ಇಂದೋರ್: ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (68, 34 ಬಾಲ್) ಹಾಗೂ ಆಲ್ರೌಂಡರ್ ಶಿವಂ ದುಬೆ (ಅಜೇಯ 63, 32 ಎಸೆತ) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎರಡನೇ ಟಿ20 ಪಂದ್ಯವನ್ನೂ 6 ವಿಕೆಟ್ಗಳಿಂದ ಗೆದ್ದ ಭಾರತ ತಂಡ ಅಫ್ಘಾನಿಸ್ತಾನದ ವಿರುದ್ಧ 2-0ದಿಂದ ಸರಣಿ ಜಯಿಸಿದೆ. ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘನ್ನರು 20 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದ್ದರು.
173 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಕ್ರೀಸ್ಗಿಳಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. 16 ಬಾಲ್ಗಳಲ್ಲಿ 29 ರನ್ ಬಾರಿಸಿ ವಿರಾಟ್ ಔಟಾದರು. ಇನ್ನೊಂದು ತುದಿಯಲ್ಲಿ ಅಮೋಘ ಆಟ ತೋರಿದ ಜೈಸ್ವಾಲ್, ವಿರಾಟ್ ಜೊತೆಗೂಡಿ 57 ರನ್ ಸೇರಿಸಿದರು. ಆಗ ತಂಡದ ಮೊತ್ತ 5.3 ಓವರ್ಗಳಲ್ಲಿ 62 ರನ್ ಆಗಿತ್ತು.
-
For his bowling figures of 2/17, Axar Patel is adjudged Player of the Match as #TeamIndia win the 2nd T20I by 6 wickets.
— BCCI (@BCCI) January 14, 2024 " class="align-text-top noRightClick twitterSection" data="
Scorecard - https://t.co/CWSAhSZc45 #INDvAFG@IDFCFIRSTBank pic.twitter.com/ectnmGEfN7
">For his bowling figures of 2/17, Axar Patel is adjudged Player of the Match as #TeamIndia win the 2nd T20I by 6 wickets.
— BCCI (@BCCI) January 14, 2024
Scorecard - https://t.co/CWSAhSZc45 #INDvAFG@IDFCFIRSTBank pic.twitter.com/ectnmGEfN7For his bowling figures of 2/17, Axar Patel is adjudged Player of the Match as #TeamIndia win the 2nd T20I by 6 wickets.
— BCCI (@BCCI) January 14, 2024
Scorecard - https://t.co/CWSAhSZc45 #INDvAFG@IDFCFIRSTBank pic.twitter.com/ectnmGEfN7
ಕೊಹ್ಲಿ ವಿಕೆಟ್ ಪತನದ ಬಳಿಕ ಯಶಸ್ವಿ ಜೊತೆಗೂಡಿದ ಶಿವಂ ದುಬೆ ಅಫ್ಘನ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. ಈ ಜೋಡಿ, ಮೂರನೇ ವಿಕೆಟ್ಗೆ 92 ರನ್ ಸೇರಿಸಿತಲ್ಲದೆ, ತಂಡವನ್ನು ಸುಲಭ ಜಯದತ್ತ ಕೊಂಡೊಯ್ದಿತು. ಮೊಹಮದ್ ನಬಿ ಓವರ್ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ ದುಬೆ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಜೈಸ್ವಾಲ್ ಔಟಾದ ಬಳಿಕ ಬಂದ ಜಿತೇಶ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ತದನಂತರ ರಿಂಕು ಸಿಂಗ್ ಅಜೇಯ 9 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 15.4 ಓವರ್ಗಳಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ ತಂಡ ಗೆಲುವಿನ ಕೇಕೆ ಹಾಕಿತಲ್ಲದೆ, ಸರಣಿ ಜಯಿಸಿದೆ.
ಅಫ್ಘಾನಿಸ್ತಾನಕ್ಕೆ ಗುಲ್ಬದಿನ್ ಅರ್ಧಶತಕದ ಬಲ: ಮೊದಲು ಬ್ಯಾಟಿಂಗ್ಗಿಳಿದ ಅಫ್ಘಾನಿಸ್ತಾನ ತಂಡ ಮೊದಲೆರಡು ಓವರ್ಗಳಲ್ಲಿ 20 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು. ಈ ವೇಳೆ 14 ರನ್ ಗಳಿಸಿದ ಆರಂಭಿಕ ಆಟಗಾರ ಗುರ್ಬಾಜ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಗುಲ್ಬದಿನ್ ಆಕ್ರಮಣಕಾರಿ ಆಟ ಪ್ರದರ್ಶಿಸಿ, ತಂಡದ ಮೊತ್ತವನ್ನು ಹಿಗ್ಗಿಸಿದರಲ್ಲದೆ, ಅರ್ಧಶತಕ (57 ರನ್, 35 ಎಸೆತ) ಬಾರಿಸಿ ಮಿಂಚಿದರು. ಮತ್ತೊಂದೆಡೆ ನಾಯಕ ಇಬ್ರಾಹಿಂ ಜದ್ರನ್ 10 ಎಸೆತಗಳಲ್ಲಿ ಕೇವಲ 8 ರನ್ ಬಾರಿಸಿ ಔಟಾದರು.
ಅರ್ಧಶತಕ ಬಾರಿಸಿ ಆಡುತ್ತಿದ್ದ ಗುಲ್ಬದಿನ್ ಕೂಡ 57 ರನ್ಗಳಿಗೆ ಪೆವಿಲಿಯನ್ಗೆ ಮರಳಿದರು. ಬಳಿಕ ಅಜ್ಮತುಲ್ಲಾ (2), ಅನುಭವಿ ಆಟಗಾರ ಮೊಹಮದ್ ನಬಿ (14) ಬೇಗ ಔಟಾಗುವ ಮೂಲಕ 104 ರನ್ಗಳಿಗೆ ಅಫ್ಘಾನಿಸ್ತಾನ ತಂಡದ 5 ವಿಕೆಟ್ ಉರುಳಿದ್ದವು. ಆದರೆ ಬಳಿಕ ಬಂದ ಬ್ಯಾಟರ್ಗಳು ಭಾರತದ ಬೌಲರ್ಗಳನ್ನು ದಂಡಿಸಿದರು.
ನಜಿಬುಲ್ಲಾ (23, 21 ಬಾಲ್), ಕರಿಮ್ ಜನತ್ (20 ರನ್ 10 ಎಸೆತ) ಹಾಗೂ ಮುಜೀಬ್ (21 ರನ್, 9 ಎಸೆತ) ವೇಗವಾಗಿ ರನ್ ಸಿಡಿಸಿ, ತಂಡದ ಉತ್ತಮ ಮೊತ್ತಕ್ಕೆ ನೆರವಾದರು. ಅಂತಿಮವಾಗಿ ಅಫ್ಘನ್ನರು 20 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿದ್ದರು. ಭಾರತದ ಪರ ವೇಗಿ ಅರ್ಶದೀಪ್ ಸಿಂಗ್ 3, ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಣೋಯಿ 2 ಹಾಗೂ ಆಲ್ರೌಂಡರ್ ಶಿವಂ ದುಬೆ ಒಂದು ವಿಕೆಟ್ ಕಬಳಿಸಿದ್ದರು. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಜನವರಿ 17 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಇದನ್ನೂ ಓದಿ: ಮಲೇಷ್ಯಾ ಓಪನ್: ಭಾರತದ ಸಾತ್ವಿಕ್ ಚಿರಾಗ್ ಜೋಡಿ ರನ್ನರ್ಅಪ್