ETV Bharat / sports

IND vs NZ 3rd ODI: ಭಾರತದ ಆರಂಭಿಕರ ದ್ವಿಶತಕದ ದಾಖಲೆಯ ಜೊತೆಯಾಟ: ಕಿವೀಸ್​ಗೆ 386 ರನ್​ಗಳ ಬೃಹತ್​ ಗುರಿ - ರೋಹಿತ್​ ಶರ್ಮಾ 30ನೇ ಶತಕ

ಭಾರತ ಮತ್ತು ಕಿವೀಸ್​ ಮೂರನೇ ಏಕದಿನ ಪಂದ್ಯ - ಇಬ್ಬರು ಆರಂಭಿಕರ ಶತಕ - ಸೆಹ್ವಾಗ್​, ಗೌತಮ್ ಗಂಭೀರ್ ದಾಖಲೆ ಮುರಿದ ಜೋಡಿ - ಭಾರತ 50 ಓವರ್​ಗೆ 9 ವಿಕೆಟ್​ ನಷ್ಟದಲ್ಲಿ 385ಕ್ಕೆ ರನ್​

India vs New Zealand 3rd ODI update
ಸದೃಢ ಆರಂಭ ಕಂಡ ಭಾರತ
author img

By

Published : Jan 24, 2023, 4:24 PM IST

Updated : Jan 24, 2023, 5:51 PM IST

ಇಂದೋರ್​ (ಮಧ್ಯಪ್ರದೇಶ): ನ್ಯೂಜಿಲೆಂಡ್​ ಕ್ಲೀನ್​ಸ್ವೀಪ್​ ಮಾಡಲು ಪಣ ತೊಟ್ಟಿರುವ ಭಾರತ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಆರಂಭಿಕರಾಗಿ ಯಶಸ್ಸು ಕಂಡಿರುವ ಗಿಲ್​ ಮತ್ತು ರೋಹಿತ್​ ಜೋಡಿ ಇಂದು ಉತ್ತಮ ಜೊತೆಯಾಟವನ್ನು ಆಡಿದರು. ಮೊದಲ ವಿಕೆಟ್​ಗೆ 204 ರನ್ ಸೇರಿಸಿದ ಜೋಡಿ ಕಿವೀಸ್​ ವಿರುದ್ಧ ಸೆಹ್ವಾಗ್​ ಮತ್ತು ಗಂಭೀರ್ ಅವರ ಆರಂಭಿಕ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ. ನ್ಯೂಜಿಲೆಂಡ್​ ಕ್ಲೀನ್​ಸ್ವೀಪ್​ನಿಂದ ತಪ್ಪಿಸಿಕೊಳ್ಳಲು 386ರನ್​ ಗಳಿಸಬೇಕಿದೆ.

ಇಂದೋರ್​ನಲ್ಲಿ ಆರು ವರ್ಷಗಳ ನಂತರ ನಡೆಯುತ್ತಿರುವ ಪಂದ್ಯದಲ್ಲಿ ಕಿವೀಸ್​ ವಿರುದ್ಧದ ಸರಣಿಯನ್ನು ಕ್ಲೀನ್​ಸ್ವೀಪ್​ ಸಾಧಿಸಿ ಐಸಿಸಿ ಶ್ರೇಯಾಂಕದ ಮೊದಲ ಪಟ್ಟಕ್ಕೇರಲು ಭಾರತ ಹವಣಿಸುತ್ತಿದೆ. ಟಾಸ್​ ಗೆದ್ದ ಬ್ಲಾಕ್​ಕ್ಯಾಪ್ಸ್​ ನಾಯಕ ಭಾರತಕ್ಕೆ ಮೊದಲು ಬ್ಯಾಟಿಂಗ್​ ಮಾಡುವಂತೆ ಆಹ್ವಾನ ಇತ್ತರು. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಸಿಕ್ಕ ಅವಕಾಶವನ್ನು ಇಬ್ಬರು ಆಂಭಿಕರು ಉತ್ತಮವಾಗಿ ಬಳಸಿಕೊಂಡರು. ಗಿಲ್​ ಮತ್ತು ರೋಹಿತ್​ ಶರ್ಮಾ ಶತಕ ಗಳಿಸಿ ಔಟ್​ ಆದರು.

ಮೊದಲ ವಿಕೆಟ್​ಗೆ 204 ಸೇರಿಸಿದ ಜೋಡಿ ಇಬ್ಬರೂ ಶತಕ ಪೂರೈಸಿಕೊಂಡರು. 85 ಎಸೆತಗಳನ್ನು ಎದುರಿಸಿದ ರೋಹಿತ್​ ಶರ್ಮಾ 9 ಬೌಂಡರಿ ಮತ್ತು 6 ಸಿಕ್ಸರ್​ನಿಂದ 101 ರನ್​ಗಳಿಸಿ ಬ್ರೇಸ್​ವೆಲ್​ ಅವರಿಗೆ ವಿಕೆಟ್​ ಒಪ್ಪಿಸಿದರು. ಶುಭಮನ್​ ಗಿಲ್​ 78 ಎಸೆತ ಎದುರಿಸಿ 13 ಬೌಂಡರಿ ಮತ್ತು 5 ಸಿಕ್ಸ್​ನೊಂದಿಗೆ 112 ರನ್​ ದಾಖಲಿಸಿದರು. ಇದು ಅವರ ನಾಲ್ಕನೇ ಏಕದಿನ ಶತಕ ಆಗಿದೆ. 112 ರನ್​ ಗಳಿಸಿ ಆಡುತ್ತಿದ್ದ ಗಿಲ್, ಬ್ಲೇರ್ ಟಿಕ್ನರ್ ಬೌಲ್​ನಲ್ಲಿ ಡೇನಿಯಲ್​ ಕಾನ್ವೇಗೆ ಕ್ಯಾಚ್ ಕೊಟ್ಟು ಔಟ್​ ಆದರು.

ಆರಂಭಿಕ ಜೋಡಿ ಔಟ್​ ಆದ ನಂತರ ಯಾರೂ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ. ಟಿ-20 ನಾಯಕ ಹಾರ್ದಿಕ್​ ಪಾಂಡ್ಯ ಮತ್ತು ಶಾರ್ದೂಲ್​ ಠಾಕೂರ್​ ಕೊನೆಯಲ್ಲಿ ನೀಡಿದ ಜೊತೆಯಾಟ 350 ಕ್ಕೂ ಹೆಚ್ಚಿನ ಗುರಿ ನೀಡಲು ಸಹಕಾರಿಯಾಯಿತು. ರೋಹಿತ್​ ಮತ್ತು ಗಿಲ್​ ನಂತರ ಬಂದ ವಿರಾಟ್​(36), ಕಿಶನ್​(17) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಸೂರ್ಯಕುಮಾರ್​ ಯಾದವ್​ (14) ಎರಡು ಸಿಕ್ಸ್​ ಗಳಿಸಿ ಅಬ್ಬರಕ್ಕೆ ಮುಂದಾಗುತ್ತಿದ್ದಂತೆ ವಿಕೆಟ್​ ಒಪ್ಪಿಸಿದರು.

ಹಾರ್ದಿಕ್​, ಶಾರ್ದೂಲ್​ ಅರ್ಧಶತಕದ ಜೊತೆಯಾಟ: ಎಂಟನೇ ವಿಕೆಟ್​ಗೆ ಒಂದಾದ ಉಪನಾಯಕ ಹಾರ್ದಿಕ್​ ಪಾಂಡ್ಯ ಮತ್ತು ಶಾರ್ದೂಲ್​ ಠಾಕೂರ್​ 50ರನ್​ನ ಜೊತೆಯಾಟ ಮಾಡಿದರು. ಹಾರ್ದಿಕ್​ ಪಾಂಡ್ಯ ತಮ್ಮ ಎಂಟನೇ ಅರ್ಧ ಶತಕ ಗಳಸಿರು. 38 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್​ ಮತ್ತು 3 ಬೌಂಡರಿಯಿಂದ 54ರನ್​ ಗಳಿಸಿದರು. ಶಾರ್ದೂಲ್​ ಠಕೂರ್​ 25 ರನ್​ಗಳಿಸಿರು. ಸುಂದರ್​ ( 9), ಕುಲ್​ದೀಪ್​ ಯಾದವ್​(3) ಮತ್ತು ಉಮ್ರಾನ್​ ಮಲಿಕ್​ 2 ರನ್​ಗಳಿಸಿ ಅಜೇಯರಾಗಿ ಉಳಿದರು.

ದ್ವಿಶತಕದ ಆರಂಭಿಕ ಜೊತೆಯಾಟ: ಸತತ ಗಿಲ್​ ಮತ್ತು ರೋಹಿತ್​ ಭಾರತಕ್ಕೆ ಉತ್ತಮ ಆರಂಭವನ್ನು ನೀಡುತ್ತಿದ್ದಾರೆ. ಲಂಕಾ ಎದುರಿನ ಸರಣಿಯಿಂದ ಆರಂಭವಾದ ಇವರ ಜೊತೆಯಾಟ ಒಂದು ಪಂದ್ಯದಲ್ಲಿ ಬಿಟ್ಟು ಮತ್ತೆಲ್ಲಾ ಪಂದ್ಯದಲ್ಲೂ 50 ಪ್ಲಸ್​ ರನ್​ ಸೇರಿಸಿದ್ದಾರೆ. ಇಂದಿನ ಪಂದ್ಯದಲ್ಲಿ 204 ರನ್​​ಗಳ ಆಡುವ ಮೂಲಕ ನ್ಯೂಜಿಲೆಂಡ್​ ವಿರುದ್ಧದ ಅತೀ ಹೆಚ್ಚು ಆರಂಭಿಕ ಜೊತೆಯಾಟ ಇದಾಗಿದೆ. ಗಂಭೀರ್​ ಮತ್ತು ಸೆಹ್ವಾಗ್​ 2009ರಲ್ಲಿ ಹ್ಯಾಮಿಂಗ್​ಟನ್​ನಲ್ಲಿ 201 ರನ್​ನ ಜೊತೆಯಾಟ ಮಾಡಿದ್ದರು.

ರೋಹಿತ್​ ಶರ್ಮಾ 30ನೇ ಶತಕ: ಅದ್ಭುತ ಫಾರ್ಮ್​ನಲ್ಲಿರುವ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನ 30ನೇ ಶತಕ ದಾಖಲಿಸಿದರು. ಈ ಮೂಲಕ ರಿಕ್ಕಿ ಪಾಂಟಿಂಗ್​ ಅವರನ್ನು ಸರಿಗಟ್ಟಿದರು. ಏಕದಿನ ಕ್ರಿಕೆಟ್​ನ ಅತೀ ಹೆಚ್ಚು ಶತಕದ ದಾಖಲೆ ಸಚಿನ್​ ತೆಂಡೂಲ್ಕರ್ (49) ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿ ರನ್​ ಮಷಿನ್​ ವಿರಾಟ್​ ಕೊಹ್ಲಿ (46) ಇದ್ದಾರೆ. ಇದು ರೋಹಿತ್​ (83 ಎಸೆತಕ್ಕೆ 100) ಅವರ ಎರಡನೇ ಅತೀ ವೇಗದ ಶತಕವಾಗಿದೆ. ಇಂಗ್ಲೆಂಡ್​ ವಿರುದ್ಧ 82 ಎಸೆತಗಳಲ್ಲಿ 2018ರಂದು ಶತಕ ಗಳಿಸಿರುವುದು ಮೊದಲನೇಯದಾಗಿದೆ.

ಬಾಬರ್​ ಅಜಮ್​ ದಾಖಲೆ ಸರಿಗಟ್ಟಿದ ಗಿಲ್​: ಕಳೆದ ಮುರು ಇನ್ನಿಂಗ್ಸ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮಾಡುತ್ತಿರುವ ಗಿಲ್​, ಪಾಕಿಸ್ತಾನಿ ಆಟಗಾರ ಬಾಬರ್ ಅಜಮ್​ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮೂರು ಪಂದ್ಯಗಳಿಂದ 360 ರನ್​ ಗಿಲ್ ಗಳಿಸಿದ್ದಾರೆ. 2016ರಲ್ಲಿ ಬಾಬರ್​ ಅಜಮ್​ ಕೂಡ ಮೂರು ಪಂದ್ಯಗಳಿಂದ 360 ರನ್​ ಗಳಿಸಿದ್ದರು. ಬಾಂಗ್ಲಾದ ಇಮ್ರುಲ್ ಕೇಯಸ್ 349, ಡಿ ಕಾಕ್​ 342 ಮತ್ತು ಮಾರ್ಟಿನ್​ ಗುಪ್ಟಿಲ್​ 330 ನಂತರದ ಸ್ಥಾನದಲ್ಲಿದ್ದಾರೆ.

ಐದು ಪಂದ್ಯಗಳಿಂದ ಎದುರಾಳಿಗೆ ಬೃಹತ್​ ಗುರಿ: ಭಾರತ ತವರಿನಲ್ಲಿ ಆಡುತ್ತಿರುವ ಸರಣಿಗಳಲ್ಲಿ ಎದುರಾಳಿ ತಂಡಕ್ಕೆ ಸತತ 350 ಕ್ಕೂ ಹೆಚ್ಚಿನ ಗುರಿ ನೀಡುತ್ತ ಬಂದಿದೆ. ಕಳೆದ ವರ್ಷ ನಡೆದ ಬಾಂಗ್ಲಾ ಎದುರಿನ ಕೊನೆಯ ಏಕದಿನದಲ್ಲಿ ಕಿಶನ್​ ದ್ವಿಶತಕದೊಂದಿದೆ 409 ರನ್​ ಗುರಿ ನೀಡಿತ್ತು. ಈ ವರ್ಷದ ಮೊದಲ ಸರಣಿಯನ್ನು ಭಾರತ ಶ್ರೀಲಂಕಾದ ಎದುರು ಆಡಿತ್ತು. ಮೂರು ಏಕದಿನ ಪಂದ್ಯದಲ್ಲಿ ಎರಡರಲ್ಲಿ ಭಾರತ ಗುರಿ ನೀಡಿದ್ದು, ಒಂದರಲ್ಲಿ 379 ಮತ್ತು 390 ರನ್​ ಗಳಿಸಿತ್ತು. ನ್ಯೂಜಿಲೆಂಡ್​ ಎದುರಿನ ಪಂದ್ಯದಲ್ಲಿ ಹೈದರಾಬಾದ್​​ನಲ್ಲಿ 349 ನೀಡಿತ್ತು. ಇಂದಿನ ಪಂದ್ಯದಲ್ಲಿ 385 ರನ್​ಗಳ ಗುರಿ ನೀಡಿದೆ.

ಇದನ್ನೂ ಓದಿ: ಭಾರತದ ಅದೃಷ್ಟದ ಮೈದಾನದಲ್ಲಿ ಕಿವೀಸ್​ಗೆ ಅಗ್ನಿಪರೀಕ್ಷೆ.. ಇಂದೋರ್​ನಲ್ಲಿ ಸೋಲೇ ಕಾಣದ ಟೀಂ ಇಂಡಿಯಾ

Last Updated : Jan 24, 2023, 5:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.