ETV Bharat / sports

ಇಂದು ಅಡಿಲೇಡ್​ನಲ್ಲಿ ಭಾರತ - ಆಂಗ್ಲರ ಮಧ್ಯೆ ಕಾದಾಟ.. ಗೆದ್ದವರಿಗೆ ಫೈನಲ್​ ಟಿಕೆಟ್​

ಅಡಿಲೇಡ್​ನ ಓವಲ್​ ಮೈದಾನದಲ್ಲಿ ನಡೆಯುವ 2ನೇ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ಮತ್ತು ಭಾರತ ತಂಡಗಳು ಎದುರಾಗಲಿದ್ದು, ಗೆದ್ದ ತಂಡ ಫೈನಲ್​ ಟಿಕೆಟ್​ ಗಿಟ್ಟಿಸಿಕೊಳ್ಳಲಿದೆ.

india-vs-england-adelaide-oval
ನಾಳೆ ಅಡಿಲೇಡ್​ನಲ್ಲಿ ಭಾರತ- ಆಂಗ್ಲರ ಮಧ್ಯೆ ಕಾದಾಟ
author img

By

Published : Nov 9, 2022, 9:19 PM IST

Updated : Nov 10, 2022, 7:15 AM IST

ಅಡಿಲೇಡ್(ಆಸ್ಟ್ರೇಲಿಯಾ): ನ್ಯೂಜಿಲ್ಯಾಂಡ್​ ಸೋಲಿಸಿ ಟಿ20 ವಿಶ್ವಕಪ್​ ಫೈನಲ್​ ಪ್ರವೇಶಿಸಿರುವ ಪಾಕಿಸ್ತಾನದ ಎದುರು ಸೆಣಸಾಡಲು ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಅಡಿಲೇಡ್​ನ ಓವಲ್​ ಮೈದಾನದಲ್ಲಿಂದು ಮಧ್ಯಾಹ್ನ ಎದುರಾಗಲಿವೆ. ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ತಂಡವಾಗಿ ಫೈನಲ್​ ತಲುಪಿ ಪಾಕ್​ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಗ್ರೂಪ್ 1 ಅಗ್ರಸ್ಥಾನಿಯಾಗಿ ಸೆಮಿಫೈನಲ್​ ತಲುಪಿರುವ ಭಾರತ ಗ್ರೂಪ್​ 2 ರ ದ್ವಿತೀಯ ಸ್ಥಾನಿ ಇಂಗ್ಲೆಂಡ್ ವಿರುದ್ಧ ಓವಲ್​ನಲ್ಲಿ 2 ಸೆಮಿಫೈನಲ್​ ನಡೆಯಲಿದೆ. ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಈಗಾಗಲೇ ನಾವು ಇಂಗ್ಲೆಂಡ್​​ ವಿರುದ್ಧ ಗೆದ್ದಿದ್ದೇವೆ ಎಂದಿದ್ದಾರೆ.

ತಂಡಗಳ ಗೆಲುವು, ಸೋಲಿನ ಲೆಕ್ಕ: ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 22 ಟಿ 20 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ ತಂಡ 12 ಪಂದ್ಯಗಳಲ್ಲಿ ಗೆದ್ದಿದೆ. 10 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್​ಗೆ ಭಾರತಕ್ಕೆ ಟಕ್ಕರ್​ ನೀಡುವುದು ಖಂಡಿತ. ಉಭಯ ತಂಡಗಳು 2007, 2009 ಮತ್ತು 2012 ರ ವಿಶ್ವಕಪ್​ನಲ್ಲಿ 3 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಮ್ ಇಂಡಿಯಾ 2 ಬಾರಿ ಗೆದ್ದರೆ, ಇಂಗ್ಲೆಂಡ್ 1 ಪಂದ್ಯದಲ್ಲಿ ಜಯ ಸಾಧಿಸಿದೆ.

ಅಡಿಲೇಡ್​ನಲ್ಲಿ ಸೋತಿಲ್ಲ ಭಾರತ: ಭಾರತ ತಂಡ ಅಡಿಲೇಡ್​ನ ಓವಲ್​ ಮೈದಾನದಲ್ಲಿ ಆಡಿರುವ 2 ಪಂದ್ಯಗಳಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶಕ್ಕೆ ಸೋಲುಣಿಸಿವೆ. ಈ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಎದುರಾಗಿರುವ ಉಭಯ ತಂಡಗಳಿಗೆ ಅಡಿಲೇಡ್​ ಮೈದಾನ ಯಾರಿಗೆ ವರವಾಗಲಿದೆ ಎಂಬುದು ಗೊತ್ತಾಗಲಿದೆ.

ವಿರಾಟ್ ಕೊಹ್ಲಿ ಫೇವರಿಟ್​ ಮೈದಾನ: ವಿಶ್ವಕಪ್​ನಲ್ಲಿ ಭರ್ಜರಿ ಬ್ಯಾಟ್​ ಮಾಡುತ್ತಿರುವ ಚೇಸ್ ಮಾಸ್ಟರ್​ ವಿರಾಟ್​ ಕೊಹ್ಲಿಗೆ ಇದು ಫೇವರಿಟ್​ ಮೈದಾನವಾಗಿದೆ. ಆಡಿರುವ 2 ಟಿ20 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಡೇವಿಡ್​ ವಾರ್ನರ್​ ಔಟಾಗದೇ 90 ರನ್​ ಗಳಿಸಿದ್ದು ಆಟಗಾರನೊಬ್ಬ ದಾಖಲಿಸಿದ ಅತ್ಯಧಿಕ ರನ್​ ಆಗಿದೆ. ವಿರಾಟ್​ ಕೊಹ್ಲಿ 64 ಗಳಿಸಿದ್ದು ಎರಡನೇ ದೊಡ್ಡ ಮೊತ್ತವಾಗಿದೆ. ಇನ್ನು ವಿಶೇಷ ಅಂದ್ರೆ ಇಂಗ್ಲೆಂಡ್​ನ ಈಗಿನ ಯಾವೊಬ್ಬ ಆಟಗಾರನೂ ಅಡಿಲೇಡ್​ನಲ್ಲಿ ಪಂದ್ಯವನ್ನೇ ಆಡಿಲ್ಲ.

ಭಾರತಕ್ಕೆ ಬ್ಯಾಟಿಂಗ್​ ಭಯ: ಭಾರತ ತಂಡದ ಬಲವೇ ಬ್ಯಾಟಿಂಗ್​ ವಿಭಾಗ. ರೋಹಿತ್ ಶರ್ಮಾ, ಕೆಎಲ್​ ರಾಹುಲ್, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯಾ ಬ್ಯಾಟ್​ ಝಳಪಿಸುತ್ತಿದ್ದಾರೆ. ಅದರಲ್ಲೂ ವಿರಾಟ್​ ಈ ವಿಶ್ವಕಪ್​ನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಬಾರಿ ಅಜೇಯರಾಗಿ ಉಳಿದಿದ್ದಾರೆ. ಇಂಗ್ಲೆಂಡ್​ ಪಂದ್ಯದಲ್ಲಿ ವಿರಾಟ್​ರೂಪ ದರ್ಶನವಾದರೆ ಫೈನಲ್​ ಟಿಕೆಟ್​ ಖಾತ್ರಿಯೇ ಸರಿ. ಬೌಲಿಂಗ್​ನಲ್ಲಿ ಯುವವೇಗಿ ಅರ್ಷದೀಪ್​ ಸಿಂಗ್​ ಮಿಂಚುತ್ತಿದ್ದರೆ, ಭುವನೇಶ್ವರ್​ ಕುಮಾರ್​, ಮೊಹಮದ್​ ಶಮಿ, ಸ್ಪಿನ್ನರ್​ ಅಶ್ವಿನ್​ ಲಯದಲ್ಲಿದ್ದಾರೆ.

ಇಂಗ್ಲೆಂಡ್​ಗೆ ಸ್ಥಿರ ಬ್ಯಾಟಿಂಗ್​ ಚಿಂತೆ: ಬ್ಯಾಟರ್​ ಡೇವಿಡ್​ ಮಲಾನ್​, ಬೌಲರ್​ ಮಾರ್ಕ್​ವುಡ್​ ಗಾಯಗೊಂಡಿದ್ದು ತಂಡದ ಚಿಂತೆ ಹೆಚ್ಚಿಸಿದೆ. ಅಲ್ಲದೇ, ಬ್ಯಾಟರ್​ಗಳು ಸ್ಥಿರ ಪ್ರದರ್ಶನ ನೀಡದೇ ಇರುವುದು ಕೂಡ ಮೈನಸ್​ ಆಗಿದೆ. ಡ್ಯಾಶಿಂಗ್​ ಬ್ಯಾಟರ್ ಅಲೆಕ್ಸ್​ ಹೇಲ್ಸ್, ನಾಯಕ ಜೋಸ್​ ಬಟ್ಲರ್​, ಆಲ್​ರೌಂಡರ್​ಗಳಾದ ಬೆನ್​ ಸ್ಟೋಕ್ಸ್​, ಲಿಯಾಮ್​ ಲಿವಿಂಗ್​ಸ್ಟೋನ್​, ಮೊಯಿನ್​ ಅಲಿ ಸಿಡಿಯಬೇಕಿದೆ. ಬೌಲಿಂಗ್​ನಲ್ಲಿ ಕ್ರಿಸ್​ ವೋಕ್ಸ್​, ಸ್ಯಾಮ್​ ಕರ್ರನ್​, ಡೇವಿಡ್​ ವಿಲ್ಲೆ ವಿಕೆಟ್​ ಉದುರಿಸಬೇಕಿದೆ.

ಓದಿ: ಕ್ರಿಕೆಟ್​ನಿಂದ ನಿವೃತ್ತಿಯಾದರೂ ಧೋನಿ ಆದಾಯ ಹೆಚ್ಚು: ಆರು ತಿಂಗಳಲ್ಲಿ ಕಟ್ಟಿದ ತೆರಿಗೆ ಎಷ್ಟು?

Last Updated : Nov 10, 2022, 7:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.