ಸಿಡ್ನಿ: ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದ ಫೀಲ್ಡಿಂಗ್ ವೇಳೆ ತೊಡೆಸಂದು ಸಮಸ್ಯೆಯಿಂದಾಗಿ ಮೈದಾನದಿಂದ ಹೊರ ನಡೆದಿದ್ದ ಡೇವಿಡ್ ವಾರ್ನರ್ ಈಗ ಮುಂದಿನ ಏಕದಿನ ಪಂದ್ಯ ಹಾಗೂ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಹಾಗೆಯೇ ಟಿ-20 ಸರಣಿಯಿಂದ ವೇಗಿ ಪ್ಯಾಟ್ ಕಮಿನ್ಸ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.
-
JUST IN: The latest on David Warner's injury and another change to Australia's white-ball squad.@samuelfez | #AUSvIND https://t.co/CjsHskyvC4 pic.twitter.com/Hh9yCotAKu
— cricket.com.au (@cricketcomau) November 30, 2020 " class="align-text-top noRightClick twitterSection" data="
">JUST IN: The latest on David Warner's injury and another change to Australia's white-ball squad.@samuelfez | #AUSvIND https://t.co/CjsHskyvC4 pic.twitter.com/Hh9yCotAKu
— cricket.com.au (@cricketcomau) November 30, 2020JUST IN: The latest on David Warner's injury and another change to Australia's white-ball squad.@samuelfez | #AUSvIND https://t.co/CjsHskyvC4 pic.twitter.com/Hh9yCotAKu
— cricket.com.au (@cricketcomau) November 30, 2020
ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ತೊಡೆಸಂದು ಗಾಯದಿಂದಾಗಿ ಡೇವಿಡ್ ವಾರ್ನರ್ ಮೈದಾನದಿಂದ ಹೊರ ನಡೆದಿದ್ದರು. ಭಾರತದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಶಿಖರ್ ಧವನ್ ಚೆಂಡನ್ನು ಮಿಡ್ - ಆಫ್ ಕಡೆಗೆ ಹೊಡೆದರು. ಅಲ್ಲೇ ಇದ್ದ ವಾರ್ನರ್ ಚೆಂಡನ್ನು ತಡೆಯಲು ಡೈವ್ ಮಾಡಿದ್ರು, ಈ ವೇಳೆ, ತೊಡೆಸಂದು ನೋವಿಗೆ ತುತ್ತಾಗಿದ್ದಾರು. ಕೂಡಲೇ ಮೈದಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾದ ಫಿಸಿಯೋ, ವಾರ್ನರ್ ಅವರನ್ನು ಕರೆದೊಯ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ಏಕದಿನ ಪಂದ್ಯ ಹಾಗೂ ಟಿ -20 ಸರಣಿಯಿಂದ ವಾರ್ನರ್ ಅವರನ್ನ ಕೈ ಬಿಡಲಾಗಿದೆ ಎಂದು ತಿಳಿಸಿದೆ.
ಓದಿ:ಸಿಡ್ನಿಯಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಪಾಂಡ್ಯ ತೋರಿಸಿದ್ದಾರೆ : ಸೋಲಿನ ಬಳಿಕ ವಿರಾಟ್ ಪ್ರತಿಕ್ರಿಯೆ
ಸೋಮವಾರ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಅಧಿಕೃತ ಪ್ರಕಟಣೆ ತಿಳಿಸಿದ್ದು, ಡೇವಿಡ್ ವಾರ್ನರ್ ಬದಲಿಗೆ ಡಾರ್ಸಿ ಶಾರ್ಟ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸತತ ಕ್ರಿಕೆಟ್ ನಿಂದ ಬಳಲಿರುವ ಪ್ಯಾಟ್ ಕಮಿನ್ಸ್ ಗೆ ವಿಶ್ರಾಂತಿ ನೀಡಲಾಗಿದೆ. ವಾರ್ನರ್ ಮತ್ತು ಕಮಿನ್ಸ್ ಇಬ್ಬರೂ ಟೆಸ್ಟ್ ಸರಣಿಗೆ ಲಭ್ಯವಾಗಲಿದ್ದಾರೆ ಎಂದು ತಿಳಿಸಿದೆ.