ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4 ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕದನದ ಭವಿಷ್ಯ ಬರೆಯುವ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಕ್ಷಿಯಾಗಿದ್ದಾರೆ. ಉಭಯ ಪ್ರಧಾನಿಗಳು ಟೆಸ್ಟ್ ಪಂದ್ಯ ವೀಕ್ಷಿಸುತ್ತಿದ್ದು ನಿರೀಕ್ಷೆ ಹೆಚ್ಚಿಸಿದೆ.
ಪಂದ್ಯದ ಟಾಸ್ಗೂ ಮೊದಲು ಪ್ರಧಾನಿಗಳು ಉಭಯ ನಾಯಕರಿಗೆ ವಿಶೇಷ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು ನಾಯಕ ರೋಹಿತ್ ಶರ್ಮಾರಿಗೆ ಕ್ಯಾಪ್ ನೀಡಿದರೆ, ಆಸೀಸ್ ನಾಯಕ ಸ್ಟೀವನ್ ಸ್ಮಿತ್ರಿಗೆ ಅಲ್ಬನೀಸ್ ಅವರು ಬ್ಯಾಗಿ ಗ್ರೀನ್ ಕ್ಯಾಪ್ ಕೊಟ್ಟರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 75 ವರ್ಷಗಳ ಸ್ನೇಹವನ್ನು ಇದೇ ವೇಳೆ ಆಚರಿಸಲಾಯಿತು.
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ವಾಗತಿಸಿದರು. ಬಳಿಕ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರಿಗೆ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಮೈದಾನದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಉಭಯ ತಂಡದ ನಾಯಕರಿಗೆ ಪ್ರಧಾನಿಗಳು ವಿಶೇಷ ಟೆಸ್ಟ್ ಕ್ಯಾಪ್ ನೀಡಿದರು. ನಂತರ ನಾಲ್ವರೂ ಸ್ನೇಹದ ಸಂಕೇತವಾಗಿ ಕೈ ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.
-
The Honourable Prime Minister of India, Shri Narendra Modiji and The Honourable Prime Minister of Australia, Mr Anthony Albanese have arrived at the stadium! @narendramodi | @PMOIndia | @AlboMP | #TeamIndia | #INDvAUS | @mastercardindia pic.twitter.com/5bijT2ENJ5
— BCCI (@BCCI) March 9, 2023 " class="align-text-top noRightClick twitterSection" data="
">The Honourable Prime Minister of India, Shri Narendra Modiji and The Honourable Prime Minister of Australia, Mr Anthony Albanese have arrived at the stadium! @narendramodi | @PMOIndia | @AlboMP | #TeamIndia | #INDvAUS | @mastercardindia pic.twitter.com/5bijT2ENJ5
— BCCI (@BCCI) March 9, 2023The Honourable Prime Minister of India, Shri Narendra Modiji and The Honourable Prime Minister of Australia, Mr Anthony Albanese have arrived at the stadium! @narendramodi | @PMOIndia | @AlboMP | #TeamIndia | #INDvAUS | @mastercardindia pic.twitter.com/5bijT2ENJ5
— BCCI (@BCCI) March 9, 2023
ಮೈದಾನದಲ್ಲಿ ಪ್ರಧಾನಿಗಳ ರೌಂಡ್: ಇದಾದ ಬಳಿಕ ವಿಶೇಷವಾಗಿ ತಯಾರಿಸಲಾಗಿದ್ದ ರಥದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಪ್ರೇಕ್ಷಕರತ್ತ ಕೈಬೀಸುತ್ತಾ ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಂಗಣದೊಳಗೆ ವಿಶೇಷವಾಗಿ ನಿರ್ಮಿಸಲಾದ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ 75 ವರ್ಷಗಳ ಕ್ರಿಕೆಟ್ ಬಾಂಧವ್ಯವನ್ನು ಸೂಚಿಸುವ, ಅವಿಸ್ಮರಣೀಯ ಕ್ಷಣಗಳನ್ನೊಳಗೊಂಡ ಚಿತ್ರಗಳನ್ನು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಪ್ರಧಾನಿಗಳಿಗೆ ಪರಿಚಯಿಸಿದರು.
ಪಂದ್ಯ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್ ಮೈದಾನ ಪ್ರವೇಶಿಸಿ ಆಟಗಾರರ ಜತೆ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡುವ ಮೂಲಕ ಪಂದ್ಯಕ್ಕೆ ಅಧಿಕೃತ ಚಾಲನೆ ನೀಡಿದರು. ಆಟಗಾರರಿಗೆ ಹಸ್ತಲಾಘವ ನೀಡಿ ಶುಭ ಕೋರಿದರು.
-
The Honourable Prime Minister of India, Shri Narendra Modiji presents the special cap to #TeamIndia captain @ImRo45 while The Honourable Prime Minister of Australia, Mr Anthony Albanese presents the cap to Australia captain Steve Smith.@narendramodi | @PMOIndia | #INDvAUS pic.twitter.com/8RH70LOx0v
— BCCI (@BCCI) March 9, 2023 3" class="align-text-top noRightClick twitterSection" data="
3">The Honourable Prime Minister of India, Shri Narendra Modiji presents the special cap to #TeamIndia captain @ImRo45 while The Honourable Prime Minister of Australia, Mr Anthony Albanese presents the cap to Australia captain Steve Smith.@narendramodi | @PMOIndia | #INDvAUS pic.twitter.com/8RH70LOx0v
— BCCI (@BCCI) March 9, 2023
3The Honourable Prime Minister of India, Shri Narendra Modiji presents the special cap to #TeamIndia captain @ImRo45 while The Honourable Prime Minister of Australia, Mr Anthony Albanese presents the cap to Australia captain Steve Smith.@narendramodi | @PMOIndia | #INDvAUS pic.twitter.com/8RH70LOx0v
— BCCI (@BCCI) March 9, 2023
4 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಆಸೀಸ್ ಪ್ರಧಾನಿ ಆಂಥೋನಿ ಆಲ್ಬನೀಸ್‌ಗೆ, ಅಹಮದಾಬಾದ್ ಟೆಸ್ಟ್ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಅವರು ಆಹ್ವಾನಿಸಿದ್ದರು. ಕೆಲಕಾಲ ಪಂದ್ಯ ವೀಕ್ಷಿಸಿದ ಬಳಿಕ ಅವರು ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.
ಟೆಸ್ಟ್ "ಫೈನಲ್" ಪಂದ್ಯ: ಇನ್ನು ಇಲ್ಲಿ ಸಾಗಿರುವ ಟೆಸ್ಟ್ ಪಂದ್ಯವು ಭಾರತಕ್ಕೆ ಮಹತ್ವದ್ದಾಗಿದೆ. ಟೆಸ್ಟ್ ವಿಶ್ವಚಾಂಪಿಯನ್ಶಿಪ್ಗೆ ನೇರವಾಗಿ ಪ್ರವೇಶ ಪಡೆಯಲು ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಸರಣಿಯಲ್ಲಿ ಈಗಾಗಲೇ ಮೊದಲೆರಡು ಪಂದ್ಯ ಗೆದ್ದಿರುವ ಆತಿಥೇಯರು ಮೂರನೇ ಪಂದ್ಯವನ್ನು ಕೈಚೆಲ್ಲಿದ್ದರು. ಆಸೀಸ್ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ 2-2 ರಲ್ಲಿ ಸರಣಿ ಸಮಬಲ ಸಾಧಿಸಲು ಹೋರಾಡಲಿದೆ.
ಭಾರತ ತಂಡದಲ್ಲಿ ಒಂದು ಬದಲಾವಣೆ: ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೊಹಮದ್ ಸಿರಾಜ್ ಬದಲಾಗಿ ಮೊಹಮದ್ ಶಮಿಗೆ ಸ್ಥಾನ ನೀಡಲಾಗಿದೆ. ಆಡುವ ಹನ್ನೊಂದರ ಪಟ್ಟಿಯಿಂದ ಸಿರಾಜ್ ಕೈಬಿಡಲಾಗಿದೆ. ಪಿಚ್ ಸ್ಪಿನ್ ಜೊತೆಗೆ ವೇಗಿಗಳಿಗೂ ನೆರವು ನೀಡುವ ಕಾರಣ ಶಮಿಯನ್ನು ಮರುಸೇರ್ಪಡೆ ಮಾಡಿಕೊಳ್ಳಲಾಗಿದೆ.
ತಂಡಗಳು ಇಂತಿವೆ: ಭಾರತ- ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.
ಆಸ್ಟ್ರೇಲಿಯಾ- ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್.
ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್: ಪಂದ್ಯ ವೀಕ್ಷಿಸಲಿರುವ ಮೋದಿ, ಆಸ್ಟ್ರೇಲಿಯಾ ಪ್ರಧಾನಿ