ETV Bharat / sports

ವರ್ಷದ ಬಳಿಕ ಮತ್ತೆ ಕಾಮೆಂಟರಿ ಪ್ಯಾನೆಲ್​ನಲ್ಲಿ ಕಾಣಿಸಿಕೊಳ್ಳಲಿರುವ ಸಂಜಯ್ ಮಂಜ್ರೇಕರ್!

author img

By

Published : Nov 7, 2020, 11:32 PM IST

2019ರ ವಿಶ್ವಕಪ್‌ ವೇಳೆ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರಿಂದ ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತು ಹಾಕಲಾಗಿತ್ತು. ಸುಮಾರು ದಿನಗಳ ಬಳಿಕ 55 ವರ್ಷದ ಮಂಜ್ರೇಕರ್ ಈಗ ಮತ್ತೆ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

Sanjay Manjrekar to return as commentator for India's tour of Australia
ಸಂಜಯ್ ಮಂಜ್ರೇಕರ್ (ಸಂಗ್ರಹ ಚಿತ್ರ)

ನವದೆಹಲಿ: ಹರಿತ ಮಾತು ಮತ್ತು ಕಡ್ಡಿ ತುಂಡು ಮಾಡಿದಂತೆ ನೇರವಾಗಿ ಮಾತನಾಡಬಲ್ಲ ಕೆಲವೇ ಕೆಲವು ಕಾಮೆಂಟೇಟರ್​​ಗಳಲ್ಲಿ ಒಬ್ಬರಾದ ಭಾರತದ ಮಾಜಿ ಬ್ಯಾಟ್ಸ್‌ಮನ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಮತ್ತೆ ಕಾಮೆಂಟರಿಗೆ ಬರಲಿದ್ದಾರೆ.

ಈ ತಿಂಗಳು ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಮಂಜ್ರೇಕರ್, ಮತ್ತೆ ಟಿವಿ ಕಾಮೆಂಟರಿ ಪ್ಯಾನೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ತಾನು ಮತ್ತೆ ಕಾಮೆಂಟರಿಗೆ ಮರಳುತ್ತಿರುವುದನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲಿರುವ ಭಾರತ ತಂಡ ಅಲ್ಲಿ ನವೆಂಬರ್ 27ರಿಂದ ಜನವರಿ 19ರ ವರೆಗೆ 3 ಏಕದಿನ ಪಂದ್ಯ, 3 ಟಿ-20ಐ ಪಂದ್ಯ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ. 55 ವರ್ಷದ ಮಂಜ್ರೇಕರ್ ಈ ಸರಣಿಯ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೋನಿ ಪಿಕ್ಟರ್ ನೆಟ್ವರ್ಕ್ಸ್ ಭಾರತ-ಆಸ್ಟ್ರೇಲಿಯಾ ಸರಣಿಯ ಪಂದ್ಯಗಳನ್ನು ನೇರಪ್ರಸಾರಗೊಳಿಸಲಿದೆ.

2019ರ ವಿಶ್ವಕಪ್‌ ವೇಳೆ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರಿಂದ ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತು ಹಾಕಲಾಗಿತ್ತು. ಈಗ ಮತ್ತೆ ಕಾಮೆಂಟರಿ ಪ್ಯಾನೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನವೆಂಬರ್ 27 ರಿಂದ ಡಿಸೆಂಬರ್ 2ರ ವರೆಗೆ ಮೂರು ಏಕದಿನ ಪಂದ್ಯಗಳು, ಡಿಸೆಂಬರ್ 4 ರಿಂದ 8ರ ವರೆಗೆ ಮೂರು ಟಿ-20 ಐ ಸರಣಿ, ಡಿಸೆಂಬರ್ 17 ರಿಂದ 2021ರ ಜನವರಿ 19ರ ವರೆಗೆ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.