ಅಡಿಲೇಡ್ : ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಅಹರ್ನಿಶಿ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯಂತ ಕಳಪೆ ಆಟವಾಡಿದೆ. ಕೇವಲ 36 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ರನ್ಗೆ ಆಲೌಟ್ ಆದ ಅಪಕೀರ್ತಿಗೆ ಭಾರತೀಯ ತಂಡ ಪಾತ್ರವಾಗಿದೆ.
-
Innings Break!
— BCCI (@BCCI) December 19, 2020 " class="align-text-top noRightClick twitterSection" data="
India 36/9 with Shami being retired hurt. Australia need 90 runs to win the 1st Test.
Scorecard - https://t.co/dBLRRBSJrx #AUSvIND pic.twitter.com/vUhxILlWQ0
">Innings Break!
— BCCI (@BCCI) December 19, 2020
India 36/9 with Shami being retired hurt. Australia need 90 runs to win the 1st Test.
Scorecard - https://t.co/dBLRRBSJrx #AUSvIND pic.twitter.com/vUhxILlWQ0Innings Break!
— BCCI (@BCCI) December 19, 2020
India 36/9 with Shami being retired hurt. Australia need 90 runs to win the 1st Test.
Scorecard - https://t.co/dBLRRBSJrx #AUSvIND pic.twitter.com/vUhxILlWQ0
ಕಾಂಗರೂ ಬೌಲರ್ಗಳ ಭೀಕರ ಬೌಲಿಂಗ್ ದಾಳಿಗೆ ಭಾರತದ ಬ್ಯಾಟ್ಸ್ಮನ್ಗಳು ಹೈರಾಣಾಗಿದ್ದಾರೆ. ಅದ್ಭುತ ಪ್ರದರ್ಶನ ತೋರಿದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್ 4 ವಿಕೆಟ್ ಪಡೆದು ಮಿಂಚಿದರೆ, ಹೆಜಲವುಡ್ 5 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಇನ್ನಿಲ್ಲದಂತೆ ಕಾಡಿದರು.
ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್ಮನ್ ಕೂಡಾ ಎರಡಂಕಿ ರನ್ ಕಲೆ ಹಾಕಲಿಲ್ಲ. ಓಪನರ್ ಆಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಅಗರವಾಲ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪೃಥ್ವಿ ಶಾ ಕೇವಲ 4 ರನ್ಗಳಿಗೆ ಔಟಾದರೆ, ಮಯಾಂಕ್ 9 ರನ್ಗಳಿಸಿದರು.
ಇನ್ನುಳಿದಂತೆ, ಬುಮ್ರಾ 2, ಪೂಜಾರಾ 0, ಕೊಹ್ಲಿ 4, ರಹಾನೆ 0, ವಿಹಾರಿ 8, ಸಹಾ 4, ಅಶ್ವಿನ್ 0 , ಯಾದವ್ , ಶಮಿ 1 ರನ್ಗಳಿಸಿದರು.
ಓದಿ: ಮುಂದುವರೆದ ಪೃಥ್ವಿ ಫ್ಲಾಪ್ ಶೋ; ಶಾ ಗೆ ಶಾಕ್ ನೀಡುತ್ತಾ ಬಿಸಿಸಿಐ?
1974ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 42 ರನ್ಗಳಿಗೆ ಆಲೌಟ್ ಆಗಿತ್ತು. ಇದು ಭಾರತ ತಂಡದ ಈವರೆಗಿನ ಅತ್ಯಂತ ಕಳಪೆ ಪ್ರದರ್ಶನ ಆಗಿತ್ತು. ಈಗ 46 ವರ್ಷಗಳ ನಂತರ ಭಾರತ ತಂಡ ಇಷ್ಟು ಕಡಿಮೆ ರನ್ಗೆ ಆಲೌಟ್ ಆಗುವ ಮೂಲಕ ಕಳಪೆ ದಾಖಲೆ ಬರೆದಿದೆ.