ಬ್ರಿಸ್ಬೇನ್: ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ವಶಪಡಿಸಿಕೊಂಡಿದೆ. ಆದರೆ, ಈ ಕ್ರೀಡಾಂಗಣದಲ್ಲಿ ಸೋಲನುಭವಿಸಿದ ಆಸೀಸ್ಗೆ ಸಂಬಂಧಿಸಿದ 4 ವಿಶೇಷ ಮಾಹಿತಿಯನ್ನು ಐಸಿಸಿ ಹಂಚಿಕೊಂಡಿದೆ.
ವಿಶೇಷ ಮಾಹಿತಿ ಇಂತಿದೆ...
ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿದ್ದು ಯಾವಾಗ ಗೊತ್ತಾ?
- ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಎಚ್.ಡಬ್ಲ್ಯು.ಬುಷ್ ಆಗ ತಾನೆ ಗೆಲುವು ಸಾಧಿಸಿದ್ದರು.
- ಜಾನ್ ಬೋವಿ ಅವರ ಬ್ಯಾಡ್ ಮೆಡಿಸಿನ್ ಎಂಬ ಹಾಡು ಜನಪ್ರಿಯಗೊಂಡಿದ್ದ ಸಂದರ್ಭ.
- ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜನಿಸಿ 16 ದಿನಗಳಾಗಿತ್ತು.
- ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಲು ಇನ್ನೂ ಒಂದು ವರ್ಷ ಬಾಕಿ ಇತ್ತು.
-
Last time Australia lost a Gabba Test...
— ICC (@ICC) January 19, 2021 " class="align-text-top noRightClick twitterSection" data="
🇺🇸 George H.W. Bush had just won the US Presidential election
🎶 Bad Medicine by Bon Jovi was charting #1
👶 Virat Kohli was 16 days old
🏏 Sachin Tendulkar was still one year away from making his Test debut pic.twitter.com/87DmsDXDqo
">Last time Australia lost a Gabba Test...
— ICC (@ICC) January 19, 2021
🇺🇸 George H.W. Bush had just won the US Presidential election
🎶 Bad Medicine by Bon Jovi was charting #1
👶 Virat Kohli was 16 days old
🏏 Sachin Tendulkar was still one year away from making his Test debut pic.twitter.com/87DmsDXDqoLast time Australia lost a Gabba Test...
— ICC (@ICC) January 19, 2021
🇺🇸 George H.W. Bush had just won the US Presidential election
🎶 Bad Medicine by Bon Jovi was charting #1
👶 Virat Kohli was 16 days old
🏏 Sachin Tendulkar was still one year away from making his Test debut pic.twitter.com/87DmsDXDqo
-
ಅಂದರೆ 32 ವರ್ಷ 2 ತಿಂಗಳ ನಂತರ ಆ ಮೈದಾನದಲ್ಲಿ ಆಸೀಸ್ ಸೋಲು ಅನುಭವಿಸಿದೆ. ಈ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ 55 ಪಂದ್ಯಗಳನ್ನಾಡಿದ್ದು 33 ಜಯ, 13 ಡ್ರಾ, ಒಂದು ಟೈ ಹಾಗೂ 8 ಪಂದ್ಯಗಳಲ್ಲಿ ಸೋಲು ಕಂಡಿದೆ.
1988ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸೀಸ್ ಕೊನೆಯ ಸೋಲು ಅನುಭವಿಸಿದೆ. ಅಲ್ಲಿಂದೀಚೆಗೆ ಸೋಲೆನ್ನುವುದು ಆಸೀಸ್ ಬಳಗದ ಮುಂದೆ ಮಂಡಿಯೂರಿಯೇ ಕುಳಿತಿದ್ದ ದಾಖಲೆಯನ್ನು ಭಾರತ ಮುರಿದಿದೆ.