ETV Bharat / sports

ಆಸೀಸ್ ವಿರುದ್ಧ ಬಿರುಸಿನ ಬ್ಯಾಟಿಂಗ್: ನೂತನ ದಾಖಲೆ ಬರೆದ ರಿಷಭ್ ಪಂತ್ - ನೂತನ ದಾಖಲೆ ಬರೆದ ರಿಷಭ್ ಪಂತ್

ಆಸೀಸ್ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸಿ ರಿಷಭ್ ಪಂತ್ ನಾಲ್ಕನೇ ಇನ್ನಿಂಗ್ಸ್​ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ.

Pant youngest wicket-keeper to score 50 plus runs in 4th innings in Australia
ನೂತನ ದಾಖಲೆ ಬರೆದ ರಿಷಭ್ ಪಂತ್
author img

By

Published : Jan 11, 2021, 10:15 AM IST

ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​ ಮ್ಯಾಚ್​ ಒಂದರ ನಾಲ್ಕನೇ ಇನ್ನಿಂಗ್ಸ್​ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಅತಿ ಕಿರಿಯ ವಯಸ್ಸಿನ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಪಂತ್ ಈ ಸಾಧನೆ ಮಾಡಿದ್ದಾರೆ. ನಾಯಕ ಅಜಿಂಕ್ಯ ರಹಾನೆ ಬೇಗನೆ ನಿರ್ಗಮಿಸಿದ ನಂತರ ಬ್ಯಾಟಿಂಗ್​ಗೆ ಇಳಿದ ಪಂತ್, ಬಿರುಸಿನ ಬ್ಯಾಟಿಂಗ್ ನಡೆಸಿ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ರು. 118 ಎಸೆತಗಳಲ್ಲಿ 97 ರನ್ ಸಿಡಿಸಿದ ಪಂತ್ ನಾಥನ್ ಲಿಯಾನ್​ಗೆ ವಿಕೆಟ್ ಒಪ್ಪಿಸಿದ್ರು.

ಉತ್ತಮವಾಗಿ ಬ್ಯಾಟ್ ಬೀಸಿದ ಪಂತ್ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್​ ಪಂದ್ಯದ ನಾಲ್ಕನೇ ಇನ್ನಿಂಗ್ಸ್​ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ (23 ವರ್ಷ ಮತ್ತು 95 ದಿನಗಳು) ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ (24 ವರ್ಷ 216 ದಿನಗಳು) ಈ ಸಾಧನೆ ಮಾಡಿದ್ರು.

ಸದ್ಯ ಚಹಾ ವಿರಾಮದ ವೇಳೆಗೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿದೆ. ವಿಹಾರಿ 7 ಮತ್ತು ಅಶ್ವಿನ್ 4 ರನ್​ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸಲು 127 ರನ್ ಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.