ಕಾನ್ಪುರ: ಕಿವೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಅರ್ಧಶತಕದ ಬಲದೊಂದಿಗೆ ಭೋಜನ ವಿರಾಮದ ವೇಳೆಗೆ 1 ವಿಕೆಟ್ಗೆ 82 ರನ್ ಗಳಿಸಿದ್ದ ಭಾರತ ತಂಡ ದಿಢೀರ್ 3 ವಿಕೆಟ್ ಕಳೆದುಕೊಂಡು 154 ರನ್ಗಳಿಸಿದೆ.
ಟಾಸ್ ಗೆದ್ದ ಭಾರತದ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಯುವ ಆಟಗಾರರಾದ ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆದರೆ, ತಂಡದ ಮೊತ್ತ 21 ರನ್ಗಳಾಗಿದ್ದಾಗಲೇ 28 ಎಸೆತಗಳಲ್ಲಿ 13 ರನ್ ಬಾರಿಸಿದ್ದ ಅಗರ್ವಾಲ್, ಜೇಮಿಸನ್ ಬೌಲಿಂಗ್ನಲ್ಲಿ ಟಾಮ್ ಬ್ಲಂಡೆಲ್ಗೆ ಕ್ಯಾಚ್ ನೀಡಿ ಔಟಾದರು.
-
That will be Tea on Day 1 of the 1st Test.#TeamIndia lose three wickets in the second session.
— BCCI (@BCCI) November 25, 2021 " class="align-text-top noRightClick twitterSection" data="
Scorecard - https://t.co/WRsJCUhS2d #INDvNZ @Paytm pic.twitter.com/SygJbWpp6n
">That will be Tea on Day 1 of the 1st Test.#TeamIndia lose three wickets in the second session.
— BCCI (@BCCI) November 25, 2021
Scorecard - https://t.co/WRsJCUhS2d #INDvNZ @Paytm pic.twitter.com/SygJbWpp6nThat will be Tea on Day 1 of the 1st Test.#TeamIndia lose three wickets in the second session.
— BCCI (@BCCI) November 25, 2021
Scorecard - https://t.co/WRsJCUhS2d #INDvNZ @Paytm pic.twitter.com/SygJbWpp6n
ಭೋಜನ ವಿರಾಮದ ಬೆನ್ನಲ್ಲೇ ಅರ್ಧಶತಕ ಸಿಡಿಸಿದ್ದ ಗಿಲ್ (52) ಜೇಮಿಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಆಗಮಿಸಿದ ನಾಯಕ ರಹಾನೆ ಚೇತೇಶ್ವರ ಪೂಜಾರ(26) ಅವರೊಂದಿಗೆ 3ನೇ ವಿಕೆಟ್ಗೆ 24ರನ್ ಸೇರಿಸಿದರು. ಪೂಜಾರ 26 ರನ್ಗಳಿಸಿದ್ದ ವೇಳೆ ಸೌಥಿ ಬೌಲಿಂಗ್ನಲ್ಲಿ ಕೀಪರ್ ಬ್ಲಂಡೆಲ್ಗೆ ಕ್ಯಾಚ್ ನೀಡಿ ಔಟಾದರು. ವೇಗದ ಆಟಕ್ಕೆ ಮುಂದಾಗಿ 63 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿದ್ದ ನಾಯಕ ರಹಾನೆ ಕೂಡ ಜೇಮಿಸನ್ಗೆ 3ನೇ ಬಲಿಯಾದರು.
ಇದೀಗ ಟೀ ವಿರಾಮದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 154 ರನ್ಗಳಿಸಿದೆ. ಅಯ್ಯರ್ 17 ಮತ್ತು ಜಡೇಜಾ 6 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ಪಂದ್ಯದ ಮೂಲಕ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಭಾರತೀಯ ಕ್ರಿಕೆಟ್ನ ದಂತಕತೆ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ಯಾಪ್ ನೀಡಿ ಶುಭ ಕೋರಿದರು.
ಇದನ್ನೂ ಓದಿ: VIDEO: ಟೆಸ್ಟ್ ಕ್ರಿಕೆಟ್ಗೆ ಶ್ರೇಯಸ್ ಪದಾರ್ಪಣೆ.. ಕ್ಯಾಪ್ ನೀಡಿದ ಸುನಿಲ್ ಗವಾಸ್ಕರ್