ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 217 ರನ್ಗಳಿಗೆ ಆಲೌಟ್ ಆದರೆ, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್ಗಳಿಸಿದೆ. ಡಿವೋನ್ ಕಾನ್ವೆ 54 ಮತ್ತು ಟಾಮ್ ಲಾಥಮ್ 30 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ವಿಲಿಯಮ್ಸನ್ ಅಜೇಯ 12 ಮತ್ತು ರಾಸ್ ಟೇಲರ್ ಖಾತೆ ತೆರೆಯದೇ ಕ್ರೀಸ್ನಲ್ಲಿದ್ದಾರೆ.
ಇನ್ನೆರೆಡು ದಿನಗಳ ಆಟ ಬಾಕಿ:
ಈಗಾಗಲೇ 4 ದಿನಗಳು ಮುಗಿದಿವೆ. ಆದರೆ, ಕೇವಲ 141 ಓವರ್ ಮಾತ್ರ ಮುಗಿದೆ. ಮೀಸಲು ದಿನ ಸೇರಿದರೂ ಇನ್ನು 180 ಓವರ್ಗಳ ಆಟ ನಡೆಯಬಹುದಾಗಿದೆ. ಇಷ್ಟು ಓವರ್ಗಳಲ್ಲಿ ಪಂದ್ಯದ ಫಲಿತಾಂಶ ಪಡೆಯುವುದು ತುಂಬಾ ಕಷ್ಟವಾಗಲಿದೆ. ಅಲ್ಲದೇ ಈ ಎರಡು ದಿನಕ್ಕೂ ಮಳೆಯ ಕಾಟ ಇದ್ದೇ ಇರಲಿದೆ. ಒಟ್ಟಿನಲ್ಲಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜಂಟಿ ವಿಜೇತರನ್ನು ಕಾಣಬಹುದಾಗಿದೆ.
ಇದನ್ನು ಓದಿ:2024-31ರೊಳಗೆ ನಡೆಯುವ ಐಸಿಸಿಯ 3 ದೊಡ್ಡ ಟೂರ್ನಮೆಂಟ್ಗಳಿಗೆ ಬಿಸಿಸಿಐನಿಂದ ಬಿಡ್