ETV Bharat / sports

IND vs ENG: ಲಾರ್ಡ್ಸ್‌ ಸಾಧಕರ ಪಟ್ಟಿಯಲ್ಲಿ ರಾರಾಜಿಸಿದ 'ಪಂದ್ಯಶ್ರೇಷ್ಠ' ಕನ್ನಡಿಗ ಕೆ.ಎಲ್‌ ರಾಹುಲ್‌

ಇಂಗ್ಲೆಂಡ್‌ ವಿರುದ್ಧ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸ್ಮರಣೀಯ ಸಾಧನೆಗೈದ ಕನ್ನಡಿಗ ಕೆ.ಎಲ್‌.ರಾಹುಲ್‌ ಹೆಸರು ಲಾರ್ಡ್ಸ್‌ ಕ್ರೀಡಾಂಗಣದಲ್ಲಿರುವ ಗೌರವ ಸದಸ್ಯರ ಪಟ್ಟಿಯ ಫಲಕದಲ್ಲಿ ರಾರಾಜಿಸುತ್ತಿದೆ.

India vs England: KL Rahul looking 'every morning' to see if his name is permanently at Lord's honours boards or not
ಲಾರ್ಡ್ಸ್‌ ಕ್ರೀಡಾಂಗಣದಲ್ಲಿರುವ ಗೌರವ ಸದಸ್ಯರ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಹೆಸರು...!
author img

By

Published : Aug 17, 2021, 10:46 AM IST

ಲಂಡನ್‌: ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ (129) ಶತಕ ಸಿಡಿಸಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ 'ಪಂದ್ಯಶ್ರೇಷ್ಠ ಪ್ರಶಸ್ತಿ'ಗೆ ಭಾಜನರಾದರು. ಇದೀಗ ಕ್ರೀಡಾಂಗಣದಲ್ಲಿರುವ ಗೌರವ ಸದಸ್ಯರ ಪಟ್ಟಿಯ ಫಲಕದಲ್ಲಿ ರಾಹುಲ್‌ ಹೆಸರು ರಾರಾಜಿಸುತ್ತಿದೆ.

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ರೋಹಿತ್‌ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್‌ 129 ರನ್‌ಗಳ ಶತಕದಾಟದ ಮೂಲಕ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ್ದರು. ನಿನ್ನೆಯ ಪಂದ್ಯದಲ್ಲಿ ಆಂಗ್ಲರನ್ನು ಬಗ್ಗು ಬಡಿದಿದ್ದ ಕೊಹ್ಲಿ ಪಡೆ 151 ರನ್‌ಗಳ ರೋಚಕ ಗೆಲುವು ಸಾಧಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಅಂತರ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ: ಪೂಜಾರ, ರಹಾನೆ ಪರ ರಾಹುಲ್​ ಬ್ಯಾಟ್​​: ಆದಷ್ಟು ಬೇಗ ಫಾರ್ಮ್​​ ಕಂಡುಕೊಳ್ಳಲಿದ್ದಾರೆ ಎಂದ ಕನ್ನಡಿಗ

5ನೇ ಹಾಗೂ ಅಂತಿಮ ದಿನವಾದ ನಿನ್ನೆ ಪಂದ್ಯವು ರೂಟ್‌ ಪಡೆಯ ಪರವಾಗಿಯೇ ಇತ್ತು. ಆದ್ರೆ ಟೀಂ ಇಂಡಿಯಾದ ವೇಗದ ಬೌಲರ್‌ಗಳಾದ ಜಸ್ಪ್ರೀತ್‌ ಬೂಮ್ರಾ ಹಾಗೂ ಮಹಮ್ಮದ್‌ ಶಮಿ ತಮ್ಮ ಅಲ್‌ರೌಂಡರ್‌ ಆಟದ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿ ಟೀಂ ಇಂಡಿಯಾವನ್ನು ಗೆಲುವಿನ ದಡ ಮುಟ್ಟಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.