ರಾಂಚಿ: ಟೀಂ ಇಂಡಿಯಾ ವಿರುದ್ಧ ರಾಂಚಿಯಲ್ಲಿ ನಡೆದ ಎರಡನೇ ಟಿ20 (IND vs NZ 2nd T20) ಪಂದ್ಯದಲ್ಲಿ 31 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿರುವ ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಚುಟುಕು ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ, ಟೀಂ ಇಂಡಿಯಾದ ವಿರಾಟ್ ಕೊಹ್ಲಿ ದಾಖಲೆ ಬ್ರೇಕ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ದಾಖಲೆ ಇದೀಗ ಮಾರ್ಟಿನ್ ಗಪ್ಟಿಲ್ ಪಾಲಾಗಿದೆ. ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 11ರನ್ಗಳಿಕೆ ಮಾಡುತ್ತಿದ್ದಂತೆ ಈ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದು, ವಿರಾಟ್ ಕೊಹ್ಲಿ ದಾಖಲೆ (Kohi T20 Record) ಉಡೀಸ್ ಮಾಡಿದ್ದಾರೆ.
ಇಷ್ಟು ದಿನ ಈ ಪಟ್ಟಿಯಲ್ಲಿ 3227 ರನ್ಗಳಿಕೆ ಮಾಡಿದ್ದ ವಿರಾಟ್ ಕೊಹ್ಲಿ ಇದ್ದರು. ಆದರೆ ಇದೀಗ ಮಾರ್ಟಿನ್ ಗಪ್ಟಿಲ್ 3231ರನ್ಗಳಿಕೆ ಮಾಡುವ ಮೂಲಕ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಗಪ್ಟಿಲ್ 2 ಶತಕ ಹಾಗೂ 19 ಅರ್ಧಶತಕ ಸಿಡಿಸಿದ್ದು, ಕೊಹ್ಲಿ 29 ಅರ್ಧಶತಕ ಬಾರಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 95 ಪಂದ್ಯಗಳನ್ನಾಡಿದ್ದು 52ರ ಸರಾಸರಿಯಲ್ಲಿ 29 ಅರ್ಧಶತಕಗಳ ಸಹಿತ 3227 ರನ್ ಸಂಪಾದಿಸಿದ್ದಾರೆ.
ಇದನ್ನೂ ಓದಿ: 31ನೇ ವಯಸ್ಸಿನಲ್ಲಿ T20ಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದ ವೇಗಿ ಹರ್ಷಲ್
ಟಿ20ಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಪ್ಲೇಯರ್ಸ್
- 3,231 ರನ್, ಮಾರ್ಟಿನ್ ಗಪ್ಟಿಲ್
- 3,227 ರನ್, ವಿರಾಟ್ ಕೊಹ್ಲಿ
- 3,086 ರನ್, ರೋಹಿತ್ ಶರ್ಮಾ
- 2,608 ರನ್, ಆ್ಯರೋನ್ ಪಿಂಚ್
- 2,570 ರನ್, ಪೌಲ್ ಸ್ಟ್ರೀಲಿಂಗ್
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ರೋಹಿತ್ ಶರ್ಮಾ ಇದ್ದು, 109 ಪಂದ್ಯಗಳಿಂದ 3086 ರನ್ಗಳಿಕೆ ಮಾಡಿದ್ದಾರೆ.