ETV Bharat / sports

IND vs AUS: ನಾಲ್ವರು ಬ್ಯಾಟರ್​ಗಳ ಅರ್ಧಶತಕ... ಆಸೀಸ್​ ವಿರುದ್ಧ ಐದು ವಿಕೆಟ್​ಗಳ ಜಯ.. ರ್‍ಯಾಂಕಿಂಗ್​ನಲ್ಲಿ ಭಾರತ ನಂ.1 - ಸೂರ್ಯಕುಮಾರ್ ಯಾದವ್

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿದೆ. ನಾಲ್ವರು ಬ್ಯಾಟರ್​ಗಳ ಅರ್ಧಶತಕದಿಂದ ನೆರವಿನಿಂದ ಸುಲಭದ ಗೆಲುವು ಸಾಧಿಸಿದೆ.

India vs Australia
India vs Australia
author img

By ETV Bharat Karnataka Team

Published : Sep 22, 2023, 9:57 PM IST

Updated : Sep 22, 2023, 10:42 PM IST

ಮೊಹಾಲಿ (ಪಂಜಾಬ್): ವಿಶ್ವಕಪ್​ ತಯಾರಿ ಪಂದ್ಯದಲ್ಲಿ ಭಾರತ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಶಮಿ ಐದು ವಿಕೆಟ್​ ಪಡೆದು ಮಿಂಚಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಿದರು. ಶುಭಮನ್ ಗಿಲ್​, ರುತುರಾಜ್ ಗಾಯಕ್ವಾಡ್​, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಕೆ.ಎಲ್​ ರಾಹುಲ್​ ಅವರ ಅರ್ಧಶತಕದ ಬ್ಯಾಟಿಂಗ್​ ಬಲ ಕಾಂಗರೂ ಪಡೆ ಕೊಟ್ಟಿದ್ದ 277 ರನ್​ ಗುರಿಯನ್ನು ಸುಲಭವಾಗಿ ಮೆಟ್ಟಿ ನಿಂತಿತು. ಈ ಮೂಲಕ ಭಾರತ ಏಕದಿನ ರ್‍ಯಾಂಕಿಂಗ್​ನಲ್ಲಿ ನಂ.1 ತಂಡದ ಸ್ಥಾನವನ್ನು ಅಲಂಕರಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲು ಕಂಡು ಭಾರತಕ್ಕೆ ಬಂದಿದ್ದ ಕಾಂಗರೂ ಪಡೆಗೆ ಮೊದಲ ಸೋಲು ಎದುರಾಗಿದೆ. ಟೀಂ ಇಂಡಿಯಾ 8 ಬಾಲ್​ ಮತ್ತು 5 ವಿಕಟ್​ ಉಳಿಸಿಕೊಂಡು ಪಂದ್ಯವನ್ನು ಗೆದ್ದಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ವಾರ್ನರ್​, ಸ್ಮಿತ್​ ಮತ್ತು ಇಂಗ್ಲಿಸ್​ ಅವರ ಬ್ಯಾಟಿಂಗ್​ ಬಲದಿಂದ 276 ರನ್ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತು. ಗಿಲ್​ ಮತ್ತು ಗಾಯಕ್ವಾಡ್​ ಜೋಡಿ ಭರ್ಜರಿ ಆರಂಭ ನೀಡಿತು. ಏಷ್ಯನ್​ ಗೇಮ್ಸ್​ನ ನಾಯಕರಾಗಿರುವ ರುತುರಾಜ್​ ಭಾರತದ ಪರ ತಮ್ಮ 3ನೇ ಏಕದಿನ ಇನ್ನಿಂಗ್ಸ್​ ಆಡುತ್ತಿದ್ದರೂ ಅನುಭವಿ ಆಟಗಾರರಂತೆ ಮೈದಾನದ ತುಂಬಾ ರನ್​ ಹರಿಸಿದರು.

ಇಬ್ಬರು ಬ್ಯಾಟರ್​ಗಳು ಅರ್ಧಶತಕವನ್ನು ಪೂರೈಸಿಕೊಂಡು 16ನೇ ಓವರ್​ಗೆ ಶತಕದ ಜೊತೆಯಾಟ ಮಾಡಿದರು. ಅರ್ಧಶತ ಗಳಿಸಿ ಶತಕದತ್ತ ಮುನ್ನಡೆಯುತ್ತಿದ್ದಾಗ ಆಸಿಸ್​ ಸ್ಪಿನ್​ ಬೌಲರ್ ಆಡಮ್ ಝಂಪಾ ಎಸೆತದಲ್ಲಿ ಗಾಯಕ್ವಾಡ್​ ಎಲ್​ಬಿಡಬ್ಯೂ ಬಲೆಗೆ ಬಿದ್ದರು. 77 ಬಾಲ್​ ಎದುರಿಸಿದ ಅವರು 10 ಬೌಂಡರಿಗಳ ಸಹಾಯದಿಂದ 71 ರನ್​ ಕಲೆಹಾಕಿದರು. ಗಾಯಕ್ವಾಡ್​ ನಂತರ ಬಂದ ಶ್ರೇಯಸ್ ಅಯ್ಯರ್​ ರನ್ಔಟ್​ಗೆ ಬಲಿಯಾದರು. ಈ ಎರಡು ವಿಕೆಟ್​ ಬೆನ್ನಲ್ಲೇ 63 ಬಾಲ್​ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸ್​ನಿಂದ 74 ರನ್​ ಗಳಿಸಿ ಆಡುತ್ತಿದ್ದ ಗಿಲ್​ ಸಹ ಆಡಮ್ ಝಂಪಾ ಬಾಲ್​ಗೆ ಕ್ಲೀನ್​ ಬೌಲ್ಡ್​ ಆದರು.

ನಾಯಕ ಕೆ. ಎಲ್​. ರಾಹುಲ್​ ಮತ್ತು ಕಿಶಾನ್​ ಕಿಶನ್​ ಎಡ - ಬಲ ಬ್ಯಾಟಿಂಗ್​ ಹೊಂದಾಣಿಕೆಯೊಂದಿಗೆ 34 ರನ್​ನ ಜೊತೆಯಾಟ ಮಾಡಿದರು. ಆದರೆ, 26 ಬಾಲ್​ನಲ್ಲಿ 18 ರನ್​ ಗಳಿಸಿದ್ದ ಕಿಶನ್​ ಔಟಾದರು. ಟಿ20 ಕ್ರಿಕೆಟ್​ನ ನಂ.1 ಬ್ಯಾಟರ್​ ಸೂರ್ಯಕುನಮಾರ್​ ಯಾದವ್​ ಇಂದು ಏಕದಿನ ಕ್ರಿಕೆಟ್​ನಲ್ಲಿ ತಮ್ಮ ವೈಫಲ್ಯವನ್ನು ಮೀರಿ ಬ್ಯಾಟಿಂಗ್​ ಮಾಡಿದರು. ತಮ್ಮ 25ನೇ ಇನ್ನಿಂಗ್ಸ್​ನಲ್ಲಿ 2ನೇ ಅರ್ಧ ಶತಕವನ್ನು ದಾಖಲಿಸಿದರು. ಇಂದಿನ ಇನ್ನಿಂಗ್ಸ್​ನಲ್ಲಿ 49 ಬಾಲ್​ ಎದುರಿಸಿ 50 ರನ್ ಕಲೆಹಾಕಿದರು. ಗೆಲುವಿಗೆ 15 ರನ್​ ಬಾಕಿ ಇದ್ದಾಗ ಸೂರ್ಯ ಕುಮಾರ್​ ಯಾದವ್​ ವಿಕೆಟ್​ ಕೊಟ್ಟರು. ಕೊನೆಯಲ್ಲಿ ರವೀಂದ್ರ ಜಡೇಜಾ ಮತ್ತು ನಾಯಕ ರಾಹುಲ್​ 8 ಬಾಲ್​ ಉಳಿಸಿಕೊಂಡು ತಂಡಕ್ಕೆ 5 ವಿಕೆಟ್​ಗಳ ಜಯ ತಂದಿತ್ತರು.

ಮೂರು ಮಾದರಿಯಲ್ಲಿ ಭಾರತ ನಂ.1: ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯವನ್ನು ಗೆದ್ದ ಭಾರತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ಈಗಾಗಲೇ ಭಾರತ ಟಿ20 ಮತ್ತು ಟೆಸ್ಟ್​ನಲ್ಲಿ ನಂ.1 ರ್‍ಯಾಂಕಿಂಗ್​ ತಂಡವಾಗಿದೆ. ಧೋನಿ ನಾಯಕತ್ವದಲ್ಲಿ ಭಾರತ ಅಗ್ರಸ್ಥಾನಕ್ಕೇರಿತ್ತು ಈಗ ಮತ್ತೆ ಮೂರು ಮಾದರಿಯಲ್ಲಿ ಟಾಪ್​ ಟೀಮ್​ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ: U19 Cricket World Cup 2024: 19 ವರ್ಷದೊಳಗಿನ ವಿಶ್ವಕಪ್​ನಲ್ಲಿ 16 ತಂಡಗಳ ನಡುವೆ ಸ್ಪರ್ಧೆ..

Last Updated : Sep 22, 2023, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.