ETV Bharat / sports

IND vs AUS: ಗಿಲ್​, ಅಯ್ಯರ್ ಶತಕ.. ರಾಹುಲ್​, ಸೂರ್ಯ ಅರ್ಧ ಶತಕ.. ಆಸ್ಟ್ರೇಲಿಯಾಕ್ಕೆ 400 ರನ್​ನ ಬೃಹತ್​ ಗುರಿ - Ishan Kishan

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ 400 ರನ್​ನ ಬೃಹತ್ ಗುರಿಯನ್ನು ನೀಡಿದೆ.

India vs Australia 2nd ODI Score update
India vs Australia 2nd ODI Score update
author img

By ETV Bharat Karnataka Team

Published : Sep 24, 2023, 3:14 PM IST

Updated : Sep 24, 2023, 6:39 PM IST

ಇಂದೋರ್​​ (ಮಧ್ಯಪ್ರದೇಶ): ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್​ಗಳು ಘರ್ಜಿಸಿದ್ದಾರೆ. ಶುಭಮನ್​ ಗಿಲ್​, ಶ್ರೇಯಸ್ ಅಯ್ಯರ್​ ಶತಕ ಗಳಿಸಿದರೆ, ನಾಯಕ ಕೆಎಲ್​ ರಾಹುಲ್​ ಮತ್ತು ಸೂರ್ಯಕುಮಾರ್​ ಯಾದವ್ ಅರ್ಧಶತಕ ಗಳಿಸಿದರು. ನಾಲ್ವರ ಭರ್ಜರಿ ಬ್ಯಾಟಿಂಗ್​ ಬಲದಿಂದ ಭಾರತ ನಿಗದಿತ ಓವರ್​ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 399 ರನ್​ ಕಲೆಹಾಕಿದೆ. ಸರಣಿಯನ್ನು ಜೀವಂತ ಉಳಿಸಿಕೊಳ್ಳಲು ಕಾಂಗರೂ ಪಡೆ 400 ರನ್​ ಗಳಿಸುವ ಅವಶ್ಯಕತೆ ಇದೆ.

ಎರಡನೇ ಪಂದ್ಯದ ಟಾಸ್​ ಗೆದ್ದ ಆಸ್ಟ್ರೇಲಿಯಾ ಫಿಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಇದರಿಂದ ಮೊದಲು ಬ್ಯಾಟಿಂಗ್​ಗೆ ಬಂದ ಭಾರತಕ್ಕೆ ಜೋಶ್ ಹ್ಯಾಜಲ್ವುಡ್ ಆರಂಭಿಕ ಆಘಾತ ನೀಡಿದರು. ಮೊದಲ ಪಂದ್ಯದಲ್ಲಿ 71 ರನ್​ನ ಅದ್ಭುತ ಇನ್ನಿಂಗ್ಸ್​ ಆಡಿದ್ದ ರುತುರಾಜ್ ಗಾಯಕ್ವಾಡ್ ಇಂದು 8 ರನ್​ಗೆ ವಿಕೆಟ್​ ಕೊಟ್ಟರು. ಆದರೆ ಎರಡನೇ ವಿಕೆಟ್​ಗೆ ಒಂದಾದ ಗಿಲ್ ಮತ್ತು ಅಯ್ಯರ್ ವಿಕೆಟ್​ ನಷ್ಟವಾದರೂ ರನ್​ ವೇಗವನ್ನು ಕುಸಿಯದಂತೆ ಜೊತೆಯಾಟ ಆಡಿದರು.

ಇಂದೋರ್​ನ ಹೋಳ್ಕರ್​ ಮೈದಾನವನ್ನು ಬ್ಯಾಟರ್​ಗಳ ಸ್ವರ್ಗ ಎಂದು ಕರೆಯಲಾಗುತ್ತದೆ. ಅದರಂತೆ ಭಾರತೀಯ ಬ್ಯಾಟರ್​ಗಳು ಬೌಂಡರಿ ಸಿಕ್ಸರ್​ಗಳ ಮೂಲಕ ರನ್​ ಹೊಳೆಯೇ ಹರಿಸಿದರೆ, ಆಸಿಸ್​ ಬೌಲರ್​ಗಳಿ ವಿಕೆಟ್​ ಪಡೆಯಲು ಮತ್ತು ರನ್​ಗೆ ಕಡಿವಾಣ ಹಾಕಲು ಹೆಣಗಾಡ ಬೇಕಾಯಿತು. ಗಿಲ್​ ಮತ್ತು ಅಯ್ಯರ್​ ಬ್ಯಾಟಿಂಗ್​ ವಿಶ್ವಕಪ್​ಗೂ ಮುನ್ನ ಭಾರತದ ಬ್ಯಾಟಿಂಗ್​ ಬಗ್ಗೆ ಇದ್ದ ಗೊಂದಲವನ್ನು ಪರಿಹರಿಸಿತು. ಅಯ್ಯರ್​ ಕಮ್​ಬ್ಯಾಕ್ ಇದ್ದ ಪ್ರಶ್ನೆಗಳಿಗೆ ಬಹುತೇಕ ಉತ್ತರ ಸಿಕ್ಕಿದೆ.

200 ರನ್​ನ ಜೊತೆಯಾಟ: ಅಯ್ಯರ್​ ಮತ್ತು ಗಿಲ್​ ಜೋಡಿ ಎರಡನೇ ವಿಕೆಟ್​ಗೆ ದ್ವಿಶತಕದ ಜೊತೆಯಾಟ ಮಾಡಿದರು. ಅಯ್ಯರ್​ 90 ಬಾಲ್​ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸ್​ನಿಂದ 105 ರನ್​ ಗಳಿಸಿದರು. ಇದು ಅವರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನ 3ನೇ ಶತಕವಾಗಿದೆ. ಇನ್ನು ಗಿಲ್​ 97 ಬಾಲ್​ ಆಡಿ 6 ಬೌಂಡರಿ ಮತ್ತು 4 ಸಿಕ್ಸ್​​​ನಿಂದ 104 ರನ್​ ಗಳಿಸಿ ವಿಕೆಟ್​ ಕೊಟ್ಟರು. ಗಿಲ್​ ಈ ವರ್ಷದ 5ನೇ ಶತಕವನ್ನು ದಾಖಲಿಸಿದರು.

ರಾಹುಲ್​, ಸೂರ್ಯ ಅರ್ಧಶತಕ: ಇಶಾನ್​ ಕಿಶನ್​ ಪಿಚ್​ ಬರುತ್ತಿದ್ದಂತೆ ಅಬ್ಬರಿಸಲು ಆರಂಭಿಸಿದರು. ನಾಯಕ ರಾಹುಲ್​ ಸಹ ಕಿಶನ್​ಗೆ ಸಾಥ್​​ ಕೊಟ್ಟರು. 18 ಬಾಲ್​ನಲ್ಲಿ 2 ಸಿಕ್ಸ್​ ಮತ್ತು 2 ಬೌಂಡರಿಯಿಂದ 31 ರನ್​ ಗಳಿಸಿ ಘರ್ಜಿಸುತ್ತಿದ್ದ ಕಿಶನ್​ ಝಾಂಪಾ ಬೌಲಿಂಗ್​ಗೆ ಬಲಿಯಾದರು. ನಂತರ ಸೂರ್ಯ ಮತ್ತು ರಾಹುಲ್​ ತಮ್ಮ ಜೊತೆಯಾಟವನ್ನು ಮುಂದುವರೆಸಿದರು. ಈ ಜೋಡಿ 50 ರನ್​ನ ಪಾಲುದಾರಿಕೆಯನ್ನು ಮಾಡಿತು.

ನಾಯಕತ್ವದ ಜವಾಬ್ದಾರಿಯ ಜೊತೆಗೆ ರಾಹುಲ್​ ಅರ್ಧಶತಕದ ಇನ್ನಿಂಗ್ಸ್​ ಕಟ್ಟಿದರು. ದ್ವಿಶತಕದ ರನ್​ನ ಬಲ ತಂಡಕ್ಕೆ ಈಗಾಗಲೇ ಇದ್ದಿದ್ದರಿಂದ ಹೆಚ್ಚು ಫ್ರೀ ಪ್ಲೋನಲ್ಲೇ ಬ್ಯಾಟ್​ ಬೀಸಿದರು. 38 ಬಾಲ್​ ಎದುರಿಸಿದ ರಾಹುಲ್​ 3 ಸಿಕ್ಸ್​ ಮತ್ತು 3 ಬೌಂಡರಿಯ ಸಹಾಯದಿಂದ 52 ರನ್​ ಗಳಿಸಿ ವಿಕೆಟ್​ ಕೊಟ್ಟರು. ಸೂರ್ಯಕುಮಾರ್​ ಯಾದವ್ ತಮ್ಮ ಟಿ20ಯ 360 ಬ್ಯಾಟಿಂಗ್​ ಶೈಲಿಯನ್ನು ಇಲ್ಲಿಯೂ ತಂದರು. ಬೌಲರ್​​​ ಯಾರೆಂದು ನೋಡದೇ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಾಡಿದರು.

ರಾಹುಲ್​ ವಿಕೆಟ್​ ಪತನದ ನಂತರ ಜಡೇಜ ಜೊತೆ ಇನ್ನಿಂಗ್ಸ್​ ಕಟ್ಟಿದ ಸೂರ್ಯ ತಮ್ಮ ಏಕದಿನ ಕ್ರಿಕೆಟ್​ನ ನಾಲ್ಕನೇ ಅರ್ಧಶತವನ್ನು ಪೂರೈಸಿಕೊಂಡರು. ಪಂದ್ಯದಲ್ಲಿ ಅಜೇಯವಾಗಿ ಉಳಿದ ಸ್ಕೈ 37 ಬಾಲ್​ನಲ್ಲಿ 6 ಬೌಂಡರಿ ಮತ್ತು 6 ಸಿಕ್ಸ್​ನಿಂದ 72 ರನ್​ ಕಲೆ ಹಾಕಿದರು. ಅವರ ಜೊತೆ ಜಡೇಜ 9 ಬಾಲ್​ನಲ್ಲಿ 13 ರನ್​ ಗಳಿಸಿ ಕ್ರೀಸ್​ನಲ್ಲಿದ್ದರು. ಈ ಬೃಹತ್​ ಬ್ಯಾಟಿಂಗ್​ ಬಲದಿಂದ ಭಾರತ ಕಾಂಗರೂ ಪಡೆಗೆ 400 ರನ್​ನ ಗುರಿಯನ್ನು ನೀಡಿತು.

ಆಸ್ಟ್ರೇಲಿಯಾ ಪರ ಕ್ಯಾಮರಾನ್​ ಗ್ರೀನ್​ ಎರಡು ವಿಕೆಟ್​ ತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಗ್ರೀನ್​ 10 ಓವರ್​ನಲ್ಲಿ 103 ರನ್​ ಬಿಟ್ಟು ಕೊಟ್ಟರು. ಸೀನ್​ ಅಬಾಟ್​ 1 ವಿಕೆಟ್ ಪಡೆದು 91 ರನ್​, ಸ್ಪಿನ್ನರ್​ ಝಾಂಪಾ 1 ವಿಕೆಟ್​ ಜೊತೆಗೆ 67 ರನ್​ ಕೊಟ್ಟು ದುಬಾರಿಯಾದರು.

ಇದನ್ನೂ ಓದಿ: IND vs AUS 2nd ODI: ಐದನೇ ಸೋಲಿನಿಂದ ಬಚಾವ್​ ಆಗುತ್ತಾ ಆಸಿಸ್?​.. ಸರಣಿ ವಶಕ್ಕೆ ರಾಹುಲ್​ ಚಿಂತನೆ.. ಫಾರ್ಮ್​ ಕಂಡುಕೊಳ್ಳಬೇಕಿದೆ ಅಯ್ಯರ್, ಅಶ್ವಿನ್

Last Updated : Sep 24, 2023, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.