ಗಯಾನ: ಅಂಡರ್ 19 ವಿಶ್ವಕಪ್ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಸತತ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ U19 ತಂಡ 49.2 ಓವರ್ಗಳಲ್ಲಿ 268 ರನ್ಗಳಿಸಿತ್ತು. ನಾಯಕ ಕೂಪರ್ ಕಾನೊಲಿ 125 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 117, ತಬಿಯಸ್ ಸ್ನೆಲ್ 35 ಹಾಗು ವಿಲಿಯಂ ಸಾಲ್ಜ್‌ಮನ್ 25 ರನ್ಗಳಿಸಿದರು.
ಭಾರತದ ಪರ ರವಿಕುಮಾರ್ 4, ರಾಜವರ್ಧನ್ 3, ರಾಜಹ್ ಬಾವಾ, ಕೌಶಾಲ್ ಮತ್ತು ನಿಶಾಂತ್ ಸಿಂಧು ತಲಾ ಒಂದು ವಿಕೆಟ್ ಪಡೆದರು.
269 ರನ್ ಗುರಿ ಬೆನ್ನಟ್ಟಿದ ಭಾರತ 47.3 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಹರ್ನೂರ್ ಸಿಂಗ್ 108 ಎಸೆತಗಳಲ್ಲಿ 100 ಮತ್ತು ಶೇಕ್ ರಶೀದ್ 72 ರನ್ಗಳಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಲು ನಿವೃತ್ತಿ ತೆಗೆದುಕೊಂಡರು. ನಾಯಕ ಯಶ್ ಧುಲ್ 47 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು ಅಜೇಯ 50 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಜನವರಿ 14 ರಿಂದ ವಿಶ್ವಕಪ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಜನವರಿ 15ರಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
4 ಬಾರಿ ಚಾಂಪಿಯನ್, 3 ಬಾರಿ ರನ್ನರ್ ಅಪ್ ಆಗಿರುವ ಭಾರತ ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:ಹರಿಣಗಳ ನಾಡಿನಲ್ಲಿ ಕೋಚ್ ದ್ರಾವಿಡ್ ದಾಖಲೆ ಮುರಿದ ಕ್ಯಾಪ್ಟನ್ ಕೊಹ್ಲಿ