ETV Bharat / sports

ಟೀಕೆಗಳಿಗೆ ಬ್ಯಾಟ್​ನಿಂದಲೇ ಉತ್ತರ ನೀಡಿದ ಕನ್ನಡಿಗ: ರಾಹುಲ್​ ಬ್ಯಾಟಿಂಗ್​ಗೆ ಈಗ ಪ್ರಶಂಸೆ - India vs Australia 1st ODI KL Rahul batting

ನಿನ್ನೆ ನಡೆಸ ಪ್ರಥಮ ಏಕದಿನ ಪಂದ್ಯದ ವೇಳೆ ಭಾರತ ಸಂಕಷ್ಟದಲ್ಲಿದ್ದಾಗ ರಾಹುಲ್​ ವಿಕೆಟ್​ ಕಾದು ಗೆಲುವು ತಂದಿದ್ದು, ಈಗ ಪ್ರಶಂಸೆಗೆ ಕಾರಣವಾಗಿದೆ.

India vs Australia 1st ODI  KL Rahul batting
ಟೀಕೆಗಳಿಗೆ ಬ್ಯಾಟ್​ನಿಂದಲೇ ಉತ್ತರ ನೀಡಿದ ಕನ್ನಡಿಗ
author img

By

Published : Mar 18, 2023, 5:55 PM IST

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಆಸ್ಟ್ರೇಲಿಯಾ ನೀಡಿದ 188 ರನ್‌ಗಳ ಗುರಿಯನ್ನು ಭಾರತ 39.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 191 ರನ್ ಗಳಿಸಿ ಸಾಧಿಸಿತು. ಈ ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಒಮ್ಮೆ ಭಾರತದ ಸ್ಥಿತಿ ಸಂಕಷ್ಟದಲ್ಲಿತ್ತು. ಭಾರತ ಕೇವಲ 39 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಭಾರತಕ್ಕೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಆಸರೆಯಾದರು. ರಾಹುಲ್ ಅರ್ಧಶತಕ ಬಾರಿಸಿ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ ತಂದುಕೊಟ್ಟರು.

ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರಿಸಿದ ರಾಹುಲ್​: ಭಾರತದ ಸ್ಟೈಲಿಶ್ ಬಲಗೈ ಬ್ಯಾಟರ್​, ವಿಕೆಟ್ ಕೀಪರ್ ಕೆಎಲ್ ರಾಹುಲ್ 91 ಎಸೆತಗಳನ್ನು ಎದುರಿಸಿ ಅಜೇಯರಾಗಿ 75 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನಿನ್ನೆ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 7 ಬೌಂಡರಿ ಮತ್ತು 1 ಸಿಕ್ಸರ್ ಗಳಿಸಿದರು. ರಾಹುಲ್ ತಮ್ಮ ಇನ್ನಿಂಗ್ಸ್‌ನಿಂದ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿದ್ದಲ್ಲದೇ, ತಮ್ಮ ಟೀಕಾಕಾರರಿಗೆ ಬ್ಯಾಟ್‌ನಿಂದ ತಕ್ಕ ಉತ್ತರವನ್ನೂ ನೀಡಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತೀಯ ತಂಡದ ಭಾಗವಾಗಿದ್ದರು.

ನಾಗ್ಪುರ ಟೆಸ್ಟ್ ಮತ್ತು ದೆಹಲಿ ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರ ನಂತರ ಅನೇಕ ಅನುಭವಿಗಳು ಮತ್ತು ಹಿರಿಯ ಆಟಗಾರರು ರಾಹುಲ್​ ಬ್ಯಾಟಿಂಗ್​ ಬಗ್ಗೆ ಟೀಕೆಗಳನ್ನು ಮಾಡಲು ಆರಂಭಿಸಿದರು. ರಾಹುಲ್​ಗೆ ತಂಡದಲ್ಲಿ ಮತ್ತೆ ಮತ್ತೆ ಸ್ಥಾನ ಕೊಡಲಾಗುತ್ತಿದೆ ಎಂಡು ಟೀಕೆಗಳು ಬಂದಿದ್ದವು. ಎರಡನೇ ಟೆಸ್ಟ್​ ನಂತರ ರಾಹುಲ್​ ಅವರನ್ನು ಉಪನಾಯಕನ ಸ್ಥಾನವನ್ನು ಕಳೆದುಕೊಂಡಿದ್ದರು.

ನಾಯಕ ರೋಹಿತ್ ಶರ್ಮಾ ರಾಹುಲ್ ಅವರನ್ನು ಸಮರ್ಥಿಸಿ, ಅವರು ಚಾಂಪಿಯನ್ ಆಟಗಾರ ಎಂದು ಹೇಳಿದ್ದಾರೆ. ಇದೀಗ ಕೆಎಲ್ ರಾಹುಲ್ ಈ ಇನ್ನಿಂಗ್ಸ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದು, ಬ್ಯಾಡ್​ ಫಾರ್ಮ್ ನಿಂದ ಹೊರಬಂದು ಬ್ಯಾಟ್ ನಿಂದ ಅದ್ಭುತ ಪ್ರದರ್ಶನ ನೀಡಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ರವೀಂದ್ರ ಜಡೇಜಾ ಜೊತೆ ಶತಕದ ಜೊತೆಯಾಟ: ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ರವೀಂದ್ರ ಜಡೇಜಾ (45*) ಅವರೊಂದಿಗೆ 108 ರನ್‌ಗಳ ಮಹತ್ವದ ಜೊತೆಯಾಟವನ್ನು ಮಾಡಿದ್ದಾರೆ. ಇವರಿಬ್ಬರ ಈ ಜೊತೆಯಾಟ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿತ್ತು. ಸೋಲಿನ ಸುಳಿಯಲ್ಲಿದ್ದ ಭಾರತಕ್ಕೆ ರಾಹುಲ್​ ಬಲವಾಗಿ ನಿಂತು ವಿಕೆಟ್​ ಕಾದರು. ಅವರ ಜೊತೆಗೂಡಿದ ಆಲ್​ರೌಂಡರ್​ ಜಡೇಜ ಸಹ ವಿನ್ನಿಂಗ್​ ಇನ್ನಿಂಗ್ಸ್​ ಕಟ್ಟಿದರು.

ಒಟ್ಟಿನಲ್ಲಿ ಭಾರತಕ್ಕೆ ರಾಹುಲ್​ ಬ್ಯಾಟಿಂಗ್​ ಆಸರೆಯಾಗಿದ್ದು ನಾಳೆ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಪಂದ್ಯಕ್ಕೆ ನಾಯಕ ರೋಹಿತ್​ ಶರ್ಮಾ ಮರಳಲಿದ್ದು, ತಂಡ ಆರಂಭಿಕರಲ್ಲಿ ಯಾರು ಬೆಂಚ್​ ಕಾಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮಾರ್ಚ್​ 26 ರಂದು ಗೇಲ್​, ಎಬಿ ಡಿವಿಲಿಯರ್ಸ್​ಗೆ ಹಾಲ್​ ಆಫ್​ ಫೇಮ್​ ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.