ETV Bharat / sports

ಸೋಲಿನ ಅವಮಾನದಿಂದ ಪಾರಾಗಲು ಭಾರತಕ್ಕೆ ಉತ್ತಮ ಅವಕಾಶ: ಮಾರ್ಕ್​ ಟೇಲರ್​ - ಪಿಂಕ್​​ ಬಾಲ್​ ಟೆಸ್ಟ್

ಶನಿವಾರ ನಡೆಯಲಿರುವ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದರೆ ಭಾರತ ತಂಡ ಸೋಲಿನ ಅಪಮಾನದಿಂದ ಪಾರಾಗಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್​ ಟೇಲರ್ ಹೇಳಿದ್ದಾರೆ.

Mark Taylor
ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್​ ಟೇಲರ್
author img

By

Published : Dec 25, 2020, 9:59 PM IST

ಮೆಲ್ಬೋರ್ನ್​​: ಅಡಿಲೇಡ್​​​ನಲ್ಲಿ ನಡೆದ ಪಿಂಕ್​​ ಬಾಲ್​ ಟೆಸ್ಟ್​​​ ಸೋಲಿನ ಅವಮಾನದಿಂದ ಪಾರಾಗಲು ಭಾರತ ತಂಡಕ್ಕೆ ಬಾಕ್ಸಿಂಗ್​​ ಡೇ ಟೆಸ್ಟ್ ಉತ್ತಮ ಅವಕಾಶ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿ ಹೊಳೆ ಹರಿಸಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್​ ಟೇಲರ್​ ಹೇಳಿದರು.

ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್​​ಗಳ ಜಯ ಸಾಧಿಸಿತ್ತು. ಅಲ್ಲದೇ, ಭಾರತ ತಮ್ಮ 2ನೇ ಇನ್ನಿಂಗ್ಸ್​​​​ನಲ್ಲಿ ಅತಿ ಕಡಿಮೆ (36 ರನ್)​ ರನ್ ಗಳಿಸುವ ಮೂಲಕ ಕೆಟ್ಟ ದಾಖಲೆ ಬರೆಯಿತು.

ಇದನ್ನೂ ಓದಿ...ತಂಡದಲ್ಲಿ ಬದಲಾವಣೆ: ಪುಟಿದೇಳುತ್ತಾ ಭಾರತ, ಸರಣಿ ಮೇಲೆ ಹಿಡಿತ ಸಾಧಿಸುತ್ತಾ ಆಸ್ಟ್ರೇಲಿಯಾ?

ವಿರಾಟ್​ ಕೊಹ್ಲಿ ಅನುಪಸ್ಥಿತಿ ತಂಡಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಆದರೆ, ರಹಾನೆ, ಚೇತೇಶ್ವರ ಪೂಜಾರ ಇನ್ನೂ ಇದ್ದಾರೆ. ಅವರಿಬ್ಬರು ಗೋಡೆಗಳಂತೆ ವಿಕೆಟ್​​ಗಳನ್ನು ತಡೆಯಬಲ್ಲರು. ಹೆಚ್ಚು ರನ್​​ ಪೇರಿಸಬಲ್ಲರು. ಅದಲ್ಲದೇ, ಆರಂಭಿಕರು ಅಷ್ಟೇ ಪ್ರಬಲ ಸಾಮರ್ಥ್ಯ ತೋರಲಿದ್ದಾರೆ ಎಂದು ಹೇಳಿದರು.

ಬ್ಯಾಟಿಂಗ್​ ಮಾತ್ರವಲ್ಲ ಬೌಲಿಂಗ್​​ ದಾಳಿಯೂ ಪರಿಣಾಮಕಾರಿಯಾಗಿದೆ. ತಂಡದಲ್ಲಿ ಬೌಲರ್​​ಗಳು​ 10 ವಿಕೆಟ್​ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಂದೆಡೆ ಹೆಚ್ಚು ರನ್​ ಗಳಿಸುವವರಿದ್ದರೆ, ಮತ್ತೊಂದೆಡೆ ಎಲ್ಲ ವಿಕೆಟ್​​ಗಳನ್ನು ಗಳಿಸುವ ಬೌಲರ್​​ಗಳಿದ್ದಾರೆ. ಹೀಗಾಗಿ, ಸೋಲಿನ ಅಪಮಾನದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಇದಕ್ಕಿಂತ ಉತ್ತಮ ಅವಕಾಶ ಬೇಕೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.