ETV Bharat / sports

ಟಿ 20 ವಿಶ್ವಕಪ್​: ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಅರ್ಧಶತಕ..ಬಾಂಗ್ಲಾಗೆ 184 ರನ್​ ಗುರಿ

ಟಿ 20 ವಿಶ್ವಕಪ್​ ಸೆಮಿಫೈನಲ್​ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 20 ಓವರ್​ಗಳಲ್ಲಿ 6 ವಿಕೆಟ್​ಗೆ 184 ರನ್​ ಗಳಿಸಿದೆ.

author img

By

Published : Nov 2, 2022, 3:23 PM IST

Updated : Nov 2, 2022, 3:43 PM IST

india-vs-bangladesh-match
ಬಾಂಗ್ಲಾದೇಶಕ್ಕೆ 184 ರನ್​ ಗುರಿ ನೀಡಿದ ಭಾರತ

ಅಡಿಲೇಡ್​(ಆಸ್ಟ್ರೇಲಿಯಾ): ಟಿ 20 ವಿಶ್ವಕಪ್​ ಸೆಮಿಫೈನಲ್​ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 20 ಓವರ್​ಗಳಲ್ಲಿ 6 ವಿಕೆಟ್​ಗೆ 184 ರನ್​ ಗಳಿಸಿದೆ. ಅಡಿಲೇಡ್​​ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಕಾದಾಟದಲ್ಲಿ ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಅರ್ಧಶತಕ ಬಲದಿಂದ ಭಾರತ ಸವಾಲಿನ ಮೊತ್ತ ದಾಖಲಿಸಿತು.

ಟೀಕೆಗೆ ಉತ್ತರಿಸಿದ ರಾಹುಲ್ ಬ್ಯಾಟ್​: ವಿಶ್ವಕಪ್​ನ ಮೊದಲ ಮೂರು ಪಂದ್ಯಗಳಲ್ಲಿ ರನ್​ ಗಳಿಸಲು ಪರದಾಡುತ್ತಿದ್ದ ಕನ್ನಡಿಗ ಕೆ ಎಲ್​ ರಾಹುಲ್​ ತೀವ್ರ ಟೀಕೆಗೆ ಗುರಿಯಾಗಿದ್ದರು. ಮುಂದಿನ ಪಂದ್ಯಗಳಿಗೆ ರಾಹುಲ್​ರನ್ನು ಕೈಬಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ಮಹತ್ವದ ಪಂದ್ಯದಲ್ಲಿ ಬ್ಯಾಟ್​ಗೆ ಬುದ್ಧಿ ಹೇಳಿದ ರಾಹುಲ್​​ ಭರ್ಜರಿ ಅರ್ಧಶತಕ ಸಿಡಿಸಿದರು.

32 ಎಸೆತಗಳಲ್ಲಿ 4 ಸಿಕ್ಸರ್​, 3 ಬೌಂಡರಿಗಳಿಂದ 50 ರನ್​ ಗಳಿಸಿದರು. ಪಂದ್ಯದಲ್ಲಿ ಸಿಡಿದ 5 ಸಿಕ್ಸ್​ಗಳಲ್ಲಿ ರಾಹುಲ್​ 4 ಸಿಕ್ಸ್​ಗಳಿವೆ. ಈ ಮೂಲಕ ತಾವು ನಿಧಾನಗತಿಯ ಬ್ಯಾಟರ್ ಅಲ್ಲ, ಟಿ20 ತಾವು ಫಿಟ್​ ಎಂಬುದನ್ನು ಸಾಬೀತು ಮಾಡಿದರು. ನಾಯಕ ರೋಹಿತ್​ ಶರ್ಮಾ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 2 ಗಳಿಸಿದ್ದಾಗ ಹಸನ್​ ಮುಹಮದ್​ಗೆ ವಿಕೆಟ್​ ನೀಡಿದರು.

ವಿರಾಟ್​ ದಾಖಲೆಯ ಅರ್ಧಶತಕ: ಇನ್ನು ಭರ್ಜರಿ ಫಾರ್ಮ್​ನಲ್ಲಿರುವ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದರು. 44 ಎಸೆತಗಳಲ್ಲಿ 8 ಬೌಂಡರಿಗಳ ಸಮೇತ 64 ರನ್​ ಸಿಡಿಸಿ ಈ ವಿಶ್ವಕಪ್​​ನಲ್ಲಿ 3ನೇ ಅರ್ಧಶತಕ ಸಿಡಿಸಿದರು.

ಚೇಸ್​ ಮಾಸ್ಟರ್​ 28 ರನ್​ ಗಳಿಸಿದಾಗ ಚುಟುಕು ಮಾದರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್ ಆಗಿ ದಾಖಲೆ ಬರೆದರು. ಶ್ರೀಲಂಕಾದ ಲೆಜೆಂಡರಿ ಬ್ಯಾಟರ್​ ಮಹೇಲಾ ಜಯವರ್ಧನೆ 1016 ಗಳಿಸಿದ್ದರು. ಇದನ್ನು ಮೀರಿಸಿದ ವಿರಾಟ್​ ಕೊಹ್ಲಿ 24 ಪಂದ್ಯಗಳಲ್ಲಿ 1053 ರನ್ ಗಳಿಸಿದರು.

ಸೂರ್ಯಕುಮಾರ್​ ಯಾದವ್​ 30 ರನ್​ ಬಾರಿಸಿದರು. ಕೊನೆಯಲ್ಲಿ ಸಿಡಿದ ಅಶ್ವಿನ್​ ತಲಾ 1 ಸಿಕ್ಸರ್​, ಬೌಂಡರಿ ಬಾರಿಸಿದರು. ಬಾಂಗ್ಲಾದೇಶದ ಪರವಾಗಿ ಹಸನ್​ ಮುಹಮದ್​ 3 ನಾಯಕ ಶಕೀಬ್​ ಅಲ್​ ಹಸನ್​ 2, ಟಸ್ಕಿನ್​ ಅಹ್ಮದ್​ ವಿಕೆಟ್​ ಪಡೆಯದಿದ್ದರೂ ಬಿಗಿ ಬೌಲಿಂಗ್​ ಪ್ರದರ್ಶನ ನೀಡಿದರು.

ಓದಿ: ಟಿ20 ವಿಶ್ವಕಪ್​ನಲ್ಲಿ ವಿರಾಟ್​ ವಿಕ್ರಮ.. ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆ ಪುಡಿ

Last Updated : Nov 2, 2022, 3:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.