ಅಹಮದಾಬಾದ್ (ಗುಜರಾತ್): ಟಿ20 ಸರಣಿ ಉಳಿವಿಗಾಗಿ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ತಂಡ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿಂದು ಸೆಣಸಾಟ ನಡೆಸುತ್ತಿವೆ. ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಎರಡೂ ತಂಡಗಳು ಒಬ್ಬೊಬ್ಬ ಆಟಗಾರರ ಬದಲಾವಣೆ ಮಾಡಿವೆ. ಚಹಾಲ್ ಜಾಗಕ್ಕೆ ಉಮ್ರಾನ್ ಮರಳಿದ್ದಾರೆ. ಪಿಚ್ ವೇಗಿಗಳಿಗೆ ನೆರವಾಗುವ ಸಾಧ್ಯತೆ ಇದ್ದು ಚಹಾಲ್ರನ್ನು ಕೈಬಿಡಲಾಗಿದೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು. ಕಿವೀಸ್ ತಂಡದಲ್ಲಿ ಜಾಕೋಬ್ ಡಫಿ ಅವರನ್ನು ಕೈಬಿಟ್ಟು ಬೆನ್ ಲಿಸ್ಟರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
-
#TeamIndia have won the toss and elect to bat first in the series decider match.
— BCCI (@BCCI) February 1, 2023 " class="align-text-top noRightClick twitterSection" data="
A look at our Playing XI for the game.
Live - https://t.co/1uCKYafzzD #INDvNZ @mastercardindia pic.twitter.com/BbOibgv0kG
">#TeamIndia have won the toss and elect to bat first in the series decider match.
— BCCI (@BCCI) February 1, 2023
A look at our Playing XI for the game.
Live - https://t.co/1uCKYafzzD #INDvNZ @mastercardindia pic.twitter.com/BbOibgv0kG#TeamIndia have won the toss and elect to bat first in the series decider match.
— BCCI (@BCCI) February 1, 2023
A look at our Playing XI for the game.
Live - https://t.co/1uCKYafzzD #INDvNZ @mastercardindia pic.twitter.com/BbOibgv0kG
1-1 ರಿಂದ ಸರಣಿ ಸಮಬಲವಾಗಿದ್ದು ಇತ್ತಂಡಕ್ಕೂ ಇದು ಮಹತ್ವದ ಪಂದ್ಯ. ತವರಿನಲ್ಲಿ ಸತತ 12 ಟಿ20 ಸರಣಿ ಗೆದ್ದಿರುವ ಮೆನ್ ಇನ್ ಬ್ಲೂ ಮತ್ತೊಂದು ಸೀರಿಸ್ ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಇನ್ನೊಂದೆಡೆ, ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಳ್ಳಲು ಬ್ಲಾಕ್ ಕ್ಯಾಪ್ಸ್ ಹವಣಿಸುತ್ತಿದೆ. ಭಾರತ ಆರಂಭಿಕ ವೈಫಲ್ಯ ಎದುರಿಸುತ್ತಿದ್ದು, ಕಿವೀಸ್ ಮಧ್ಯಮ ಕ್ರಮಾಂಕವನ್ನು ಸುಧಾರಿಸಿಕೊಳ್ಳಬೇಕಿದೆ.
ಭಾರತ (ಆಡುವ 11ರ ತಂಡ): ಶುಭಮನ್ ಗಿಲ್, ಇಶಾನ್ ಕಿಶನ್(ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್ ಹಾಗು ಅರ್ಶ್ದೀಪ್ ಸಿಂಗ್.
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ(ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಇಶ್ ಸೋಧಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಬ್ಲೇರ್ ಟಿಕ್ನರ್
ಇದನ್ನೂ ಓದಿ: ಟಾಪ್ ಮೂವರು ಆಟಗಾರರೇ ಭಾರತಕ್ಕೆ ಸಮಸ್ಯೆ, ಕೊನೆಯ ಪಂದ್ಯದಲ್ಲಿದೆಯೇ ಶಾಗೆ ಎಂಟ್ರಿ?